ಡಬ್ಲ್ಯುಪಿಎಲ್: ಯುಪಿ ವಾರಿಯರ್ಸ್ ಉಪ ನಾಯಕಿಯಾಗಿ ದೀಪ್ತಿ ಶರ್ಮಾ ಆಯ್ಕೆ

ಹೊಸದಿಲ್ಲಿ, ಫೆ.25: ಭಾರತದ ಆಲ್‌ರೌಂಡರ್ ದೀಪ್ತಿ ಶರ್ಮಾ ಮುಂಬರುವ ಮೊದಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್(ಡಬ್ಲ್ಯುಪಿಎಲ್)ಗೆ ಯುಪಿ ವಾರಿಯರ್ಸ್ ತಂಡದ ಉಪ ನಾಯಕಿಯಾಗಿ ಶನಿವಾರ ಆಯ್ಕೆಯಾಗಿದ್ದಾರೆ.
ಮಾರ್ಚ್ 4ರಿಂದ ಆರಂಭವಾಗಲಿರುವ ಟೂರ್ನಮೆಂಟ್‌ನಲ್ಲಿ ಅಲಿಸಾ ಹೀಲಿ ಯುಪಿ ವಾರಿಯರ್ಸ್‌ನ ನಾಯಕಿಯಾಗಿದ್ದರೆ, ದೀಪ್ತಿ ಉಪ ನಾಯಕಿಯಾಗಿರುತ್ತಾರೆ. ಇತ್ತೀಚೆಗೆ ನಡೆದ ಕ್ರಿಕೆಟ್ ಆಟಗಾರ್ತಿಯರ ಹರಾಜಿನಲ್ಲಿ ದೀಪ್ತಿ ಅವರನ್ನು ಯುಪಿ ಫ್ರಾಂಚೈಸಿಯು 2.6 ಕೋ.ರೂ. ನೀಡಿ ತನ್ನ ತೆಕ್ಕೆಗೆ ಸೇರಿಸಿಕೊಂಡಿತ್ತು.
ಭಾರತದ ಮಹಿಳಾ ಕ್ರಿಕೆಟ್ ತಂಡದಲ್ಲಿ ಆಲ್‌ರೌಂಡರ್ ದೀಪ್ತಿ ಪ್ರಮುಖ ಸದಸ್ಯೆಯಾಗಿದ್ದು, ದೇಶದ ಹೊರಗೆ ನಡೆಯುತ್ತಿರುವ ಫ್ರಾಂಚೈಸಿ ಆಧರಿತ ಟೂರ್ನಿಗಳಲ್ಲಿ ಭಾಗವಹಿಸಿರುವ ದೇಶದ ಕೆಲವೇ ಆಟಗಾರ್ತಿಯರ ಪೈಕಿ ಇವರೂ ಒಬ್ಬರಾಗಿದ್ದಾರೆ.
Next Story





