ಅದಾನಿ ಶೇರುಗಳನ್ನು ಖರೀದಿಸಿ ದೇಶಪ್ರೇಮ ಸಾಬೀತು ಪಡಿಸಿ ಕೇಸರಿ ಚೆಡ್ಡಿಗಳೇ: ಟ್ರೋಲಿಗರಿಗೆ ಮಹುವಾ ಮೊಯಿತ್ರಾ ಸವಾಲು

ಹೊಸದಿಲ್ಲಿ: "ಅದಾನಿಯನ್ನು ಬೆತ್ತಲು ಮಾಡುತ್ತಿರುವ ನನ್ನನ್ನು ಟ್ರೋಲ್ ಮಾಡುವ ಬದಲು ಅದಾನಿ ಶೇರುಗಳನ್ನು ಖರೀದಿಸುವ ಮೂಲಕ ಹಣವನ್ನು ಖರ್ಚು ಮಾಡಿ ನಿಮ್ಮ ದೇಶಪ್ರೇಮವನ್ನು ಸಾಬೀತು ಪಡಿಸಿ ಕೇಸರಿ ಚೆಡ್ಡಿಗಳೇ" ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ (Mahua Moitra) ಸವಾಲೆಸೆದಿದ್ದಾರೆ.
ಕೇಸರಿ ಚೆಡ್ಡಿಗಳೇ ಎಂದು ಕರೆಯುವ ಮೂಲಕ ಅವರು ಪರೋಕ್ಷವಾಗಿ ಬಿಜೆಪಿ ಮತ್ತು ಆರೆಸ್ಸೆಸ್ ಸದಸ್ಯರನ್ನು ಗೇಲಿ ಮಾಡಿದ್ದಾರೆ ಎಂದು ವ್ಯಾಖ್ಯಾನಿಸಲಾಗಿದೆ.
ಇದಲ್ಲದೆ, ಕಾರ್ಮಿಖೇಲ್ ಗಣಿಯ ಮೂಲಕ ರಫ್ತು ಮಾಡಲಾಗುವ ಪಳೆಯುಳಿಕೆ ಇಂಧನದ ದೊಡ್ಡ ಪಾಲು ಹೊಂದಿರುವ ಗಮನಾರ್ಹವಾದ ಆಸ್ಪ್ರೇಲಿಯಾ ಕಲ್ಲಿದ್ದಲು ಬಂದರು ಸ್ವತ್ತಿನಲ್ಲಿ ಅದಾನಿ ಸಮೂಹದ ಸಾಲದ ಪ್ರಮಾಣ 400 ದಶಲಕ್ಷ ಡಾಲರ್ಗೆ ಏರಿಕೆಯಾಗಿರುವುದರ ಕುರಿತೂ ಅವರು ಪ್ರಶ್ನೆ ಎತ್ತಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಕಳೆದ ಒಂದು ತಿಂಗಳಲ್ಲಿ 236 ಶತಕೋಟಿ ಡಾಲರ್ ಮೌಲ್ಯ ಹೊಂದಿದ್ದ ಗೌತಮ್ ಅದಾನಿ ಸಂಪತ್ತಿನ ಮೌಲ್ಯವು ಐದನೇ ಮೂರರಷ್ಟು ಕುಸಿತ ಕಂಡಿದ್ದು, ಅವರ ಒಡೆತನದ ಸಂಸ್ಥೆಯು ಅಂತಾರಾಷ್ಟ್ರೀಯ ಸಾಲ ನಿಧಿಗಾಗಿ ಮಾತುಕತೆಯಲ್ಲಿ ತೊಡಗಿದೆ" ಎಂದಿದ್ದಾರೆ.
"ಎನ್ಕ್ಯೂಎಕ್ಸ್ಟಿ ಬಂದರಿನಿಂದ ಹೂಡಿಕೆ ಹಿಂಪಡೆಯಲಾಗಿದೆ ಎಂದು ಅದಾನಿ ಹೇಳಿದ್ದರೂ, ಅದು ಅವರ ಪುಸ್ತಕದಲ್ಲಿ ನಮೂದಾಗಿಲ್ಲ. ಹೀಗಿದ್ದೂ ಮತ್ತೆ 400 ಮಿಲಿಯನ್ ಡಾಲರ್ ಸಾಲಕ್ಕೆ ಪ್ರಯತ್ನಿಸಲಾಗುತ್ತಿದೆ. ಆದರೂ, @SEBI_India ಎನ್ಕ್ಯೂಎಕ್ಸ್ಟಿ ಸಂಬಂಧಿಸಿದ ಸಂಸ್ಥೆಯಲ್ಲವೆಂಬಂತೆ ವರ್ತಿಸುತ್ತಿದೆ ಮತ್ತು ವಿದೇಶಿ ಸ್ವತ್ತನ್ನು ಬಹಿರಂಗಗೊಳಿಸದಿರಲು ಅವಕಾಶ ನೀಡಿದೆ. ಅಲ್ಲದೆ, ಕಲ್ಲಿದ್ದಲು ಲಾಭವನ್ನು ಮರೆಮಾಚಲು ಅವಕಾಶ ಕಲ್ಪಿಸಿದೆ" ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಭೇಟಿಯಾಗಲು ಬರುವವರಿಗೆ ಚಹಾ ನೀಡಬೇಡವೇ?: CM ನಿವಾಸದ 2.68 ಕೋಟಿ ರೂ. ಆಹಾರ ಬಿಲ್ ಬಗ್ಗೆ ಏಕನಾಥ್ ಶಿಂಧೆ ಪ್ರತಿಕ್ರಿಯೆ
All you saffron chaddiwalas who spend time trolling my Adani exposes- go spend some money, prove your patriotism & buy Adani stocks instead.
— Mahua Moitra (@MahuaMoitra) February 27, 2023
Adani said it had divested away NQXT terminal. Is not on their books. Yet now trying to raise $400 mm debt against it. @IncomeTaxIndia @dir_ed @SEBI_India still pretending NQXT not related party & allowing non-disclosure of foreign assets & skimming away coal profits. pic.twitter.com/Y2dDlULCJ8
— Mahua Moitra (@MahuaMoitra) February 27, 2023







