Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಪೂರ್ವ ಆಫ್ರಿಕಾದಲ್ಲಿ ಬರಗಾಲದಿಂದ 22...

ಪೂರ್ವ ಆಫ್ರಿಕಾದಲ್ಲಿ ಬರಗಾಲದಿಂದ 22 ದಶಲಕ್ಷ ಜನರಿಗೆ ಆಹಾರದ ಕೊರತೆ: ವಿಶ್ವಸಂಸ್ಥೆ

26 Feb 2023 11:43 PM IST
share
ಪೂರ್ವ ಆಫ್ರಿಕಾದಲ್ಲಿ ಬರಗಾಲದಿಂದ 22 ದಶಲಕ್ಷ ಜನರಿಗೆ ಆಹಾರದ ಕೊರತೆ: ವಿಶ್ವಸಂಸ್ಥೆ

ರಿಯಾದ್,  ಫೆ.26: ಪೂರ್ವ ಆಫ್ರಿಕಾ ವಲಯದಲ್ಲಿ ತೀವ್ರ ಬರಗಾಲದ ಸಮಸ್ಯೆಯಿಂದಾಗಿ ಲಕ್ಷಾಂತರ ಜನರು ಉಪವಾಸ ಬೀಳುವ ಪರಿಸ್ಥಿತಿಯಿದೆ ಎಂದು ವಿಶ್ವಸಂಸ್ಥೆಯ ಹಿರಿಯ ಅಧಿಕಾರಿ ಮೈಕೆಲ್ ಡನ್ಫೋರ್ಡ್ ಹೇಳಿದ್ದಾರೆ.

ಸೊಮಾಲಿಯಾ ಸೇರಿದಂತೆ ಪೂರ್ವ ಆಫ್ರಿಕಾದಲ್ಲಿ ಪ್ರಸ್ತುತ ಪರಿಸ್ಥಿತಿಯು ಇತ್ತೀಚಿನ ಇತಿಹಾಸದಲ್ಲಿ ನಾವು ನೋಡಿದ ಆಹಾರ ಅಭದ್ರತೆಯಲ್ಲಿ ಅತ್ಯಂತ ಭೀಕರವಾಗಿದೆ ಎಂದು ವಿಶ್ವಸಂಸ್ಥೆ ಆಹಾರ ಯೋಜನೆಯ ಪೂರ್ವ ಆಫ್ರಿಕಾ ವಲಯದ ನಿರ್ದೇಶಕ ಡನ್ಫೋರ್ಡ್ ಕಳವಳ ವ್ಯಕ್ತಪಡಿಸಿದ್ದಾರೆ. ಪೂರ್ವ ಆಫ್ರಿಕಾದಲ್ಲಿ 60 ವರ್ಷಗಳಲ್ಲೇ ಅತ್ಯಂತ ತೀವ್ರ ಬರಗಾಲದ ಪರಿಸ್ಥಿತಿಯಿದೆ. ಈ ವಲಯವು 5 ವಿಫಲ ಮಳೆಗಾಲವನ್ನು ಕಂಡಿದ್ದು 6ನೇ ವರ್ಷದ ಮಳೆಗಾಲವೂ ಕಡಿಮೆ  ಪ್ರಮಾಣದಲ್ಲಿ ಇರಲಿದೆ ಎಂಬ ವರದಿಯಿದೆ. ಇದರರ್ಥ 22 ದಶಲಕ್ಷಕ್ಕೂ ಅಧಿಕ ಜನರು ಬರಗಾಲದಿಂದ ಪ್ರಭಾವಿತರಾಗಿದ್ದಾರೆ ಎಂದು ಡನ್ಫೋರ್ಡ್ ಹೇಳಿದ್ದಾರೆ. ಈ ವಾರ ರಿಯಾದ್ನಲ್ಲಿ ನಡೆದ ಮೂರನೇ ರಿಯಾದ್  ಅಂತರಾಷ್ಟ್ರೀಯ ಮಾನವೀಯ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಡನ್ಫೋರ್ಡ್, ‘ಅರಬ್ ನ್ಯೂಸ್’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಪೂರ್ವ ಆಫ್ರಿಕಾದ ಬರ ಪರಿಸ್ಥಿತಿಯ ಬಗ್ಗೆ ಅಂಕಿಅಂಶ ಸಹಿತ ವಿವರಿಸಿದರು. ಇಥಿಯೋಪಿಯಾ, ಉತ್ತರ ಕೆನ್ಯಾ ಮತ್ತು ಸೊಮಾಲಿಯಾ ಬಿಕ್ಕಟ್ಟನ್ನು ಎದುರಿಸುತ್ತಿವೆ. ಸೊಮಾಲಿಯಾದ ಜನಸಂಖ್ಯೆಯ 50%ಕ್ಕೂ ಹೆಚ್ಚುಮಂದಿಗೆ ಮಾನವೀಯ ನೆರವಿನ ಅಗತ್ಯವಿದೆ. 2022ರಲ್ಲಿ ವಿಶ್ವ ಆಹಾರ ಯೋಜನೆಯ(ಡಬ್ಲ್ಯೂಇಎಫ್) ಕಾರ್ಯಾಚರಣೆ ಗಮನಾರ್ಹವಾಗಿ ಹೆಚ್ಚಿದೆ. ನಾವು ಈಗಾಗಲೇ 5 ದಶಲಕ್ಷ ಜನರನ್ನು ತಲುಪಿದ್ದೇವೆ. ಆದರೆ ಈ ವರ್ಷವೂ ಮಳೆ ಬಾರದಿದ್ದರೆ ಪರಿಸ್ಥಿತಿ ತೀವ್ರ ಹದಗೆಡಲಿದೆ ಎಂದವರು ಹೇಳಿದ್ದಾರೆ.

ಡಬ್ಲ್ಯೂಇಎಫ್ ಕಳೆದ ವರ್ಷ 4.6 ಶತಕೋಟಿ ಡಾಲರ್ ನೆರವಿನ ನಿಧಿ ಸಂಗ್ರಹಿಸಿದ್ದು ಇದರಲ್ಲಿ ಅಮೆರಿಕದ ದೇಣಿಗೆ ಅಧಿಕವಾಗಿದೆ. ಆದರೆ ಇನ್ನಷ್ಟು ನಿಧಿ ಸಂಗ್ರಹಿಸುವ ಅಗತ್ಯವಿದ್ದು ನೆರವು ಮುಂದುವರಿಯಬೇಕಿದ್ದರೆ ಮುಂದಿನ 6 ತಿಂಗಳಲ್ಲಿ 455 ದಶಲಕ್ಷ ಡಾಲರ್ಗೂ ಅಧಿಕ ನಿಧಿಯ ಅಗತ್ಯವಿದೆ. ಆದ್ದರಿಂದ ಇನ್ನಷ್ಟು ದೇಶಗಳಿಂದ ನೆರವನ್ನು ಎದುರು ನೋಡುತ್ತಿದ್ದೇವೆ. ಕಳೆದ 5 ವರ್ಷದಲ್ಲಿ ಸೌದಿ ಅರೆಬಿಯಾ 1 ಶತಕೋಟಿ ಡಾಲರ್ಗೂ ಅಧಿಕ ನೆರವು ಒದಗಿಸಿದೆ. ಸೌದಿ ಅರೆಬಿಯಾದ ‘ಕಿಂಗ್ ಸಲ್ಮಾನ್ ಸೆಂಟರ್ ಫಾರ್ ರಿಲೀಫ್ ಆ್ಯಂಡ್ ಹ್ಯುಮಾನಿಟೇರಿಯನ್ ಏಯ್ಡ್’ ಸಂಸ್ಥೆ ಸೊಮಾಲಿಯಾಕ್ಕೆ ನೆರವಿನ ದೇಣಿಗೆ ನೀಡಿದೆ ಎಂದವರು ಹೇಳಿದರು.

ಪೂರ್ವ ಆಫ್ರಿಕಾ ವಲಯದ ಮೇಲೆ ಹವಾಮಾನ ಬದಲಾವಣೆ ಸಮಸ್ಯೆಯೂ ಪ್ರಭಾವ ಬೀರಿದೆ. 2011ರಲ್ಲಿ 2 ವಿಫಲ ಮಳೆಗಾಲದಿಂದ ಉಂಟಾದ  ಕ್ಷಾಮದ ಬಳಿಕ ಈ ವಲಯದಲ್ಲಿ 2,60,000 ಜನತೆ ಸಾವನ್ನಪ್ಪಿದ್ದರು. ಆದರೆ ಈ ಬಾರಿ 5 ಮಳೆಗಾಲ ವಿಫಲವಾಗಿದ್ದರೂ, ನೆರವಿನ ದೇಣಿಗೆ ಹಾಗೂ ನೆರವನ್ನು ತಲುಪಿಸುವ ಕಾರ್ಯಕ್ರಮದಿಂದಾಗಿ ಸೊಮಾಲಿಯಾದಲ್ಲಿ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಿಸಿದೆ. ಆದರೆ ದಕ್ಷಿಣ ಸುಡಾನ್ನಲ್ಲಿ ಈಗ  22 ದಶಲಕ್ಷ ಜನತೆ ಬರಗಾಲದಿಂದ ಸಮಸ್ಯೆಗೆ ಒಳಗಾಗಿದ್ದರೆ, ಇನ್ನೊಂದೆಡೆ 4 ವರ್ಷದಿಂದ ಭಾರೀ ಮಳೆ ಹಾಗೂ ಪ್ರವಾಹದಿಂದ ಮತ್ತೂ 1 ದಶಲಕ್ಷ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಹವಾಮಾನದ ಆಘಾತವನ್ನು ಎದುರಿಸಲು ಇಲ್ಲಿನ ಜನರನ್ನು ಸಜ್ಜುಗೊಳಿಸುವ ಅನಿವಾರ್ಯತೆಯಿದೆ ಎಂದು ಡನ್ಫೋರ್ಡ್ ಹೇಳಿದ್ದಾರೆ.

ಸೊಮಾಲಿಯಾದಿಂದ 1.3 ದಶಲಕ್ಷ ಜನರ ಪಲಾಯನಕಳೆದ 2 ವರ್ಷಗಳಲ್ಲಿ ನಿರಂತರ ಮಳೆಕೊರತೆಯಿಂದ ಸೊಮಾಲಿಯಾ, ಕೆನ್ಯಾ ಮತ್ತು ಇಥಿಯೋಪಿಯಾದಲ್ಲಿ ಭಾರೀ ಪ್ರಮಾಣದಲ್ಲಿ ಬೆಳೆನಷ್ಟವಾದ ಕಾರಣ ಆದಾಯದ ಮೂಲ ನಷ್ಟವಾಗಿ  ಲಕ್ಷಾಂತರ ಜನತೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ವಲಯದಲ್ಲಿ 3 ದಶಲಕ್ಷಕ್ಕೂ ಅಧಿಕ ಜನತೆ ತೀವ್ರ ಆಹಾರ ಅಭದ್ರತೆ ಎದುರಿಸುತ್ತಿದ್ದು ಬಹುತೇಕ ಪ್ರತೀದಿನ ಉಪವಾಸ ಇರುವ ಪರಿಸ್ಥಿತಿಯಿದೆ. ಇದರಿಂದಾಗಿ ತಮ್ಮ ಮನೆ, ಆಸ್ತಿ ಅಥವಾ ಬೆಲೆಬಾಳುವ ವಸ್ತುಗಳನ್ನು ಸಿಕ್ಕಿದ ಬೆಲೆಗೆ ಮಾರುವ ಪರಿಸ್ಥಿತಿಗೆ ಸಿಲುಕಿದ್ದಾರೆ ಎಂದು 16 ಅಂತರಾಷ್ಟ್ರೀಯ ಮಾನವೀಯ ನೆರವಿನ ಸಂಘಟನೆಗಳ ಒಕ್ಕೂಟ ವರದಿ ಮಾಡಿದೆ. ಸೊಮಾಲಿಯಾದಲ್ಲಿ 1.3 ದಶಲಕ್ಷ ಜನ ತಮ್ಮ ಕೃಷಿ ಭೂಮಿ ಮತ್ತು ಮನೆಯನ್ನು ತ್ಯಜಿಸಿ ನಿರಾಶ್ರಿತರ ಶಿಬಿರಕ್ಕೆ ಪಲಾಯನ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

share
Next Story
X