ಹಾವಂಜೆ ಗ್ರಾಪಂ ಉಪಚುನಾವಣೆ: ಶೇ.74 ಮತದಾನ

ಉಡುಪಿ, ಫೆ.25: ಬ್ರಹ್ಮಾವರ ತಾಲೂಕು ಹಾವಂಜೆ ಗ್ರಾಮ ಪಂಚಾಯತ್‌ನ ಒಂದು ಸ್ಥಾನಕ್ಕೆ ಇಂದು ನಡೆದ ಉಪಚುನಾವಣೆಯಲ್ಲಿ ಶಾಂತಯುತ ಮತದಾನ ನಡೆದಿದ್ದು, ಶೇ.74.12ರಷ್ಟು ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಒಂದು ಮತಗಟ್ಟೆಯಲ್ಲಿ ನಡೆದ ಮತದಾನ ನಡೆದಿದ್ದು, ಒಟ್ಟು 885 ಮತದಾರರಲ್ಲಿ 656 ಮಂದಿ ತಮ್ಮ ಮತಚಲಾಯಿಸಿದ್ದಾರೆ. ವಾರ್ಡ್‌ನ 420 ಪುರುಷ ಮತದಾರರಲ್ಲಿ 302 ಮಂದಿ ಹಾಗೂ 465 ಮಹಿಳಾ ಮತದಾರ ರಲ್ಲಿ 354 ಮಂದಿ ಮತ ಚಲಾಯಿಸಿದ್ದಾರೆ ಎಂದು ಚುನಾವಣಾಧಿಕಾರಿ ಯವರ ಪ್ರಕಟಣೆ ತಿಳಿಸಿದೆ.
Next Story