ಬೆಂಗಳೂರು: ಮನೆಗಳ್ಳತನ ಆರೋಪಿಯ ಪತ್ತೆಗೆ ನೆರವಾದ ಆಧಾರ್ ಕಾರ್ಡ್

ಬೆಂಗಳೂರು: ಮನೆಗಳ್ಳತನ ಮಾಡಿ ಚಿನ್ನಾಭರಣವನ್ನು ಕದ್ದು ಪರಾರಿಯಾಗಿದ್ದ ವ್ಯಕ್ತಿ, ಗಿರವಿ ಅಂಗಡಿಯಲ್ಲಿ ಮಾರಾಟಕ್ಕೆ ಬಂದಾಗ ಸಿಕ್ಕಿ ಬಿದ್ದಿರುವ ಘಟನೆ ಶೇಷಾದ್ರಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮನೆಯಲ್ಲಿದ್ದ ಸುಮಾರು 70 ಗ್ರಾಂ ಚಿನ್ನವನ್ನು ಕದ್ದೊಯ್ದಿದ್ದ ಆರೋಪಿ ಪ್ರಶಾಂತ್ ಪಚ್ಚಿ ಎಂಬಾತನನ್ನು ಶೇಷಾದ್ರಿಪುರಂ ಪೊಲೀಸರು ಬಂಧಿಸಿದ್ದು, ಆತನಿಂದ 70 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಮನೆಗಳ್ಳತನ ಮಾಡಿದ ಆರೋಪಿ ಪ್ರಶಾಂತ್ ಪಚ್ಚಿ, ಸದಾಶಿವನಗರದವರೆಗೂ ನಡೆದುಕೊಂಡು ಹೋಗಿದ್ದ ಎನ್ನಲಾಗಿದ್ದು, ಮತ್ತಿಕೆರೆ ಸಮೀಪದ ಜ್ಯುವೆಲ್ಲರಿ ಶಾಪ್‍ನಲ್ಲಿ ಚಿನ್ನ ಅಡವಿಟ್ಟಿದ್ದ. ಆರೋಪಿಗಾಗಿ ಪೊಲೀಸರು 150 ಸಿಸಿಟಿವಿಗಳಲ್ಲಿ ಹುಡುಕಾಟ ನಡೆಸಿದ್ದರು.
ಜ್ಯುವೆಲ್ಲರಿ ಅಂಗಡಿಯಲ್ಲಿ ಚಿನ್ನ ಅಡವಿಟ್ಟಾಗ ಕೊಟ್ಟ ಆಧಾರ್ ಕಾರ್ಡ್ ಮೂಲಕ ಆರೋಪಿಯ ಸುಳಿವು ಸಿಕ್ಕಿದೆ. ಪ್ರಶಾಂತ್ ಈ ಹಿಂದೆ ಯಶವಂತಪುರ ಸೇರಿದಂತೆ ಹಲವು ಠಾಣೆಗಳಲ್ಲಿ ಕಳ್ಳತನ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ.
ಇದನ್ನೂ ಓದಿ: ಪರೀಕ್ಷೆಯಲ್ಲಿ ಹೆಚ್ಚುವರಿ ಸಮಯ ನೀಡದ್ದಕ್ಕೆ ಪೀಠೋಪಕರಣ ಧ್ವಂಸ ಮಾಡಿದ ವಿದ್ಯಾರ್ಥಿಗಳು