ಕೇಂದ್ರ ಸಚಿವರ ಬೆಂಗಾವಲು ಪಡೆಗೆ ಬಂಗಾಳದಲ್ಲಿ ಕಲ್ಲೆಸೆತ: ಅಶ್ರುವಾಯು ಸಿಡಿಸಿದ ಪೊಲೀಸರು

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕೂಚ್ ಬೆಹಾರ್‌ಗೆ ತೆರಳಿದ್ದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿಸಿತ್ ಪ್ರಮಾಣಿಕ್ ಅವರ ಬೆಂಗಾವಲು ವಾಹನದ ಮೇಲೆ ಕಲ್ಲುಗಳನ್ನು ಎಸೆದ ಘಟನೆ ವರದಿಯಾಗಿದೆ. ತೃಣಮೂಲ ಕಾಂಗ್ರೆಸ್ ಬೆಂಬಲಿಗರು ದಾಳಿಯ ನೇತೃತ್ವ ವಹಿಸಿದ್ದರು ಎಂದು ಪ್ರಮಾಣಿಕ್ ಆರೋಪಿಸಿದ್ದಾರೆ. ಕೇಂದ್ರ ಸಚಿವರ ಎಸ್ ಯುವಿ ಕಾರಿನ ವಿಂಡ್ ಶೀಲ್ಡ್ ಗೆ ಘಟನೆಯಿಂದ ಹಾನಿಯಾಗಿದೆ.
ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಸಿಡಿಸಬೇಕಾಯಿತು. ‘ಸಚಿವರೊಬ್ಬರು ಸುರಕ್ಷಿತವಾಗಿಲ್ಲದಿದ್ದರೆ ಜನಸಾಮಾನ್ಯರ ಪಾಡು ಊಹಿಸಬಹುದು. ಈ ಘಟನೆಯು ಬಂಗಾಳದ ಪ್ರಜಾಪ್ರಭುತ್ವದ ಸ್ಥಿತಿಯನ್ನು ತೋರಿಸುತ್ತದೆ’ ಎಂದು ಕೇಂದ್ರ ಸಚಿವರು ಹೇಳಿದರು.
ದಾಳಿ ನಡೆದಾಗ ಕೇಂದ್ರ ಸಚಿವರು ಬಿಜೆಪಿಯ ಸ್ಥಳೀಯ ಕಚೇರಿಗೆ ತೆರಳುತ್ತಿದ್ದರು.
ಸ್ಥಳೀಯ ವರದಿಗಳ ಪ್ರಕಾರ, ಬುಡಕಟ್ಟು ಜನಾಂಗದವರ ಹತ್ಯೆಯ ಬಗ್ಗೆ ಪ್ರಮಾಣಿಕ್ ಜನಾಕ್ರೋಶವಿದೆ ಎಂದು ಹೇಳಲಾಗುತ್ತಿದೆ. ತೃಣಮೂಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಇತ್ತೀಚೆಗೆ ಕೂಚ್ ಬೆಹಾರ್‌ನಲ್ಲಿ ನಡೆದ ರ್ಯಾಲಿಯಲ್ಲಿ ʼಹತ್ಯೆಯ ನಂತರ ಬುಡಕಟ್ಟು ಜನಾಂಗದವರ ಕಳವಳವನ್ನುಆಲಿಸಲು ಕೇಂದ್ರ ಸಚಿವರು ಸಾಕಷ್ಟು ಕೆಲಸ ಮಾಡಿಲ್ಲ ಎಂದು ಆರೋಪಿಸಿ ಪ್ರಮಾಣಿಕ್ ಅವರನ್ನು ಗುರಿಯಾಗಿಸಿಕೊಂಡಿದ್ದರು.
ಪ್ರಮಾಣಿಕ್ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ತೃಣಮೂಲ ಕಾಂಗ್ರೆಸ್ ಇತ್ತೀಚೆಗೆ ಘೋಷಿಸಿತ್ತು.
#Watch: MoS, Home Affairs Nishith Pramanik’s convoy reportedly attacked in Dinhata, Coochbehar today. While the car has suffered some damages, the minister escaped unhurt. Thereafter, clashes broke out between TMC-BJP workers. Police fired tear gas to control the situation. pic.twitter.com/XQOzeZnQNO
— Pooja Mehta (@pooja_news) February 25, 2023







