ದ.ಕ. ಜಿಲ್ಲೆ: ಲಾಡ್ಜ್, ಹೋಂ ಸ್ಟೇಗಳಿಗೆ ಪೊಲೀಸ್ ಅಧಿಕಾರಿಗಳು ಭೇಟಿ, ಪರಿಶೀಲನೆ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬರುವ ಲಾಡ್ಜ್, ಹೋಂ ಸ್ಟೇ ಗಳ ಮೇಲೆ ಸ್ಥಳೀಯ ಪೊಲೀಸ್ ಅಧಿಕಾರಿಗಳು ಅನಿರೀಕ್ಷಿತ ಭೇಟಿ ನೀಡಿ, ಕಾನೂನು ಬಾಹಿರ ಚಟುವಟಿಕೆ ಬಗ್ಗೆ ಪರಿಶೀಲಿಸಿ ನಡೆಸಿದರು.
ಲಾಡ್ಜ್, ಹೋಂ ಸ್ಟೇ ಗಳಲ್ಲಿರುವ ಸಿಸಿಟಿವಿ, ರಿಜಿಸ್ಟರ್ ಗಳನ್ನು ಪರಿಶೀಲನೆ ನಡೆಸಿದರು. ಯಾವುದೇ ರೀತಿಯ ಅಕ್ರಮ ಚಟುವಟಿಕೆ ನಡೆಸದಂತೆ ಲಾಡ್ಜ್ ಹಾಗೂ ಹೋಂ ಸ್ಟೇ ಮಾಲಕರಿಗೆ ತಿಳುವಳಿಕೆ ಹಾಗೂ ಎಚ್ಚರಿಕೆ ನೀಡಿದರು ಹಾಗೂ ಸಂಶಯಾಸ್ಪದ ವ್ಯಕ್ತಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.












