ಕಾರ್ಕಳ: ಬಾವಿಗೆ ಬಿದ್ದ ವ್ಯಕ್ತಿಯನ್ನು ರಕ್ಷಿಸಿದ ಅಗ್ನಿಶಾಮಕ ದಳ

ಕಾರ್ಕಳ: ಅಜೆಕಾರು ಕೈಕಂಬ ಎಂಬಲ್ಲಿ ಆಕಸ್ಮಿಕವಾಗಿ ಬಾವಿಗೆ ಬಿದ್ದ ವ್ಯಕ್ತಿಯೋರ್ವನನ್ನು ಕಾರ್ಕಳ ಅಗ್ನಿ ಶಾಮಕ ದಳವು ರಕ್ಷಿಸಿದ ಘಟನೆ ರವಿವಾರ ಬೆಳಿಗ್ಗೆ ನಡೆದಿರುವುದಾಗಿ ವರದಿಯಾಗಿದೆ.
ಸುಕುಮಾರ(40) ಎಂಬವರು ಬಾವಿಗೆ ಬಿದ್ದು ಜೀವಾಪಾಯದಿಂದ ಪಾರಾದವರು ಎಂದು ಗುರುತಿಸಲಾಗಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿದ್ದು, ಬಾವಿಗೆ ಬಿದ್ದಿದ್ದ ವ್ಯಕ್ತಿಯನ್ನು ಮೇಲೆಕ್ಕೆ ಎತ್ತಿ ರಕ್ಷಣೆ ಮಾಡಿದ್ದಾರೆ ಎಂದು ಸ್ಥಳೀಯುರು ತಿಳಿಸಿದ್ದಾರೆ. ಆಕಸ್ಮಿಕವಾಗಿ ಯುವಕ ಬಿದ್ದಿರಬೇಕೆಂದು ಶಂಕಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಬಿ ಎಂ ಸಂಜೀವ್, ದಪೆದರ್ ಅಚ್ಚುತ ಸಿಬ್ಬಂದಿ ಚಂದ್ರಶೇಖರ್, ನಿತ್ಯಾನಂದ, ಸುಜಯ್, ಉಮೇಶ್, ವಿನಾಯಕ, ಸಂಜಯ್ ಪಾಲ್ಗೊಂಡಿದ್ದರು
Next Story