ಪಿ.ಎ. ಫಾರ್ಮಸಿ ಹಾಗೂ ಪಾಲಿಟೆಕ್ನಿಕ್ ಕಾಲೇಜು ಪದವಿ ದಿನಾಚರಣೆ
ಪರಿಶ್ರಮ, ಸಮಯದ ಸದ್ಭಳಕೆಯಿಂದ ಯಶಸ್ಸು ಸಾಧ್ಯ: ಸುನಿಲ್ ಅತ್ತಾವರ

ಕೊಣಾಜೆ: ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಅವಕಾಶಗಳೊಂದಿಗೆ ಅನೇಕ ಸವಾಲುಗಳೂ ಇವೆ. ಕೌಶಲದೊಂದಿಗೆ ಸಮಯದ ಪರಿಪಾಲನೆ, ಸದ್ಬಳಕೆಯ ಮಹತ್ವವನ್ನು ಅರಿತುಕೊಂಡು ಯಶಸ್ಸಿನ ಕಡೆಗೆ ಮುನ್ನಡೆಯಬೇಕು ಎಂದು ಬೆಂಗಳೂರಿನ ಗ್ರೂಪ್ ಫಾರ್ಮೆಸಿಯುಟಿಕಲ್ಸ್ ನ ಅಧ್ಯಕ್ಷ ಸುನಿಲ್ ಅತ್ತಾವರ ಹೇಳಿದರು .
ಅವರು ಗುರುವಾರ ಪಿ.ಎ. ಕಾಲೇಜಿನ ಫಾರ್ಮಸಿ ಮತ್ತು ಪಾಲಿಟೆಕ್ನಿಕ್ ವಿಭಾಗದ ಪದವಿ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಜೀವನದಲ್ಲಿ ಕಷ್ಟಗಳು ಶಾಶ್ವತವಲ್ಲ. ಆದರೆ ಒಳ್ಳೆಯ ದಿನಗಳಿಗಾಗಿ ಪರಿಶ್ರಮವೂ ಅಗತ್ಯ. ಜೀವನದ ಉದ್ದೇಶದ ಈಡೇರಿಕೆಗಾಗಿ ಕೌಶಲ್ಯ, ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪಿ.ಎ. ಎಜ್ಯುಕೇಶನ್ ಟ್ರಸ್ಟ್ ನ ಮ್ಯಾನೆಂಜಿಂಗ್ ಡೈರೆಕ್ಟರ್ ಅಬ್ದುಲ್ಲಾ ಇಬ್ರಾಹಿಂ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, "ನಾವು ಕಲಿತ ಪದವಿಯು ನಮ್ಮ ಜೀವನವನ್ನು ಉತ್ತಮ ಜೀವನದತ್ತ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ವಿದ್ಯಾರ್ಜನೆಯೊಂದಿಗೆ ನೈತಿಕತೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ನಾವು ಸಮಾಜಕ್ಕೆ ಕೊಡುಗೆ ಕೊಡುವಂತಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಜೆನರಿಕ್ ಫಾರ್ಮುಲೇಶನ್ ಬೈಯಕಾನ್ ಫಾರ್ಮಾ ಲಿಮಿಟೆಡ್ ನ ಜನರಲ್ ಮ್ಯಾನೇಜರ್ ಡಾ.ಎಸ್. ಮಹೇಶ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉತ್ತಮ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಸಮಾರಂಭದಲ್ಲಿ ಪಿ.ಎ.ಸಿ.ಪಿ.ಯ ಪ್ರಾಂಶುಪಾಲ ಡಾ.ಸಲೀಮುಲ್ಲಾ ಖಾನ್, ಪಿ.ಎ.ಪಿ.ಟಿಯ ಪ್ರಾಂಶುಪಾಲ ಪ್ರೊ.ಕೆ.ಪಿ.ಸೂಫಿ, ಕ್ಯಾಂಪಸ್ ಎಜಿಎಂ ಸರ್ಫುದ್ದೀನ್ ಸಿ.ಕೆ. ವಿವಿದ ವಿಭಾಗಗಳ ಡಾ.ಸಯ್ಯದ್ ಅಮೀನ್ ಅಹಮ್ಮದ್, ಅಹ್ಮದ್ ಕುಟ್ಟಿ ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.
ಪ್ರಾಂಶುಪಾಲರಾದ ಡಾ.ಸಲೀಮುಲ್ಲಾ ಖಾನ್ ಸ್ವಾಗತಿಸಿದರು. ಉಪಪ್ರಾಂಶುಪಾಲ ಇಸ್ಮಾಯಿಲ್ ಖಾನ್ ವಂದಿಸಿದರು. ಪಿ.ಎ. ಕಾಲೇಜಿನ ಅಜಿತ್ ಹಾಗೂ ಧನ್ಯ ಕಾರ್ಯಕ್ರಮ ನಿರೂಪಿಸಿದರು.