Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಸರಕಾರದ ಪ್ರಸಾರ ಭಾರತಿ ಈಗ ಸುದ್ದಿಗಾಗಿ...

ಸರಕಾರದ ಪ್ರಸಾರ ಭಾರತಿ ಈಗ ಸುದ್ದಿಗಾಗಿ ಆರೆಸ್ಸೆಸ್ ಬೆಂಬಲಿತ 'ಹಿಂದುಸ್ಥಾನ ಸಮಾಚಾರ'ವನ್ನು ಅವಲಂಬಿಸಲಿದೆ: ವರದಿ

25 Feb 2023 6:40 PM IST
share
ಸರಕಾರದ ಪ್ರಸಾರ ಭಾರತಿ ಈಗ ಸುದ್ದಿಗಾಗಿ ಆರೆಸ್ಸೆಸ್ ಬೆಂಬಲಿತ ಹಿಂದುಸ್ಥಾನ ಸಮಾಚಾರವನ್ನು ಅವಲಂಬಿಸಲಿದೆ: ವರದಿ

ಹೊಸದಿಲ್ಲಿ,: ಸರಕಾರಿ ಸ್ವಾಮ್ಯದ ಪ್ರಸಾರ ಭಾರತಿಯು ಈಗ ತನ್ನ ದೈನಂದಿನ ಸುದ್ದಿ ಮಾಹಿತಿಗಳ ಪೂರೈಕೆಗಾಗಿ ಆರೆಸ್ಸೆಸ್ ಬೆಂಬಲಿತ ಸುದ್ದಿಸಂಸ್ಥೆ ‘ಹಿಂದುಸ್ಥಾನ ಸಮಾಚಾರ’ವನ್ನೇ ಸಂಪೂರ್ಣವಾಗಿ ಅವಲಂಬಿಸಲಿದೆ. ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೊವನ್ನು ನಡೆಸುತ್ತಿರುವ ಪ್ರಸಾರ ಭಾರತಿಯು ದೇಶದ ಅತ್ಯಂತ ದೊಡ್ಡ ವೃತ್ತಿಪರ ಸುದ್ದಿಸಂಸ್ಥೆಯಾಗಿರುವ PTI ಜೊತೆ ತನ್ನ ಚಂದಾದಾರಿಕೆಯನ್ನು 2020ರಲ್ಲಿ ರದ್ದುಗೊಳಿಸಿದ ಬಳಿಕ 'ಹಿಂದುಸ್ಥಾನ ಸಮಾಚಾರ' ಜೊತೆ ವಿಶೇಷ ಒಪ್ಪಂದವನ್ನು ಮಾಡಿಕೊಂಡಿದೆ ಎಂದು thewire.in ವರದಿ ಮಾಡಿದೆ.

ಹಿಂದುಸ್ಥಾನ ಸಮಾಚಾರ 2017ರಿಂದಲೂ ‘ಮೌಲ್ಯಮಾಪನದ ಆಧಾರ’ದಲ್ಲಿ ತನ್ನ ವೈರ್ ಸೇವೆಗಳನ್ನು ಪ್ರಸಾರ ಭಾರತಿಗೆ ಉಚಿತವಾಗಿ ಒದಗಿಸುತ್ತಿದೆ. ಆದರೆ,ಇವೆರಡೂ ಸಂಸ್ಥೆಗಳು 2023, ಫೆ.9ರಂದು ವಿಧ್ಯುಕ್ತ ಒಪ್ಪಂದವನ್ನು ಮಾಡಿಕೊಂಡಿದ್ದು,ಇದರಂತೆ ಪ್ರಸಾರ ಭಾರತಿಯು ಮಾರ್ಚ್ 2025ಕ್ಕೆ ಅಂತ್ಯಗೊಳ್ಳುವ ಎರಡು ವರ್ಷಗಳ ಅವಧಿಗೆ ಹಿಂದುಸ್ಥಾನ ಸಮಾಚಾರಗೆ ಸುಮಾರು 7.7 ಕೋ.ರೂ.ಗಳನ್ನು ಪಾವತಿಸಲಿದೆ. ಒಪ್ಪಂದದಂತೆ ಹಿಂದುಸ್ಥಾನ ಸಮಾಚಾರ ಪ್ರತಿ ದಿನ 10 ರಾಷ್ಟ್ರೀಯ ಸುದ್ದಿಗಳು,ಪ್ರಾದೇಶಿಕ ಭಾಷೆಗಳಲ್ಲಿ 40 ಸ್ಥಳೀಯ ಸುದ್ದಿಗಳು ಸೇರಿದಂತೆ ಕನಿಷ್ಠ 100 ಸುದ್ದಿ ವರದಿಗಳನ್ನು ಪ್ರಸಾರ ಭಾರತಿಗೆ ಒದಗಿಸಬೇಕಾಗುತ್ತದೆ.

ಕಳೆದ ಕೆಲವು ವರ್ಷಗಳಿಂದ ನರೇಂದ್ರ ಮೋದಿ ಸರಕಾರವು ಸುದ್ದಿಸಂಸ್ಥೆಗಳಾದ ಪಿಟಿಐ ಮತ್ತು ಯುಎನ್ಐ ಜೊತೆ ಕಹಿಸಂಬಂಧ ಹೊಂದಿರುವ ಹಿನ್ನೆಲೆಯಲ್ಲಿ ಪ್ರಸಾರ ಭಾರತಿಯು ಹಿಂದುಸ್ಥಾನ ಸಮಾಚಾರವನ್ನು ಔಪಚಾರಿಕವಾಗಿ ಸೇರ್ಪಡೆ ಮಾಡಿಕೊಂಡಿರುವ ಬೆಳವಣಿಗೆ ನಡೆದಿದೆ. ಪ್ರಸಾರ ಭಾರತಿಯಲ್ಲಿನ ಮೂಲಗಳು ತಿಳಿಸಿರುವಂತೆ ಸರಕಾರವು ‘ದುಬಾರಿ’ ಚಂದಾ ದರಗಳನ್ನು ಉಲ್ಲೇಖಿಸಿ ಸಾಂಪ್ರದಾಯಿಕ ಸುದ್ದಿಸಂಸ್ಥೆಗಳ ಸೇವೆಗಳನ್ನು ಅಂತ್ಯಗೊಳಿಸುವಂತೆ 2017ರಲ್ಲಿಯೇ ಅದಕ್ಕೆ ಸೂಚನೆ ನೀಡಿತ್ತು. ಆಗ ಎರಡೂ ಸುದ್ದಿಸಂಸ್ಥೆಗಳಿಗೆ ವಾರ್ಷಿಕ 15.75 ಕೋಟಿ ರೂ.ಗಳ ಶುಲ್ಕವನ್ನು ಪಾವತಿಸಲಾಗುತ್ತಿದ್ದು, ಈ ಪೈಕಿ ಪಿಟಿಐ ಸುಮಾರು ಒಂಭತ್ತು ಕೋಟಿ ರೂ.ಗಳ ಪಾಲು ಹೊಂದಿತ್ತು ಎಂದು thewire.in ವರದಿ ಮಾಡಿದೆ.

ಪಿಟಿಐ ಮತ್ತು ಯುಎನ್ಐ ಕೇವಲ ‘ವಕ್ರ’ ಸುದ್ದಿ ಮಾಹಿತಿಗಳನ್ನು ಒದಗಿಸುತ್ತಿವೆ ಎಂದು ನಂಬಿದ್ದ ಕೇಂದ್ರವು, ಸರಕಾರವನ್ನು ಕೇವಲ ಧನಾತ್ಮಕ ಬೆಳಕಿನಲ್ಲಿ ತೋರಿಸುವ ಸುದ್ದಿಸಂಸ್ಥೆಯನ್ನು ಬಯಸಿತ್ತು ಎನ್ನುವುದು ಮೂಲಗಳ ಅನಿಸಿಕೆಯಾಗಿದೆ. ಪಿಟಿಐ ಮತ್ತು ಯುಎನ್ಐ ಜೊತೆ ಸಂಬಂಧವನ್ನು ಕಡಿದುಕೊಳ್ಳಲು ಮತ್ತು ತನ್ನ ಪ್ರಸಾರ ಕಾರ್ಯಕ್ಕಾಗಿ ಹಿಂದುಸ್ಥಾನ ಸಮಾಚಾರವನ್ನು ಮುಖ್ಯ ಸುದ್ದಿ ಸಂಸ್ಥೆಯನ್ನಾಗಿ ಸೇರಿಸಿಕೊಳ್ಳುವಂತೆ ನರೇಂದ್ರ ಮೋದಿ ಸರಕಾರವು ಪ್ರಸಾರ ಭಾರತಿಯ ಮೇಲೆ ಒತ್ತಡ ಹೇರಿದೆ ಎಂದು ಮಾಜಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಹಾಗೂ ಕಾಂಗ್ರೆಸ್ ನಾಯಕ ಮನೀಷ್ ತಿವಾರಿ ಅವರು ಸರಣಿ ಟ್ವೀಟ್ ಗಳಲ್ಲಿ ಹೇಳಿದ್ದರು.

2016ರಲ್ಲಿ ಎಂ.ಕೆ.ರಾಜ್ದಾನ್ ಅವರು ಮುಖ್ಯ ಸಂಪಾದಕ ಹುದ್ದೆಯಿಂದ ಕೆಳಗಿಳಿದ ಬಳಿಕ ಆ ಸ್ಥಾನಕ್ಕೆ ತನ್ನ ಆಯ್ಕೆಯ ವ್ಯಕ್ತಿಯನ್ನು ನೇಮಕಗೊಳಿಸಲು ಮೋದಿ ಸರಕಾರವು ಪಿಟಿಐ ಜೊತೆ ಲಾಬಿ ನಡೆಸಿತ್ತು. ಆದರೆ ಅದನ್ನು ಲೆಕ್ಕಿಸದ ಪಿಟಿಐ ಹಿರಿಯ ಪತ್ರಕರ್ತ ವಿಜಯ ಜೋಶಿಯವರನ್ನು ತನ್ನ ಮುಖ್ಯ ಸಂಪಾದಕರನ್ನಾಗಿ ನೇಮಕಗೊಳಿಸಿತ್ತು. 2017ರಲ್ಲಿ ಪಿಟಿಐ ಮಧ್ಯ ದಿಲ್ಲಿಯಲ್ಲಿನ ತನ್ನ ಕಟ್ಟಡದಿಂದ ಪ್ರಸಾರ ಭಾರತಿಯನ್ನು ಬಲವಂತದಿಂದ ಬೇರೆಡೆಗೆ ತೆರಳುವಂತೆ ಮಾಡಿತ್ತು. ಸರಕಾರವು ಪಿಟಿಐ ಮತ್ತು ಯುಎನ್ಐ ಅನ್ನು ತೆಗೆದುಹಾಕಲು ಮತ್ತು ತನ್ನ ಪರವಾದ ಸುದ್ದಿಸಂಸ್ಥೆಯನ್ನು ತರಲು ಈ ಅವಕಾಶವನ್ನು ಬಳಸಿಕೊಳ್ಳಬಹುದು ಎಂದು ಸಚಿವಾಲಯದ ಮಾಜಿ ಕಾರ್ಯದರ್ಶಿಯೋರ್ವರು ಆಗ thewire.in ಗೆ ಹೇಳಿದ್ದರು.

ಅಕ್ಟೋಬರ್ 2020ರಲ್ಲಿ ಕೊನೆಗೂ ಪ್ರಸಾರ ಭಾರತಿಯು ಪಿಟಿಐ ಜೊತೆ ತನ್ನ ಸಂಬಂಧವನ್ನು ಕಡಿದುಕೊಂಡಿತ್ತು.

2014ರಿಂದಲೇ ಪಿಟಿಐನ ಸ್ವತಂತ್ರ ವರದಿಗಾರಿಕೆಯು ಮೋದಿ ಸರಕಾರಕ್ಕೆ ತಲೆನೋವನ್ನುಂಟು ಮಾಡಿತ್ತು. ಲಡಾಖ್ನಲ್ಲಿಯ ಮಿಲಿಟರಿ ಬಿಕ್ಕಟ್ಟಿನ ಬಗ್ಗೆ ಪಿಟಿಐ ವರದಿಗಾರಿಕೆ ಕುರಿತು 2020ರಲ್ಲಿ ಪ್ರಸಾರ ಭಾರತಿಯ ಹಿರಿಯ ಅಧಿಕಾರಿ ಸಮೀರ ಕುಮಾರ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಅದು ರಾಷ್ಟ್ರೀಯ ಹಿತಾಸಕ್ತಿಗೆ ಹಾನಿಕಾರಕವಾಗಿದೆ ಮತ್ತು ಭಾರತದ ಪ್ರಾದೇಶಿಕ ಸಮಗ್ರತೆಯನ್ನು ಕಡೆಗಣಿಸಿದೆ ಎಂದು ಆರೋಪಿಸಿ ಅವರು ಪಿಟಿಐಗೆ ಪತ್ರ ಬರೆದಿದ್ದರು.

ಭಾರತದಲ್ಲಿ ಚೀನಾದ ರಾಯಭಾರಿ ಮತ್ತು ಚೀನಾದಲ್ಲಿ ಭಾರತೀಯ ರಾಯಭಾರಿಗಳ ಪಿಟಿಐ ಸಂದರ್ಶನಗಳು ಸರಕಾರವನ್ನು ಕೆರಳಿಸಿದ್ದವು. ಚೀನಾದ ರಾಯಭಾರಿಯ ಸಂದರ್ಶನವನ್ನು ನಡೆಸಲೇಬಾರದಿತ್ತು ಎಂಬ ನಿಲುವು ಹೊಂದಿದ್ದ ಸರಕಾರಕ್ಕೆ,ಸಂದರ್ಶನದಲ್ಲಿ ಭಾರತೀಯ ರಾಯಭಾರಿ ವಿಕ್ರಮ ಮಿಸ್ರಿಯವರ ಹೇಳಿಕೆಗಳು ತೀವ್ರ ಮುಜುಗರವನ್ನುಂಟು ಮಾಡಿದ್ದವು. ಅವು ಯಾವುದೇ ಭಾರತೀಯ ಭೂಪ್ರದೇಶದೊಂದಿಗೆ ರಾಜಿ ಮಾಡಿಕೊಳ್ಳಲಾಗಿಲ್ಲ ಎಂಬ ಪ್ರಧಾನಿಯವರ ಹೇಳಿಕೆಗೆ ವ್ಯತಿರಿಕ್ತವಾಗಿದ್ದವು.

ಪಿಟಿಐ ಬದಲು ಹೆಚ್ಚಿನವರಿಗೆ ಗೊತ್ತೇ ಇಲ್ಲದ ಹಿಂದುಸ್ಥಾನ ಸಮಾಚಾರವನ್ನು ನೇಮಕ ಮಾಡಿಕೊಂಡಿರುವುದು ಸರಕಾರದ ಬಗ್ಗೆ ಧನಾತ್ಮಕ ವರದಿಗಾರಿಕೆಗಾಗಿ ಮಾತ್ರವಲ್ಲ, ಅಸ್ತಿತ್ವವನ್ನು ಉಳಿಸಿಕೊಳ್ಳಲು ಪರದಾಡುತ್ತಿರುವ ಕೇಸರಿ ಛಾಯೆಯ ಅದನ್ನು ಬೆಳೆಸುವ ಉದ್ದೇಶವನ್ನೂ ಹೊಂದಿದೆ. ದೇಶದಲ್ಲಿ ವರದಿಗಾರರು ಮತ್ತು ಛಾಯಾಚಿತ್ರಗ್ರಾಹಕರ ಅತ್ಯಂತ ದೊಡ್ಡ ಜಾಲವನ್ನು ಹೊಂದಿರುವ ಪಿಟಿಐಗೆ ಬದಲಾಗಿ ಹಿಂದುಸ್ಥಾನ ಸಮಾಚಾರಗೆ ಸರಕಾರವು ಆದ್ಯತೆ ನೀಡಿರುವುದು ಅದು ಖಾಸಗಿ ಬಲಪಂಥೀಯ ಸುದ್ದಿಸಂಸ್ಥೆಗಳನ್ನು ಪುನರುಜ್ಜೀವನಗೊಳಿಸುವ ಯೋಜನೆಯನ್ನೂ ಹೊಂದಿರಬಹುದು ಎನ್ನುವುದನ್ನು ಸೂಚಿಸುತ್ತಿದೆ.

ಬಹುಭಾಷಾ ಸುದ್ದಿಸಂಸ್ಥೆಯಾಗಿರುವ ಹಿಂದುಸ್ಥಾನ ಸಮಾಚಾರವನ್ನು 1948ರಲ್ಲಿ ಹಿರಿಯ ಆರೆಸ್ಸೆಸ್ ಪ್ರಚಾರಕ ಹಾಗೂ ವಿಹಿಂಪ ಸಹಸ್ಥಾಪಕ ಶಿವರಾಮ ಶಂಕರ ಆಪ್ಟೆಯವರು ಆರೆಸ್ಸೆಸ್ ಸಿದ್ಧಾಂತಿ ಎಂ.ಎಸ್.ಗೊಲ್ವಾಳಕರ್ ಅವರೊಂದಿಗೆ ಸೇರಿಕೊಂಡು ಸ್ಥಾಪಿಸಿದ್ದರು. ಮೋದಿ ಸರಕಾರವು ಅಧಿಕಾರಕ್ಕೆ ಬಂದಾಗಿನಿಂದಲೂ ಸರಕಾರಿ ಜಾಹೀರಾತುಗಳ ನಿರಂತರ ಫಲಾನುಭವಿಯಾಗಿರುವ ಅದು, ಝಂದೇವಾಲನ್ನಲ್ಲಿಯ ಆರೆಸ್ಸೆಸ್ನ ದಿಲ್ಲಿ ಕಚೇರಿಯ ಬಳಿಯಿಂದ ನೊಯ್ಡಾದಲ್ಲಿಯ ಬೃಹತ್ ಕಚೇರಿಗೆ ಸ್ಥಳಾಂತರಗೊಳ್ಳಲು ಯೋಜಿಸುತ್ತಿದೆ ಎಂದು ವರದಿಯಾಗಿದೆ.

ಆರ್ಥಿಕ ಮುಗ್ಗಟ್ಟಿನಿಂದಾಗಿ 1986ರಲ್ಲಿ ಬಾಗಿಲೆಳೆದುಕೊಂಡಿದ್ದ ಹಿಂದುಸ್ಥಾನ ಸಮಾಚಾರವನ್ನು ಆರೆಸ್ಸೆಸ್ 2002ರಲ್ಲಿ ವಾಜಪೇಯಿಯವರ ಅಧಿಕಾರಾವಧಿಯಲ್ಲಿ ಪುನಃಶ್ಚೇತನಗೊಳಿಸಿತ್ತು.

share
Next Story
X