ಮಡಿಕೇರಿ | ಕಾನೂರು ಸಮೀಪ ರಸ್ತೆಯಲ್ಲಿ ಹುಲಿ ದೃಶ್ಯ ಸೆರೆ; ಗ್ರಾಮಸ್ಥರಲ್ಲಿ ಆತಂಕ

ಮಡಿಕೇರಿ,ಫೆ.25: ಕಾನೂರು ಸಮೀಪ ಬ್ರಹ್ಮಗಿರಿಯಲ್ಲಿ ಇಂದು ಮಧ್ಯಾಹ್ನ 12:30ರ ಸುಮಾರಿಗೆ ರಸ್ತೆಯಲ್ಲಿ ಹುಲಿಯೊಂದು ನಡೆದುಕೊಂಡು ಹೋಗುತ್ತಿರುವ ದೃಶ್ಯವನ್ನು ಆ ಮಾರ್ಗದಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರೊಬ್ಬರು ಸೆರೆಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.
ಅರಣ್ಯ ಇಲಾಖೆ ಕಿರಗೂರು ಸಮೀಪ ಕಳೆದ ಮೂರು ದಿನಗಳ ಹಿಂದೆ ಕಂಡ ಹುಲಿಯ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿರುವ ಬೆನ್ನಲ್ಲೆ ಇದೀಗ ಹುಲಿ ರಾಜಾರೋಷವಾಗಿ ಬ್ರಹ್ಮಗಿರಿ ಪ್ರದೇಶದಲ್ಲಿ ಏಕಾಂಗಿಯಾಗಿ ಓಡಾಡುತ್ತಿದೆ.
ಕಾಫಿ, ಕರಿಮೆಣಸು ಕೆಲಸ ಪೂರ್ಣಗೊಳ್ಳದೆ ಇದೀಗ ಕಾಫಿ ತೋಟದಲ್ಲಿ ಕೆಲಸ ನಿರ್ವಹಿಸಲು ಆಗದೆ ಆತಂಕದ ಪರಿಸ್ಥಿತಿ ಇದೆ ಎಂದು ಕಾರ್ಮಿಕರು ತಿಳಿಸಿದ್ದಾರೆ.
Next Story





