Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಫೆ. 28: ಕಾರ್ಕಳ ಶಾಖಾ ಗ್ರಂಥಾಲಯ ನೂತನ...

ಫೆ. 28: ಕಾರ್ಕಳ ಶಾಖಾ ಗ್ರಂಥಾಲಯ ನೂತನ ಕಟ್ಟಡ ಉದ್ಘಾಟನೆ

25 Feb 2023 10:57 PM IST
share
ಫೆ. 28: ಕಾರ್ಕಳ ಶಾಖಾ ಗ್ರಂಥಾಲಯ ನೂತನ ಕಟ್ಟಡ ಉದ್ಘಾಟನೆ

ಕಾರ್ಕಳ: ಕಾರ್ಕಳದ ಗಾಂಧಿ ಮೈದಾನದ ಸಮೀಪ ಇರುವ ಶಾಖಾ ಗ್ರಂಥಾಲಯದ ನೂತನ ಕಟ್ಟಡದ ಕಾಮಗಾರಿ ಪೂರ್ತಿಗೊಂಡಿದ್ದು ಅದರ ಉದ್ಘಾಟನಾ ಸಮಾರಂಭವು ಫೆಬ್ರವರಿ 28ರಂದು ನಡೆಯಲಿದೆ.

ಕಾರ್ಕಳದ ಮೊಟ್ಟಮೊದಲ ಸರಕಾರಿ ಗ್ರಂಥಾಲಯವು ಅನಂತಶಯನದಲ್ಲಿ 1956ರಲ್ಲಿ ಆರಂಭವಾಯಿತು. ಆಗಿನ ಭುವನೇಂದ್ರ ಕಾಲೇಜಿನ ಪ್ರೊಫೆಸರ್ ರಘುನಾಥ್ ಭಟ್ ಅದರ ಮೊದಲ ಗ್ರಂಥಪಾಲಕರಾಗಿ ಆರು ವರ್ಷ ಉತ್ತಮ ಸೇವೆ ಸಲ್ಲಿಸಿದರು. ಮುಂದೆ ಸುದೀರ್ಘ ಮೂವತ್ತಾರು ವರ್ಷಗಳ ಕಾಲ ಕಾರ್ಕಳ ಕಾಳಿಕಾಂಬ ನಿವಾಸಿ  ಕೆ. ಗೋವಿಂದ ರಾವ್ ಅವರು ಅತ್ಯುತ್ತಮ ಸೇವೆ ಸಲ್ಲಿಸಿ ಗ್ರಂಥಾಲಯದ ಅಭಿವೃದ್ಧಿಗೆ ಕಾರಣವಾಗಿ ಅತ್ಯುತ್ತಮ ಗ್ರಂಥಪಾಲ ಪ್ರಶಸ್ತಿ, ಸಾರ್ವಜನಿಕ ಸನ್ಮಾನಗಳು ಅನೇಕ ಪ್ರಶಸ್ತಿಗಳನ್ನು ಪಡೆಯೂದರ ಜೊತೆಗೆ ತಾನೂ ರಾಜ್ಯ ಪ್ರಶಸ್ತಿಯ ಗೌರವಕ್ಕೆ ಪಾತ್ರರಾದರು . ಕಾರ್ಕಳದಲ್ಲಿ ಕ್ಯಾರಂ ಹಾಗೂ ಚೆಸ್ ಪಂದ್ಯಗಳನ್ನು ಆಯೋಜಿಸಿದ ಹಿರಿಮೆ ಅವರಿಗೆ ಸಲ್ಲುತ್ತದೆ.

ಗ್ರಂಥಾಲಯವು ಅನಂತಶಯನದಿಂದ ಟಾಟಾ ಗ್ಯಾರೇಜ್ ,ಅಲ್ಲಿಂದ ಆನೆಕೆರೆ, ಮುಂದೆ ಈಗಿನ ಗಾಂಧಿ ಮೈದಾನದ ಸಮೀಪ ಸ್ವಂತ ಕಟ್ಟಡಕ್ಕೆ ಸ್ಥಳಾಂತರ ಆಯಿತು. ಮುಖ್ಯಮಂತ್ರಿಯಾಗಿದ್ದ  ಎಂ. ವೀರಪ್ಪ ಮೊಯ್ಲಿ ಅವರು ಆ  ಹಿಂದಿನ ಕಟ್ಟಡಕ್ಕೆ ಅನುದಾನವನ್ನು ಕೊಡಿಸಿ ತಾವೇ ಮುಂದೆ ನಿಂತು ಉದ್ಘಾಟನೆಯನ್ನು ಮಾಡಿದ್ದರು. ಮುಂದೆ ಓದುಗರ ಸಂಖ್ಯೆಯು ಗಣನೀಯವಾಗಿ ಹೆಚ್ಚಾಯಿತು. 

ಆನಂತರ 11 ವರ್ಷ ಜಯಶ್ರೀ ಎಂ ಅವರು ಗ್ರಂಥಪಾಲಕರಾಗಿ ಉತ್ತಮ ಸೇವೆ ಸಲ್ಲಿಸಿದರು. ಈಗ ವನಿತಾ ಅವರು ಕಳೆದ 13 ವರ್ಷಗಳಿಂದ  ಗ್ರಂಥಪಾಲಕಿ ಆಗಿದ್ದಾರೆ. 

ಗ್ರಂಥಾಲಯದ ಬಗ್ಗೆ ಸ್ಪಷ್ಟವಾದ ವಿಷನ್ ಹೊಂದಿರುವ ಕರ್ನಾಟಕ ಸರಕಾರದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ವಿ. ಸುನೀಲ್ ಕುಮಾರ್ ಅವರು ಈ ಗ್ರಂಥಾಲಯದ ನೂತನ ಕಟ್ಟಡವನ್ನು ಒಂದು ಕೋಟಿ ರೂಪಾಯಿ ಸರಕಾರದ ಅನುದಾನದ ಮೂಲಕ ಕಾರ್ಕಳಕ್ಕೆ ತಂದಿದ್ದಾರೆ. ಅದರಲ್ಲಿ ಡಿಜಿಟಲ್ ಗ್ರಂಥಾಲಯ, ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಕೇಂದ್ರಗಳ ಸೇರ್ಪಡೆ  ಮಾಡಿದ್ದಾರೆ. ನೂತನ ಕಟ್ಟಡವು 5400 ಚದರ ಅಡಿ ವಿಸ್ತಾರ ಇದೆ. ಅಂದಾಜು 50,000 ಪುಸ್ತಕಗಳು ಇವೆ. 18 ನಿಯತಕಾಲಿಕೆ, 24 ವಾರ ಪತ್ರಿಕೆ, ಹತ್ತು ದಿನಪತ್ರಿಕೆ ಓದುಗರಿಗೆ ಲಭ್ಯ ಇವೆ. ಅಂದಾಜು 8,000 ಓದುಗರಿದ್ದಾರೆ. ಒಂದು ಲಕ್ಷ ಡಿಜಿಟಲ್ ಓದುಗರಿದ್ದಾರೆ. ಓದುಗರಿಗೆ ಉತ್ತಮ ಸೇವೆಯು ಇಲ್ಲಿ ಲಭ್ಯ ಇದೆ. 

ಪ್ರೊ. ಎಂ.ರಾಮಚಂದ್ರ, ಶ್ರೀನಿವಾಸ ‌ಪೈ ಮೊದಲಾದ ದಾನಿಗಳು ಗ್ರಂಥಾಲಯಕ್ಕೆ ಈ ಹಿಂದೆ ನೂರಾರು ಪುಸ್ತಕಗಳ ಕೊಡುಗೆ ನೀಡಿದ್ದಾರೆ. ಗೋಂವಿಂದ ಪೈ ಮತ್ತು ಶುಭದರಾವ್  ನಿಯತಕಾಲಿಕೆ ಮತ್ತು ದಿನ ಪತ್ರಿಕೆಗಳನ್ನು ಕೊಡುಗೆಯಾಗಿ ನೀಡುತ್ತಿದ್ದಾರೆ.  ಈಗ ನೂತನ ಕಟ್ಟಡದಲ್ಲಿ  ಉದ್ಯಮಿಗಳಾದ ಬೋಳ ದಾಮೋದರ್ ಕಾಮತ್ ಅವರು ತಮ್ಮ ಸಿ ಎಸ್ ಆರ್ ನಿಧಿಯ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳ ಮತ್ತು ಡಿಜಿಟಲ್ ಗ್ರಂಥಾಲಯ ವಿಭಾಗಕ್ಕೆ ಆರು ಕಂಪ್ಯೂಟರ್ ಮತ್ತು ಸಂಪೂರ್ಣ ಫರ್ನೀಚರ್ ಒದಗಿಸಿಕೊಟ್ಟಿದ್ದಾರೆ. ಇದರಿಂದ ಹೆಚ್ಚು ಯುವ ಓದುಗರನ್ನು ಗ್ರಂಥಾಲಯಕ್ಕೆ ಆಕರ್ಷಣೆ ಮಾಡುವ ಪ್ರಯತ್ನ ನಡೆದಿದೆ. ಓದುವ ಸಂಸ್ಕೃತಿ ಜೀವಂತವಾಗಿರುವ ಕಾರ್ಕಳದಲ್ಲಿ ಈ ನೂತನ ಗ್ರಂಥಾಲಯವು ಒಂದು ಉತ್ತಮ ಕೊಡುಗೆ ಆಗಲಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

share
Next Story
X