ಎಂಸಿಡಿ ಸ್ಥಾಯಿ ಸಮಿತಿಯ ಮರು ಚುನಾವಣೆಗೆ ದಿಲ್ಲಿ ಹೈಕೋರ್ಟ್ ತಡೆ

ಹೊಸದಿಲ್ಲಿ, ಫೆ. 25: ದಿಲ್ಲಿ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿಯ 6 ಮಂದಿ ಸದಸ್ಯರ ಆಯ್ಕೆಗೆ ಮರು ಚುನಾವಣೆ ನಡೆಸುವಂತೆ ನೂತನವಾಗಿ ಆಯ್ಕೆಯಾದ ಮೇಯರ್ ಶೆಲ್ಲಿ ಒಬೆರಾಯ್ ನೀಡಿದ ನೋಟಿಸ್ಗೆ ದಿಲ್ಲಿ ಉಚ್ಚ ನ್ಯಾಯಾಲಯ ಶನಿವಾರ ತಡೆ ವಿಧಿಸಿದೆ.
ಶುಕ್ರವಾರ ನಡೆದ ಮತದಾನದ ಫಲಿತಾಂಶವನ್ನು ಪ್ರಕಟಿಸದೆ ಚುನಾವಣಾಧಿಕಾರಿ ಅಥವಾ ಮೇಯರ್ ಮರು ಚುನಾವಣೆ ನಡೆಸುತ್ತಿದ್ದಾರೆ ಎಂದು ನ್ಯಾಯಮೂರ್ತಿ ಗೌರಂಗ್ ಕಾಂತ್ ಅಭಿಪ್ರಾಯಿಸಿದರು. ಇದು ದಿಲ್ಲಿ ಮಹಾನಗರ ಪಾಲಿಕೆ ನಿಯಮ 1997ನ್ನು ಉಲ್ಲಂಘಿಸುತ್ತದೆ ಎಂದು ಅವರು ಹೇಳಿದರು. ಮುಂದಿನ ವಿಚಾರಣೆ ವರೆಗೆ ಚುನಾವಣೆಗೆ ತಡೆ ವಿಧಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿತು.
Next Story





