ಖತರ್ ಓಪನ್ ಪ್ರಶಸ್ತಿ ಗೆದ್ದ ಮೆಡ್ವೆಡೆವ್

ದೋಹಾ, ಫೆ. 26: ಖತರ್ ಓಪನ್ ಟೆನಿಸ್ ಪಂದ್ಯಾವಳಿಯ ಫೈನಲ್‌ನಲ್ಲಿ ಶನಿವಾರ ರಶ್ಯದ ಡನೀಲ್ ಮೆಡ್ವೆಡೆವ್ ಮಾಜಿ ವಿಶ್ವ ನಂಬರ್ ವನ್ ಆ್ಯಂಡಿ ಮರ್ರೆಯನ್ನು ಸೋಲಿಸಿ ಪ್ರಶಸ್ತಿಯನ್ನು ಎತ್ತಿದ್ದಾರೆ. ಇದು ಒಂದು ವಾರದಲ್ಲಿ ಅವರು ಗೆದ್ದಿರುವ ಎರಡನೇ ಎಟಿಪಿ ಪ್ರಶಸ್ತಿಯಾಗಿದೆ.
27 ವರ್ಷದ ವಿಶ್ವದ ನಂಬರ್ 8ನೇ ರ್ಯಾಂಕಿಂಗ್‌ನ ಮೆಡ್ವೆಡೆವ್ ತನ್ನ ಎದುರಾಳಿಯನ್ನು 6-4, 6-4 ಸೆಟ್‌ಗಳಿಂದ ಸೋಲಿಸಿದರು. ಅವರು ಏಳು ದಿನಗಳ ಮೊದಲು ರೋಟರ್‌ಡ್ಯಾಮ್‌ನಲ್ಲೂ ಪ್ರಶಸ್ತಿ ಗೆದ್ದಿದ್ದರು. ‘‘ಅತ್ಯಂತ ಕಠಿಣ ಪಂದ್ಯ ಅದಾಗಿತ್ತು. ಇಂದು ಸ್ವಲ್ಪ ಗಾಳಿ ಹೆಚ್ಚಾಗಿತ್ತು. ಹಾಗಾಗಿ, ನಾವಿಬ್ಬರೂ ಲಯ ಕಂಡುಕೊಳ್ಳಲು ಪರದಾಡುತ್ತಿದ್ದೆವು’’ ಎಂದು ಪಂದ್ಯದ ಬಳಿಕ ಮಾತನಾಡಿದ ಮೆಡ್ವೆಡೆವ್ ಹೇಳಿದರು.
Next Story





