ರಾಷ್ಟ್ರೀಯ ಡ್ರ್ಯಾಗನ್ ಬೋಟ್ ಚಾಂಪಿಯನ್‌ಷಿಪ್: ಕರ್ನಾಟಕ ಪುರುಷರಿಗೆ 500ಮೀ. ಡಿ-20ರಲ್ಲಿ ಚಿನ್ನದ ಪದಕ

ಉಡುಪಿ: ಹೇರೂರು ಗ್ರಾಮದ ಮಡಿಸಾಲು ಹೊಳೆಯಲ್ಲಿ ನಡೆದಿರುವ 11ನೇ ರಾಷ್ಟ್ರೀಯ ಡ್ರ್ಯಾಗನ್ ಬೋಟ್ ಚಾಂಪಿಯನ್‌ಷಿಪ್‌ನ ಎರಡನೇ ದಿನದ ಸ್ಪರ್ಧೆಗಳಲ್ಲಿ ಆತಿಥೇಯ ಪುರುಷರ ತಂಡ ದಿನದ ಏಕೈಕ ಚಿನ್ನದ ಪದಕ ಗೆದ್ದುಕೊಂಡಿದೆ.
ರಾ.ಹೆದ್ದಾರಿ 66ರಲ್ಲಿರುವ ಹೇರೂರು ಸೇತುವೆ ಸಮೀಪ ನಡೆದಿರುವ ಈ ಚಾಂಪಿಯನ್‌ಷಿಪ್‌ನ ಇಂದಿನ ಪುರುಷರ 500ಮೀ. ಸ್ಪರ್ಧೆಯ ಡಿ-20 (20+2) ವಿಭಾಗದಲ್ಲಿ ಕರ್ನಾಟಕ ತಂಡ ಮೊದಲಿಗರಾಗಿ ಗುರಿಮುಟ್ಟಿ ಚಿನ್ನದ ಪದಕ ಜಯಿಸಿತು. ಸ್ಪರ್ಧೆಯ ಮೊದಲ ದಿನವಾದ ನಿನ್ನೆ ಆತಿಥೇಯ ತಂಡ ಮೂರು ಚಿನ್ನದ ಪದಕ ಗೆದ್ದುಕೊಂಡಿತ್ತು.
500ಮೀ. ಡಿ-20ರಲ್ಲಿ ಅಂತಿಮವಾಗಿ ಕರ್ನಾಟಕ ಕನಿಷ್ಠ ಸಮಯದಲ್ಲಿ ಗುರಿಮುಟ್ಟಿದರೆ, ಹರ್ಯಾಣ ತಂಡ ಬೆಳ್ಳಿ ಪದಕ ಹಾಗೂ ಮಧ್ಯಪ್ರದೇಶ ಪುರುಷರ ತಂಡ ಕಂಚಿನ ಪದಕಗಳನ್ನು ಗೆದ್ದುಕೊಂಡವು.
ದಿನದಲ್ಲಿ ಕರ್ನಾಟಕ ಒಂದು ಬೆಳ್ಳಿ ಪದಕ ಹಾಗೂ ಎರಡು ಕಂಚಿನ ಪದಕಗಳನ್ನು ಗೆದ್ದುಕೊಂಡವು. ಮಿಕ್ಸೆಡ್ 500ಮೀ. ಡಿ-20 ಸ್ಪರ್ಧೆಯಲ್ಲಿ ಕರ್ನಾಟಕವನ್ನು ಹಿಂದಿಕ್ಕಿ ಮಧ್ಯಪ್ರದೇಶ ಚಿನ್ನದ ಪದಕ ಗೆದ್ದರೆ, ಕರ್ನಾಟಕ ಬೆಳ್ಳಿ ಪದಕಕ್ಕೆ ತೃಪ್ತಿ ಪಡಬೇಕಾಯಿತು. ಇದರಲ್ಲಿ ಕೇರಳ ಕಂಚಿನ ಪದಕ ಜಯಿಸಿತು.
ಜೂನಿಯರ್ ಮಹಿಳೆಯರ 500ಮೀ. ಡಿ-10ರಲ್ಲಿ ದಿಲ್ಲಿ ಮತ್ತು ಹರ್ಯಾಣದ ಬಳಿಕ ಕರ್ನಾಟಕ ಮೂರನೇ ಸ್ಥಾನದಲ್ಲಿ ಗುರಿಮುಟ್ಟಿ ಕಂಚಿನ ಪದಕ ಜಯಿಸಿತು. ಅದೇ ರೀತಿ ಮಿಕ್ಸೆಡ್ 500ಮೀ. ಡಿ-10ರಲ್ಲೂ ದಿಲ್ಲಿ ಮತ್ತು ಪಂಜಾಬ್ ಬಳಿಕ ಕರ್ನಾಟಕ ಕಂಚಿನ ಪದಕಕ್ಕೆ ತೃಪ್ತಿ ಪಡಬೇಕಾಯಿತು.
ದಿನದಲ್ಲಿ ನಡೆದ 9 ಸ್ಪರ್ಧೆಗಳಲ್ಲಿ ದಿಲ್ಲಿ ತಂಡ ಒಟ್ಟು ಐದು ಸ್ಪರ್ಧೆಗಳಲ್ಲಿ ಚಿನ್ನದ ಪದಕ ಜಯಿಸಿತು. ಉಳಿದಂತೆ ಕರ್ನಾಟಕ, ಹರ್ಯಾಣ, ಮದ್ಯಪ್ರದೇಶ ಹಾಗೂ ಪಂಜಾಬ್ ತಂಡಗಳು ತಲಾ ಒಂದೊಂದು ಚಿನ್ನದ ಪದಕ ಗೆದ್ದುಕೊಂಡವು.
ಇಂದಿನ ಫಲಿತಾಂಶದ ವಿವರ: (ಎಲ್ಲವೂ 500ಮೀ. ಸ್ಪರ್ಧೆಗಳು)
ಮಹಿಳೆಯರ ಡಿ-20: 1.ದಿಲ್ಲಿ(ಚಿನ್ನ), 2.ಹರ್ಯಾಣ(ಬೆಳ್ಳಿ), 3.ಪಂಜಾಬ್ (ಕಂಚು). ಜೂನಿಯರ್ ಮಹಿಳೆಯರ ಡಿ-10: 1.ದಿಲ್ಲಿ, 2.ಹರ್ಯಾಣ, 3.ಕರ್ನಾಟಕ. ಜೂನಿಯರ್ ಮಿಕ್ಸೆಡ್ ಡಿ-10: 1.ದಿಲ್ಲಿ, 2.ಮಧ್ಯಪ್ರದೇಶ, 3.ಹರ್ಯಾಣ.
ಪುರುಷರ ಡಿ-20: 1.ಕರ್ನಾಟಕ, 2.ಹರ್ಯಾಣ, 3.ಮಧ್ಯಪ್ರದೇಶ. ಜೂನಿಯರ್ ಪುರುಷರ ಡಿ-10: 1.ಹರ್ಯಾಣ, 2.ಮಧ್ಯಪ್ರದೇಶ, 3.ಕೇರಳ. ಮಿಕ್ಸೆಡ್ ಡಿ-20: 1.ಮಧ್ಯಪ್ರದೇಶ, 2.ಕರ್ನಾಟಕ, 3.ಕೇರಳ.
ಮಹಿಳೆಯರ ಡಿ-10: 1.ದಿಲ್ಲಿ, 2.ಹರ್ಯಾಣ, 3.ಮಧ್ಯಪ್ರದೇಶ. ಮಿಕ್ಸೆಡ್ ಡಿ-10: 1.ದಿಲ್ಲಿ, 2.ಪಂಜಾಬ್, 3.ಕರ್ನಾಟಕ. ಪುರುಷರ ಡಿ-10: 1.ಪಂಜಾಬ್, 2.ಮಧ್ಯಪ್ರದೇಶ, 3.ಗೋವಾ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳು, ಭಾರತೀಯ ಕಯಾಕಿಂಗ್ ಮತ್ತು ಕನೂಯಿಂಗ್ ಅಸೋಸಿಯೇಷನ್,ಕಯಾಕಿಂಗ್ ಮತ್ತು ಕನೂಯಿಂಗ್ ಅಸೋಸಿಯೇಷನ್ ಆಫ್ ಕರ್ನಾಟಕ ಇವರ ಸಹಯೋಗದೊಂದಿಗೆ ಈ ಡ್ರ್ಯಾಗನ್ ಬೋಟ್ ಚಾಂಪಿಯನ್‌ಶಿಪ್‌ನ್ನು ಆಯೋಜಿಸಿವೆ.






.jpeg)
.jpeg)

.jpeg)


