ಸಮಾಜವನ್ನು ನಿರ್ಲಕ್ಷಿಸಿದ್ದ ದಲಿತ ನೌಕರರ ಬಗ್ಗೆ ಅಂಬೇಡ್ಕರ್ ದುಃಖಿಸಿದ್ದರು: ಜಯನ್ ಮಲ್ಪೆ

ಉಡುಪಿ: ಕೀಳಾಗಿ ಜೀವಿಸುತ್ತಿದ್ದ ಜನಾಂಗವನ್ನು ಬ್ರಾಹ್ಮಣರ ಪಕ್ಕ ಸಮಾನವಾಗಿ ಕೂರುವಂತೆ ಮಾಡಿದವರು ಅಂಬೇಡ್ಕರ್. ಅಂಬೇಡ್ಕರ್ ಮೀಸ ಲಾತಿ ಕೊಡಿಸಿದ್ದು ದಲಿತ ಸಮಾಜವನ್ನು ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮೇಲ್ವರ್ಗದವರ ಸಮಾನರಾಗಲಿ ಎಂಬ ಕಾರಣಕ್ಕೆ. ಆದರೆ ಮೀಸಲಾ ತಿಯ ಲಾಭ ಪಡೆದ ದಲಿತ ನೌಕರರು ತಮ್ಮ ಸಮಾಜವನ್ನೇ ನಿರ್ಲಕ್ಷಿಸಿದ ಬಗ್ಗೆ ಅಂಬೇಡ್ಕರ್ ದು:ಖಪಟ್ಟಿದ್ದಾರೆ ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.
ಬೈಂದೂರು ತಾಲೂಕು ಅಂಬೇಡ್ಕರ್ ಯವಸೇನೆಯನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು. ಶಿಕ್ಷಣ, ಸಂಘಟನೆ, ಹೋರಾಟ ಎಂಬ ಮಂತ್ರವನ್ನು ಇಂದು ದಲಿತ ನೌಕರರು ಶಿಕ್ಷಣ, ಸಂಸಾರ, ಸ್ವಾರ್ಥವಾಗಿ ಪರಿವರ್ತಿಸಿ ಕೊಂಡಿರುವುದು ನಿಜಕ್ಕೂ ನಾಚಿಕೆಗೇಡು. ದಲಿತರ ಕಣ್ಣೀರೊರೆಸಿದ ಆ ಮಹಾನಾಯಕನ ಕಣ್ಣಲೇ ನೀರಾಕಿಸಿ ಬಿಟ್ಟೆವು ಎಂದರು.
ಮುಖ್ಯ ಅತಿಥಿಯಾಗಿ ವರಲಕ್ಷೀ ಜಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಡಾ.ಗೋವಿಂದ ಬಾಬು ಪೂಜಾರಿ ಮಾತನಾಡಿ, ಇಂದು ಮನವಾದಿಗಳು ತಮ್ಮ ಸ್ವಾರ್ಥಕ್ಕಾಗಿ ದಲಿತರನ್ನು ಉಪಯೋಗಿಸುತ್ತಿದ್ದಾರೆ. ಸಮಜವಾದ ಉಳಿವಿಗಾಗಿ ಎಲ್ಲಾ ವರ್ಗದ ಮುಖಂಡರು ಒಂದಾಗಿ ಕೆಲಸಮಾಡಬೇಕಾಗಿದೆ. ಇಲ್ಲಿ ಪ್ರಶ್ನೇ ಮಾಡುವವರನೇ ವಿರೋಧಿಗಳಂತೆ ನೋಡುತ್ತಿದ್ದಾರೆ ಎಂದರು.
ಮಾಜಿ ಜಿಪಂ ಅಧ್ಯಕ್ಷ ಎಸ್.ರಾಜು ಪೂಜಾರಿ ಮಾತನಾಡಿ, ದಲಿತ ಸಮಾಜ ಶೈಕ್ಷಣಿಕವಾಗಿ ಮುಂದೆ ಬರುವಂತೆ ನೋಡಬೇಕು. ಶಿಕ್ಷಣದಿಂದಲೇ ಅಂಬೇಡ್ಕರ್ ಜಗತ್ತಿನಲ್ಲಿ ಶ್ರೇಷ್ಟರಾಗಲು ಕಾರಣ. ದಲಿತರನ್ನು ಕಾಡುತ್ತಿರುವ ಸಮಸ್ಯೆಗಳಿಗೆ ದಲಿತ ಸಂಘಟನೆಗಳು ದುಡಿಯಬೇಕಾಗಿದೆ ಎಂದರು.
ಬೈಂದೂರು ಠಾಣಾಧಿಕಾರಿ ನಿರಂಜನ ಗೌಡ ಮಾತನಾಡಿ, ಅಂಬೇಡ್ಕರ್ ರವರನ್ನು ವಿವಿಧ ಆಯಾಮಗಳಿಂದ ನೋಡಬೇಕಾದ ಈ ಕಾಲಘಟ್ಟದಲ್ಲಿ ಕೇವಲ ಮೀಸಲಾತಿಲಾಗಿ ಇಲ್ಲ. ದಲಿತ ನಾಯಕನಾಗಿ ನೋಡುವುದು ಸರಿಯಲ್ಲ ಎಂದರು.
ಅಧ್ಯಕ್ಷತೆಯನ್ನು ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಹರೀಶ್ ಸಾಲಿಯಾನ್ ವಹಿಸಿದ್ದರು. ವಕೀಲ ಮಂಗುನಾಥ ಗಿಳಿಯಾರು, ಎಸ್. ಪ್ರಶಾಶ್ಚಂದ್ರ ಶೆಟ್ಟಿ, ವಕೀಲ ಪ್ರಶಾಂತ್ ಪೂಜಾರಿ ಮಾತನಾಡಿದರು. ಚಂದ್ರ ಹಳಗೇರಿ, ರಮೇಶ್ ಪಾಲ್, ರಾಮ ಬೈಂದೂರು, ಮಹಾಲಿಂಗ ನಾಯ್ಕ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ರಾಜ್ಯಮಟ್ಟದ ಸ್ಕೌಟ್ ಮತ್ತು ಗೈಡ್ಸ್ ಪ್ರಶಸ್ತಿ ವಿಜೇತೆ ಸಾನಿಕಾರನ್ನು ಸಮ್ಮಾನ ಮಾಡಲಾಯಿತು. ನರಸಿಂಹ ಹಳಗೇರಿ ಸ್ವಾಗತಿಸಿದರು. ವೆಂಕಪ್ಪ ಮಾಸ್ತರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಗದೀಶ್ ವಂದಿಸಿ ದರು. ಸತ್ಯನಾ ಕೋಡೇರಿ ಕಾರ್ಯಕ್ರಮ ನಿರೂಪಿಸಿದರು.