Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ವಿಯೆಟ್ನಾಂಗೆ ಕಳಪೆ ದರ್ಜೆಯ ಔಷಧಿಯನ್ನು...

ವಿಯೆಟ್ನಾಂಗೆ ಕಳಪೆ ದರ್ಜೆಯ ಔಷಧಿಯನ್ನು ರಫ್ತು ಮಾಡಿದ ಪ್ರಕರಣದಲ್ಲಿಯೂ ಮೇಡನ್ ಫಾರ್ಮಾಸ್ಯೂಟಿಕಲ್ಸ್ ದೋಷಿ

ಗಾಂಬಿಯಾದಲ್ಲಿ 70 ಮಕ್ಕಳ ಸಾವಿಗೆ ಕಾರಣವಾದ ಕೆಮ್ಮಿನ ಸಿರಪ್ ನ ತಯಾರಕ ಕಂಪೆನಿಗೆ ಇನ್ನೊಂದು ಕಾನೂನು ಸಂಕಷ್ಟ

26 Feb 2023 11:04 PM IST
share
ವಿಯೆಟ್ನಾಂಗೆ ಕಳಪೆ ದರ್ಜೆಯ ಔಷಧಿಯನ್ನು ರಫ್ತು ಮಾಡಿದ ಪ್ರಕರಣದಲ್ಲಿಯೂ ಮೇಡನ್ ಫಾರ್ಮಾಸ್ಯೂಟಿಕಲ್ಸ್ ದೋಷಿ
ಗಾಂಬಿಯಾದಲ್ಲಿ 70 ಮಕ್ಕಳ ಸಾವಿಗೆ ಕಾರಣವಾದ ಕೆಮ್ಮಿನ ಸಿರಪ್ ನ ತಯಾರಕ ಕಂಪೆನಿಗೆ ಇನ್ನೊಂದು ಕಾನೂನು ಸಂಕಷ್ಟ

ಹೊಸದಿಲ್ಲಿ: ಆಫ್ರಿಕದ ರಾಷ್ಟ್ರವಾದ ಗಾಂಬಿಯಾದಲ್ಲಿ 70 ಮಂದಿ ಮಕ್ಕಳ ಸಾವಿಗೆ ಕಾರಣವಾದ ಕಲುಷಿತ ಕೆಮ್ಮಿನ ಸಿರಪ್ಗಳ ತಯಾರಕ ಸಂಸ್ಥೆಯಾಗಿರುವ ಹರ್ಯಾಣದ ‘ಮೇಡನ್ ಫಾರ್ಮಾಸ್ಯೂಟಿಕಲ್ ಅನ್ನು 2013ರಲ್ಲಿ ವಿಯೆಟ್ನಾಂಗೆ ಕಳಪೆ ದರ್ಜೆಯ ಔಷಧಿಯನ್ನು ಕಳುಹಿಸಿದ ಪ್ರಕರಣದಲ್ಲಿಯೂ ದೋಷಿಗಳೆಂದು ಪರಿಗಣಿಸಿ ಸೋನೆಪತ್ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ. ಕಳಪೆ ದರ್ಜೆಯ ರ್ಯಾನಿಟಿಡೈನ್ ಹೈಡ್ರೊಕ್ಲೋರೈಡ್ ಮಾತ್ರೆಗಳನ್ನು ‘ಬಿಪಿ (ಮಾನೆಕ್-150)’ ಎಂಬ ಬ್ರಾಂಡ್ ಹೆಸರಿನಲ್ಲಿ ರಫ್ತು ಮಾಡಿದ ಪ್ರಕರಣದಲ್ಲಿ ಮೇಡನ್ ಫಾರ್ಮಾಸ್ಯೂಟಿಕಲ್ ಕಂಪೆನಿ, ಅದರ ನಿರ್ದೇಶಕ ನರೇಶ್ ಕುಮಾರ್ ಗೋಯಲ್ ಹಾಗೂ ತಾಂತ್ರಿಕ ನಿರ್ದೇಶಕ ಎಂ.ಕೆ. ಶರ್ಮಾ ದೋಷಿಗಳೆಂದು ನ್ಯಾಯಾಲಯವು ಫೆಬ್ರವರಿ 22ರಂದು ನೀಡಿದ ತೀರ್ಪಿನಲ್ಲಿ ಘೋಷಿಸಿದೆಯೆಂದು ‘ ದಿ ಟ್ರಿಬ್ಯೂನ್’ ಪತ್ರಿಕೆ ವರದಿ ಮಾಡಿದೆ. ರ್ಯಾನಿಟಿಡೈನ್ ಎದೆ ಉರಿಯ ತೊಂದರೆಯನ್ನು ಗುಣಪಡಿಸಲು ಬಳಸುವ ಮಾತ್ರೆಯಾಗಿದೆ.

ಈ ಪ್ರಕರಣದಲ್ಲಿ ಗೋಯಲ್ ಹಾಗೂ ಶರ್ಮಾ ಇಬ್ಬರಿಗೂ ಔಷಧಿ ಹಾಗೂ ಪ್ರಸಾದನಾ ಸಾಮಾಗ್ರಿಗಳ ಕಾಯ್ದೆಯ ಸೆಕ್ಷನ್ 27(ಡಿ) ಅಡಿ, ತಲಾ ಎರಡೂವರೆ ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಲಾಗಿದೆ.

ಏನಿದು ಪ್ರಕರಣ: 2013ರ ಡಿಸೆಂಬರ್ ನಲ್ಲಿ ಆಗ ವಿಯೆಟ್ನಾಂನಲ್ಲಿನ ಭಾರತೀಯ ರಾಯಭಾರಿ ಕಚೇರಿಯ ಕಾನ್ಸುಲ್ ಜನರಲ್ ಆಗಿದ್ದ ದೀಪಕ್ ಮಿತ್ತಲ್ ಅವರು ಕೇಂದ್ರ ಆರೋಗ್ಯ ಸಚಿವರಿಗೆ ಪತ್ರ ಬರೆದು ಮೇಡನ್ ಫಾರ್ಮಾಸ್ಯೂಟಿಕಲ್ಸ್ ಸೇರಿದಂತೆ ವಿಯೆಟ್ನಾಂಗೆ ಕಳಪೆದರ್ಜೆಯ ಔಷಧಿಗಳನ್ನು ಪೂರೈಕೆ ಮಾಡಿದ್ದ 46 ಭಾರತೀಯ ಕಂಪೆನಿಗಳನ್ನು ಕಪ್ಪುಪಟ್ಟಿಗೆ ಸೇರ್ಪಡೆಗೊಳಿಸಬೇಕೆಂದು ಕೋರಿ ಪತ್ರ ಬರೆದಿದ್ದರು.

ಈ 46 ಕಂಪೆನಿಗಳ ಹಿನ್ನೆಲೆಗಳನ್ನು ಪರಿಶೀಲಿಸುವಂತೆ ಹಾಗೂ ಭಾರತೀಯ ಫಾರ್ಮಾ ಕೈಗಾರಿಕೆಗಳಿಗೆ ವಿದೇಶಗಳಲ್ಲಿ ಕೆಟ್ಟ ಹೆಸರು ತಂದಿದ್ದಕ್ಕಾಗಿ ಅವುಗಳಿಗೆ ದಂಡ ವಿಧಿಸುವಂತೆಯೂ ಮಿತ್ತಲ್ ಆರೋಗ್ಯ ಸಚಿವಾಲಯವನ್ನು ಆಗ್ರಹಿಸಿದ್ದರು.  2014ರಲಿ ಮೇಡನ್ ಫಾರ್ಮಾಸ್ಯೂಟಿಕಲ್ಸ್ನ ರ್ಯಾನಿಟಿಡೈನ್ ಮಾತ್ರೆಗಳ ಮಾದರಿಗಳನ್ನು ಚಂಡೀಗಢದಲ್ಲಿರುವ ಪ್ರಾದೇಶಿಕ ಔಷಧಿ ಪರೀಕ್ಷಾ ಪ್ರಯೋಗಾಲಯವು ಪರಿಶೀಲನೆ ನಡೆಸಿದ್ದು, ಅವು ನಿಗದಿತ ಗುಣಮಟ್ಟವನ್ನು ಹೊಂದಿಲ್ಲವೆಂದು ಘೋಷಿಸಿತ್ತು.

ಮೇಡನ್ ಫಾರ್ಮಾಸ್ಯೂಟಿಕಲ್ಸ್ ನ ರ್ಯಾನಿಟಿಡೈನ್ ಔಷಧಿಯಲ್ಲಿ ಸಕ್ರಿಯ ಪದಾರ್ಥಗಳು ಸಮಾನರೂಪದಲ್ಲಿ ಇರಲಿಲ್ಲವೆಂದು ಪ್ರಯೋಗಾಲಯವು ವರದಿಯಲ್ಲಿ ತಿಳಿಸಿತ್ತು. 2014ರ ಸೆಪ್ಟೆಂಬರ್ನಲ್ಲಿ ಅಧಿಕಾರಿಗಳು ಮೇಡನ್ ಫಾರ್ಮಾಸ್ಯೂಟಿಕ್ಸ್ಗೆ ನೋಟಿಸ್ ರವಾನಿಸಿದ್ದು, ಔಷಧಿಯ  ಮಾರಾಟ ಹಾಗೂ ವಿತರಣೆಯನ್ನು ನಿಲ್ಲಿಸುವಂತೆ ಹಾಗೂ ತಕ್ಷಣವೇ ದಾಸ್ತಾನನ್ನು ಹಿಂಪಡೆದುಕೊಳ್ಳುವಂತೆ ಸೂಚಿಸಿದ್ದರು.

share
Next Story
X