ಬೆಂಗಳೂರು | ಸುಪಾರಿ ನೀಡಿ ತಂದೆಯ ಹತ್ಯೆ: ಪುತ್ರ ಸೇರಿ ಮೂವರ ಬಂಧನ
ಬೆಂಗಳೂರು, ಫೆ.27: ಆಸ್ತಿಗಾಗಿ ಬರೋಬ್ಬರಿ 1 ಕೋಟಿ ಸುಪಾರಿ ನೀಡಿ ತಂದೆಯನ್ನು ಹತ್ಯೆ ಮಾಡಿಸಿದ್ದ ಮಗ ಸೇರಿ ಮೂವರನ್ನು ಮಾರತ್‍ಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಪುತ್ರ ಮಣಿಕಂಠ, ಸುಪಾರಿ ಪಡೆದ ಶಿವಕುಮಾರ್, ನವೀನ್ ಕುಮಾರ್ ಎಂದು ಗುರುತಿಸಲಾಗಿದೆ.
ಕಳೆದ ಫೆ.13ರಂದು ಮಾರತ್‍ಹಳ್ಳಿಯ ಅಪಾರ್ಟ್ ಮೆಂಟ್‍ನ ವಾಹನ ನಿಲುಗಡೆ ಪ್ರದೇಶದಲ್ಲಿ ನಾರಾಯಣಸ್ವಾಮಿ(70) ಎಂಬುವರ ಕೊಲೆ ಆಗಿತ್ತು. ಪುತ್ರ ಮಣಿಕಂಠ, ಶಿವಕುಮಾರ್, ನವೀನ್ ಕುಮಾರ್‍ಗೆ ಮುಂಗಡ 1 ಲಕ್ಷ ನೀಡಿ ತನ್ನ ತಂದೆಯ ಕೊಲೆ ಮಾಡಲು 1 ಕೋಟಿ ರೂ. ಸುಪಾರಿ ನೀಡಿದ್ದ. ಅದರಂತೆಯೇ ಇಬ್ಬರು ದುಷ್ಕರ್ಮಿಗಳು ನಾರಾಯಣಸ್ವಾಮಿಯನ್ನು ಕೊಂದು ಪರಾರಿಯಾಗಿದ್ದರೆನ್ನಲಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.
Next Story