ಮಂಗಳೂರು: ಟೆಂಪೋ ಚಾಲಕ, ಮಾಲಕರ ಸಂಘದ ಉದ್ಘಾಟನೆ

ಮಂಗಳೂರು, ಫೆ.26: ಟೆಂಪೊ ಚಾಲಕರು ಮತ್ತು ಮಾಲಕರು ಗೌರವಯುತ ಮತ್ತು ಘನತೆಯಿಂದ ಜೀವನ ನಡೆಸಲು ತಮ್ಮ ಸಂಘಟನೆಗೆ ಎಲ್ಲರನ್ನು ಸೇರಿಸುವ ಮೂಲಕ ಸಂಘಟನೆಯನ್ನು ಇನ್ನಷ್ಟು ಬಲಿಷ್ಠವಾಗಿ ಕಟ್ಟಬೇಕಾಗಿದೆ ಎಂದು ಮಗಳೂರಿನ ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ ಹೇಳಿದ್ದಾರೆ.
ಇಲ್ಲಿನ ಪಾಂಡೇಶ್ವರದಲ್ಲಿ ರವಿವಾರ ನಡೆದ ಬಂದರ್‌ನ ಟೆಂಪೊ ಚಾಲಕ ಮತ್ತು ಮಾಲಕರ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕಾರ್ಪೊರೇಟರ್ ಅಬ್ದುಲ್ ಲತೀಫ್, ದ.ಕ. ಮತ್ತು ಸ್ಟೀಲ್ ಟ್ರೇಡರ್ಸ್ ಅಸೋಸಿಯೇಶನ್‌ನ ಕಾರ್ಯದರ್ಶಿ ಮೊಯ್ದೀನ್ ಸೈಫ್, ತುಳುನಾಡು ರಕ್ಷಣಾ ವೇದಿಕೆಯ ಕಾರ್ಮಿಕ ವಿಭಾಗದ ಕಾರ್ಯದರ್ಶಿ ನಾಗೇಶ್ ಶೆಟ್ಟಿ, ವರ್ತಕರಾದ ವಿಕ್ರಮ್ ಸಿಂಗ್ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಬಂದರ್‌ನ ಟೆಂಪೊ ಚಾಲಕ ಮತ್ತು ಮಾಲಕರ ಸಂಘದ ಅಧ್ಯಕ್ಷ ಮಕ್ಬೂಲ್ ಅಹ್ಮದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ದೇವದಾಸ್ ಎನ್ ಪೂಜಾರಿ ಸ್ವಾತಿಸಿದರು. ಕಾಸಿಮ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
Next Story