ಹಝ್ರತ್ ಹಮೀದ್ ಶಾ ದರ್ಗಾ ಸಮಿತಿಗೆ ಜಿ.ಎ.ಬಾವ ಆಡಳಿತಾಧಿಕಾರಿ

ಬೆಂಗಳೂರು, ಫೆ.25: ಬೆಂಗಳೂರಿನ ಕಬ್ಬನ್‍ಪೇಟೆ ಮುಖ್ಯರಸ್ತೆಯಲ್ಲಿರುವ ಹಝ್ರತ್ ಹಮೀದ್ ಶಾ ಹಾಗೂ ಹಝ್ರತ್ ಮುಹೀಬ್ ಶಾ ದರ್ಗಾ ಸಮಿತಿಯ ನೂತನ ಆಡಳಿತಾಧಿಕಾರಿಯಾಗಿ ಜಿ.ಎ.ಬಾವ ಅವರನ್ನು ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಎನ್.ಕೆ.ಮುಹಮ್ಮದ್ ಶಾಫಿ ಸಅದಿ ನೇಮಿಸಿದ್ದಾರೆ.
ಇದಲ್ಲದೆ, ಆಡಳಿತ ಸಮಿತಿಗೆ ರಾಜ್ಯ ವಕ್ಫ್ ಬೋರ್ಡ್‍ನ ಸದಸ್ಯರಾದ ಆಸಿಫ್ ಅಲಿ ಶೇಕ್ ಹುಸೇನ್, ಕೆ.ಅನ್ವರ್ ಬಾಷ, ಜಿ.ಯಾಕೂಬ್ ಯೂಸುಫ್ ಹಾಗೂ ಸುಹೇಲ್ ಅಹ್ಮದ್, ಅಝೀಮ್, ನಿಸಾರ್ ಅಹ್ಮದ್, ಸೈಯದ್ ರಶೀದ್ ಅಹ್ಮದ್ ಹಾಗೂ ಅನೀಸ್ ಅಹ್ಮದ್ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
Next Story





