ಎ.1ರಂದು ದುಬೈಯಿಲ್ಲಿ ಬಿಸಿಎಫ್ ಇಫ್ತಾರ್ ಕೂಟ

ಉಡುಪಿ, ಫೆ.25: ಅನಿವಾಸಿ ಭಾರತೀಯರ ಪ್ರತಿಷ್ಠಿತ ಸಂಘಟನೆಯಾದ ಬ್ಯಾರೀಸ್ ಕಲ್ಚರಲ್ ಫೋರಮ್ ದುಬೈ ಇದರ ವತಿಯಿಂದ ಈ ವರ್ಷದ ಇಫ್ತಾರ್ ಕೂಟವು ಎ.1ರಂದು ದುಬೈಯಲ್ಲಿ ನಡೆಯಲಿದೆ.
ಸರ್ವಧರ್ಮ ಸಮನ್ವಯ ಮತ್ತು ಸೌಹಾರ್ದತೆಗೆ ಪ್ರಸಿದ್ಧವಾದ ಬಿಸಿಎಫ್ ಇಫ್ತಾರಿನ ಚೆಯರ್‌ಮೆನ್ ಆಗಿ ಬಿಸಿಎಫ್ ಉಪಾಧ್ಯಕ್ಷ ಅಬ್ದುಲ್ ಲತೀಫ್ ಮುಲ್ಕಿ ಅವರನ್ನು ಆಯ್ಕೆ ಮಾಡಲಾಯಿತು ಎಂದು ಬಿಸಿಎಫ್ ಅಧ್ಯಕ್ಷ ಡಾ.ಬಿ.ಕೆ. ಯೂಸುಫ್ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





