ರಿಯೋ ಓಪನ್: ಕಾರ್ಲೊಸ್ ಅಲ್ಕರಾಝ್ ಸೆಮಿಫೈನಲ್‌ಗೆ

ಹೊಸದಿಲ್ಲಿ, ಫೆ.25: ಎಟಿಪಿ ರಿಯೋ ಓಪನ್ ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವದ ನಂ.2ನೇ ಆಟಗಾರ ಕಾರ್ಲೊಸ್ ಅಲ್ಕರಾಝ್ ಅವರು ಡುಸಾನ್ ಲಾಜೊವಿಕ್‌ರನ್ನು 6-4, 7-6(7/0)ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ. ಈ ಮೂಲಕ ಸೆಮಿ ಫೈನಲ್‌ಗೆ ಪ್ರವೇಶಿಸಿದ್ದಾರೆ.
ಸ್ಪೇನ್‌ನ 19ರ ಹರೆಯದ ಅಲ್ಕರಾಝ್ ಅವರು ಲಾಜೊವಿಕ್ ವಿರುದ್ಧ ಆಡಿರುವ 3 ಪಂದ್ಯಗಳಲ್ಲಿ ಮೂರನೇ ಗೆಲುವು ದಾಖಲಿಸಿದರು. ಕಳೆದ ವಾರ ಅರ್ಜೆಂಟೀನ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಲಾಜೊವಿಕ್‌ರನ್ನು ಅಲ್ಕರಾಝ್ ಸೋಲಿಸಿದ್ದರು.
ಅಲ್ಕರಾಝ್ ಅರ್ಜೆಂಟೀನ ಓಪನ್‌ನಲ್ಲಿ ಪ್ರಶಸ್ತಿಯನ್ನು ಜಯಿಸಿ ತನ್ನನ್ನು ದೀರ್ಘ ಸಮಯ ಕಾಡಿದ್ದ ಗಾಯದ ಸಮಸ್ಯೆಯಿಂದ ಹೊರ ಬಂದಿದ್ದರು. ಅಲ್ಕರಾಝ್ ಸೆಮಿ ಫೈನಲ್‌ನಲ್ಲಿ ಚಿಲಿಯ ಕ್ವಾಲಿಫೈಯರ್ ನಿಕೊಲಸ್ ಜರ್ರಿ ಅವರನ್ನು ಎದುರಿಸಲಿದ್ದಾರೆ. ಜರ್ರಿ ಅರ್ಜೆಂಟೀನದ ಆರನೇ ಶ್ರೇಯಾಂಕದ ಸೆಬಾಸ್ಟಿಯನ್ ಬಾಯೆಝ್‌ರನ್ನು 6-3, 7-6(7/3) ಅಂತರದಿಂದ ಸೋಲಿಸಿದ್ದಾರೆ.
ಅಲ್ಕರಾಝ್ ರಿಯೋ ಓಪನ್ ಪ್ರಶಸ್ತಿ ತನ್ನಲ್ಲೇ ಉಳಿಸಿಕೊಳ್ಳುವತ್ತ ಚಿತ್ತಹರಿಸಿದ್ದಾರೆ. ಕಳೆದ ವರ್ಷ ಎಟಿಪಿ 500 ಟೂರ್ನಮೆಂಟ್ ಜಯಿಸಿದ ಅತ್ಯಂತ ಯುವ ಆಟಗಾರ ಎನಿಸಿಕೊಂಡಿದ್ದರು.







