ಮಧ್ಯಪ್ರದೇಶ: ಮದುವೆಯೂಟ ಉಂಡ ಬಳಿಕ 43 ಮಂದಿ ಅಸ್ವಸ್ಥ

ಖಾರ್ಗೋನ್: ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಆಹಾರ ಸೇವಿಸಿದ ನಂತರ ನಲವತ್ತಮೂರು ಜನರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ರವಿವಾರ ತಿಳಿಸಿದ್ದಾರೆ.
ಶನಿವಾರ ರಾತ್ರಿ ಖಾರ್ಗೋನ್‌ನ ಹೊಸ ವಸತಿ ಮಂಡಳಿ ಕಾಲೋನಿಯಲ್ಲಿ ವಿವಾಹದ ಕಾರ್ಯವನ್ನು ನಡೆಸಲಾಗಿತ್ತು.
ಅಲ್ಲಿ ಹಣ್ಣಿನಿಂದ ತಯಾರಿಸಿದ ಕಸ್ಟರ್ಡ್ ಸೇವಿಸಿದ ನಂತರ, 43 ಜನರು ವಾಂತಿ ಮಾಡಿ ಅಸ್ವಸ್ಥರಾಗಿದ್ದಾರೆ ಎಂದು ಜಿಲ್ಲಾ ಆಸ್ಪತ್ರೆಯ ಡಾ. ಬಿ ಎಂ ಚೌಹಾನ್ ಹೇಳಿದ್ದಾರೆ.
ರೋಗಿಗಳಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಔಷಧಿಗಳನ್ನು ನೀಡಲಾಯಿತು. ಅವರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಿದರು. ಪ್ರಾಥಮಿಕ ಚಿಕಿತ್ಸೆಯ ನಂತರ ಅವರಲ್ಲಿ ಹೆಚ್ಚಿನವರನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.
Next Story





