Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಭಾರತದಲ್ಲಿಯ ಜಿ-20 ಸಭೆ: ರಷ್ಯಾ-ಉಕ್ರೇನ್...

ಭಾರತದಲ್ಲಿಯ ಜಿ-20 ಸಭೆ: ರಷ್ಯಾ-ಉಕ್ರೇನ್ ಯುದ್ಧದ ಕುರಿತು ಒಮ್ಮತವಿಲ್ಲದೆ ಅಂತ್ಯ

26 Feb 2023 11:00 PM IST
share
ಭಾರತದಲ್ಲಿಯ ಜಿ-20 ಸಭೆ: ರಷ್ಯಾ-ಉಕ್ರೇನ್ ಯುದ್ಧದ ಕುರಿತು ಒಮ್ಮತವಿಲ್ಲದೆ ಅಂತ್ಯ

ಹೊಸದಿಲ್ಲಿ: ಶನಿವಾರ ಬೆಂಗಳೂರಿನಲ್ಲಿ ನಡೆದ ಜಿ20 ದೇಶಗಳ ಹಣಕಾಸು ಸಚಿವರ ಸಭೆಯು ಉಕ್ರೇನ್ನಲ್ಲಿಯ ಯುದ್ಧವನ್ನು ಟೀಕಿಸುವ ಪ್ಯಾರಾದ ಸೇರ್ಪಡೆಯನ್ನು ಚೀನಾ ಮತ್ತು ರಷ್ಯಾ ವಿರೋಧಿಸಿದ ಬಳಿಕ ಯಾವುದೇ ಜಂಟಿ ಹೇಳಿಕೆಯನ್ನು ಹೊರಡಿಸದೆ ಅಂತ್ಯಗೊಂಡಿತು.

ಸಭೆಯನ್ನು ಆಯೋಜಿಸಿದ್ದ ಭಾರತವು ಹೊರಡಿಸಿದ ‘ಅಧ್ಯಕ್ಷರ ಸಾರಾಂಶ’ದಲ್ಲಿ ಉಕ್ರೇನ್ನಲ್ಲಿಯ ಪರಿಸ್ಥಿತಿ ಮತ್ತು ರಷ್ಯಾದ ವಿರುದ್ಧ ಹೇರಲಾಗಿರುವ ನಿರ್ಬಂಧಗಳ ಕುರಿತು ಭಿನ್ನಾಭಿಪ್ರಾಯಗಳಿದ್ದವು ಎಂದು ಹೇಳಲಾಗಿದೆ.

ರಷ್ಯಾ ಉಕ್ರೇನ್ನಲ್ಲಿಯ ತನ್ನ ಕ್ರಮವನ್ನು ಆ ದೇಶವನ್ನು ಪಾಶ್ಚಾತ್ಯ ಆಕ್ರಮಣಕ್ಕೆ ವೇದಿಕೆಯಾಗಿ ಬಳಸುವುದನ್ನು ತಡೆಯಲು ಅಗತ್ಯವಾದ ‘ವಿಶೇಷ ಮಿಲಿಟರಿ ಕಾರ್ಯಾಚರಣೆ’ ಎಂದು ಉಲ್ಲೇಖಿಸುತ್ತದೆ. ಅದು ಸಂಘರ್ಷವನ್ನು ಆಕ್ರಮಣ ಅಥವಾ ಯುದ್ಧ ಎಂದು ಬಣ್ಣಿಸುವುದನ್ನು ಇಷ್ಟಪಡುವುದಿಲ್ಲ. ಯಾವುದೇ ಅಧಿಕೃತ ಹೇಳಿಕೆಯಲ್ಲಿ ‘ಯುದ್ಧ’ ಪದವನ್ನು ಬಳಸದಂತೆ ಭಾರತವೂ ಪ್ರತಿನಿಧಿಗಳನ್ನು ಆಗ್ರಹಿಸಿತ್ತು ಎಂದು ಗುರುತಿಸಲ್ಪಡದ ಜಿ20 ಅಧಿಕಾರಿಗಳು ಸುದ್ದಿಸಂಸ್ಥೆಗೆ ತಿಳಿಸಿದರು. ಶುಕ್ರವಾರ ಭಾರತವು ವಿಶ್ವಸಂಸ್ಥೆಯಲ್ಲಿ ಉಕ್ರೇನ್ನಿಂದ ರಷ್ಯಾ ಪಡೆಗಳ ಬೇಷರತ್ ವಾಪಸಾತಿಗೆ ಕರೆ ನೀಡಿದ್ದ ನಿರ್ಣಯದ ಮೇಲೆ ಮತದಾನದಿಂದ ದೂರವುಳಿದಿತ್ತು.

ಸಂಘರ್ಷದಲ್ಲಿ ತನ್ನ ತಟಸ್ಥ ನಿಲುವನ್ನು ಕಾಯ್ದುಕೊಂಡಿರುವ ಭಾರತವು ಉಕ್ರೇನ್ ಮೇಲಿನ ರಷ್ಯಾ ಆಕ್ರಮಣವನ್ನು ಸ್ಪಷ್ಟವಾಗಿ ಖಂಡಿಸಿಲ್ಲ. ಭಾರತವು ಯುದ್ಧ ಆರಂಭವಾದಾಗಿನಿಂದ ರಷ್ಯಾದಿಂದ ತನ್ನ ಕಚ್ಚಾತೈಲದ ಆಮದನ್ನೂ ತೀವ್ರವಾಗಿ ಹೆಚ್ಚಿಸಿದ್ದು, ಈ ಕ್ರಮವನ್ನು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಪದೇ ಪದೇ ಸಮರ್ಥಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿಯ ಜಿ20 ಸಭೆಯು ರಾಜಕೀಯ ವಿಷಯಗಳಿಗೆ ಬಳಕೆಯಾಗುವುದನ್ನು ಚೀನಾ ಮತ್ತು ರಷ್ಯಾ ಬಯಸಿರಲಿಲ್ಲ ಎಂದು ಪ್ರತಿನಿಧಿಗಳು ಸುದ್ದಿಸಂಸ್ಥೆಗೆ ತಿಳಿಸಿದರು.
ಶನಿವಾರದ ‘ಅಧ್ಯಕ್ಷರ ಸಾರಾಂಶ’ದ ಅಡಿಟಿಪ್ಪಣಿಯು, ನವಂಬರ್ನ ಜಿ20 ಬಾಲಿ ಘೋಷಣೆಯಿಂದ ಎರಡು ಪ್ಯಾರಾಗಳನ್ನು ಅಳವಡಿಸಿಕೊಳ್ಳಲಾಗಿತ್ತು ಎಂದು ಹೇಳಿದೆ. ಚೀನಾ ಮತ್ತು ರಷ್ಯಾ ಈ ಪ್ಯಾರಾಗಳ ಬಗ್ಗೆ ಆಕ್ಷೇಪಗಳನ್ನು ಹೊಂದಿದ್ದವು ಎಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಸುದ್ದಿಗಾರರಿಗೆ ತಿಳಿಸಿದರು.

‘ಹೆಚ್ಚಿನ ಸದಸ್ಯರು ಉಕ್ರೇನ್ನಲ್ಲಿಯ ಯುದ್ಧವನ್ನು ಬಲವಾಗಿ ಖಂಡಿಸಿದ್ದಾರೆ ಮತ್ತು ಅದು ಜನರ ತೀವ್ರ ಸಂಕಷ್ಟಗಳಿಗೆ ಕಾರಣವಾಗುತ್ತದೆ ಹಾಗೂ ಜಾಗತಿಕ ಆರ್ಥಿಕತೆಯಲ್ಲಿ ಹಾಲಿ ಅಸ್ತಿತ್ವದಲ್ಲಿರುವ ದುರ್ಬಲತೆಗಳನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ. ಪರಿಸ್ಥಿತಿ ಮತ್ತು ನಿರ್ಬಂಧಗಳ ಕುರಿತು ಇತರ ದೃಷ್ಟಿಕೋನಗಳು ಮತ್ತು ವಿಭಿನ್ನ ಮೌಲ್ಯಮಾಪನಗಳಿದ್ದವು. ಜಿ20 ಭದ್ರತಾ ಸಮಸ್ಯೆಗಳನ್ನು ಬಗೆಹರಿಸುವ ವೇದಿಕೆಯಲ್ಲ. ಭದ್ರತಾ ಸಮಸ್ಯೆಗಳು ಜಾಗಿತಿಕ ಆರ್ಥಿಕತೆಯ ಮೇಲೆ ಗಮನಾರ್ಹ ಪರಿಣಾಮಗಳನ್ನುಂಟು ಮಾಡಬಹದು ಎನ್ನುವುದನ್ನು ನಾವು ಒಪ್ಪಿಕೊಳ್ಳುತ್ತೇವೆ ’ ಎಂದು ಬಾಲಿ ಘೋಷಣೆಯ ಒಂದು ಪ್ಯಾರಾ ಹೇಳಿದ್ದರೆ ಇನ್ನೊಂದು ಪ್ಯಾರಾ,ಅಂತರರಾಷ್ಟ್ರೀಯ ಕಾನೂನು ಹಾಗೂ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡುವ ಬಹುಪಕ್ಷೀಯ ವ್ಯವಸ್ಥೆಯನ್ನು ಎತ್ತಿ ಹಿಡಿಯುವದು ಅಗತ್ಯವಾಗಿದೆ. ಅಣ್ವಸ್ತ್ರಗಳ ಬಳಕೆ ಅಥವಾ ಅವುಗಳನ್ನು ಬಳಸುವ ಬೆದರಿಕೆಯನ್ನು ಒಪ್ಪಿಕೊಳ್ಳಲಾಗುವುದಿಲ್ಲ. ಸಂಘರ್ಷಗಳ ಶಾಂತಿಯುತ ಪರಿಹಾರ,ಬಿಕ್ಕಟ್ಟನ್ನು ಬಗೆಹರಿಸಲು ಪ್ರಯತ್ನಗಳು ಹಾಗೂ ರಾಜತಾಂತ್ರಿಕತೆ ಮತ್ತು ಮಾತುಕತೆಗಳು ಮುಖ್ಯವಾಗಿವೆ. ಇಂದಿನ ಯುಗವು ಯುದ್ಧದ್ದಾಗಿರಬಾರದು ’ಎಂದು ಹೇಳಿತ್ತು.

ಜಂಟಿ ಹೇಳಿಕೆಯನ್ನು ಹೊರಡಿಸುವಲ್ಲಿ ಒಮ್ಮತಕ್ಕೆ ಬರುವಲ್ಲಿ ವೈಫಲ್ಯವು ವಿಷಾದನೀಯವಾಗಿದೆ ಎಂದು ಶುಕ್ರವಾರ ಹೇಳಿದ್ದ ಜರ್ಮನಿಯ ವಿತ್ತಸಚಿವ ಕ್ರಿಶ್ಚಿಯನ್ ಲಿಂಡ್ನರ್ ಅವರು,ಇದು ಯುದ್ಧ ಮತ್ತು ಇದಕ್ಕೆ ಕಾರಣವಿದೆ, ಅದು ರಷ್ಯಾ ಮತ್ತು ವ್ಲಾದಿಮಿರ್ ಪುಟಿನ್. ಜಿ20 ಹಣಕಾಸು ಸಭೆಯಲ್ಲಿ ಇದನ್ನು ಸ್ಪಷ್ಟವಾಗಿ ವ್ಯಕ್ತಪಡಿಸಬೇಕು ಎಂದಿದ್ದರು.

share
Next Story
X