ಖತರ್ ಓಪನ್ ಟೆನಿಸ್ ಟೂರ್ನಿ: ಆ್ಯಂಡಿ ಮರ್ರೆ ಫೈನಲ್‌ಗೆ ಲಗ್ಗೆ

ದೋಹಾ, ಫೆ.25: ಐದು ಪಾಯಿಂಟ್ಸ್ ಉಳಿಸಿದ ಮೂರು ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಆ್ಯಂಡಿ ಮರ್ರೆ ಖತರ್ ಓಪನ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಕಳೆದ ವರ್ಷದ ಜೂನ್ ನಂತರ ಮೊದಲ ಬಾರಿ ಎಟಿಪಿ ಟೂರ್‌ನಲ್ಲಿ ಫೈನಲ್ ತಲುಪಿದ್ದಾರೆ.
ವೈರ್ಲ್ಡ್ ಕಾರ್ಡ್ ಮೂಲಕ ಟೂರ್ನಿಗೆ ಪ್ರವೇಶ ಪಡೆದ ಬ್ರಿಟನ್ ಆಟಗಾರ ಮರ್ರೆ ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ನ ಸೆಮಿ ಫೈನಲ್‌ನಲ್ಲಿ ಝೆಕ್ ಎದುರಾಳಿ ಜಿರಿ ಲೆಹೆಕಾರನ್ನು 6-0, 3-6, 7-6(6) ಅಂತರದಿಂದ ಮಣಿಸಿದರು. ಮೂರನೇ ಸೆಟ್‌ನಲ್ಲಿ 3-5 ಹಿನ್ನಡೆಯಿಂದ ಚೇತರಿಸಿಕೊಂಡು ಪ್ರತಿ ಹೋರಾಟ ನೀಡಿದರು. ವಿಶ್ವದ ಮಾಜಿ ನಂ.1 ಆಟಗಾರ ಮರ್ರೆ ಫೈನಲ್‌ನಲ್ಲಿ ಮೂರನೇ ಶ್ರೇಯಾಂಕದ ಡೇನಿಯಲ್ ಮೆಡ್ವೆಡೆವ್‌ರನ್ನು ಎದುರಿಸಲಿದ್ದಾರೆ. ರಶ್ಯದ ಮೆಡ್ವೆಡೆವ್ ಕೆನಡಾದ 2ನೇ ಶ್ರೇಯಾಂಕದ ಫೆಲಿಕ್ಸ್ ಅಗೆರ್ ಅಲಿಯಸಿಮ್‌ರನ್ನು 6-4, 7-6(7) ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ.
35ರ ಹರೆಯದ ಮರ್ರೆ 4 ಪಂದ್ಯಗಳಲ್ಲಿ ನಾಲ್ಕನೇ ಬಾರಿ ಮೂರು ಸೆಟ್‌ಗಳಿಂದ ಪಂದ್ಯವನ್ನು ಜಯಿಸಿದ್ದಾರೆ.
Next Story