ಬೆಂಗಳೂರು | ಚಲಿಸುತ್ತಿದ್ದ ಕಾರಿನ ಮೇಲೆ ಮೆಟ್ರೋ ಸ್ಟೇಷನ್ ಮೇಲಿಂದ ಬಿದ್ದ ಕಬ್ಬಿಣ ತುಂಡು

ಬೆಂಗಳೂರು, ಫೆ.25: ಮೆಟ್ರೋ ಸ್ಟೇಷನ್ ಮೇಲಿಂದ ಬಿದ್ದ ಕಬ್ಬಿಣ ತುಂಡೊಂದು ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ರಿತೇಶ್ ಎಂಬವರು ಕಾರಿನಲ್ಲಿ ಸಂಚರಿಸುತ್ತಿದ್ದ ವೇಳೆ ಸ್ಯಾಂಡಲ್ ಸೋಫ್ ಪ್ಯಾಕ್ಟರಿ ಮೇಟ್ರೋ ಸ್ಟೇಷನ್ ಕೆಳ ಭಾಗದಲ್ಲಿ ಈ ಅವಘಡ ಸಂಭವಿಸಿದೆ. ಕಬ್ಬಿಣದ ತುಂಡು ಬಿದ್ದ ರಭಸಕ್ಕೆ ಕಾರಿನ ಬ್ಯಾನೆಟ್ ಹಾಗೂ ಗಾಜು ಜಖಂಗೊಂಡಿದೆ. ಅದೃಷ್ಟವಶಾತ್ ರಿತೇಶ್ ಅಪಾಯಗಳಿಲ್ಲದೆ ಪಾರಾಗಿದ್ದಾರೆ.
ಈ ಬಗ್ಗೆ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಗೆ ದೂರು ನೀಡಿರುವ ರಿತೇಶ್ ಮೇಟ್ರೋ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.






.jpeg)
.jpeg)
.jpeg)

