ಡಿಪೋದಲ್ಲಿ ನಿಲ್ಲಿಸಿದ್ದ BMTC ಬಸ್’ಗಳಿಂದ 167 ಲೀ. ಡೀಸೆಲ್ ಕಳವು

ಬೆಂಗಳೂರು, ಫೆ.27: ಯಲಹಂಕ ಉಪನಗರದಲ್ಲಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಡಿಪೋದಲ್ಲಿ ದುಷ್ಕರ್ಮಿಗಳು ಎರಡು ಬಸ್‍ಗಳಿಂದ 167 ಲೀಟರ್ ಡೀಸೆಲ್ ಅನ್ನು ಕದ್ದೊಯ್ದಿದ್ದು, ಈ ಬಗ್ಗೆ ಡಿಪೋ ಉಸ್ತುವಾರಿ ಬಿ.ಎಚ್.ರಮೇಶ್ ಪೊಲೀಸರಿಗೆ ದೂರು ನೀಡಿದ್ದಾರೆ.
ಫೆ.18ರ ರಾತ್ರಿ ಘಟನೆ ಜರುಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ದುಷ್ಕರ್ಮಿಗಳಿಂದ ಕಳುವಾಗಿರುವ ಡೀಸೆಲ್ 14 ಸಾವಿರ ರೂ. ಮೌಲ್ಯದ 167 ಲೀಟರ್ ಎಂದು ಹೇಳಲಾಗಿದೆ.
ಈ ಬಗ್ಗೆ ಪುಟ್ಟೇನಹಳ್ಳಿ ಡಿಪೋ ಉಸ್ತುವಾರಿ ಬಿ.ಎಚ್.ರಮೇಶ್ ಪೊಲೀಸರಿಗೆ ದೂರು ನೀಡಿದ್ದು, ರಾತ್ರಿ ಪಾಳಯದಲ್ಲಿ ಕೆಲಸ ಮಾಡುವಾಗ ಎರಡು ಬಸ್‍ಗಳ ಕೆಳಗೆ ಡೀಸೆಲ್ ಸೋರಿಕೆಯಾಗುತ್ತಿರುವುದು ಕಂಡುಬಂದಿದೆ. ಪರಿಶೀಲಿಸಿದಾಗ ನೆಲೆ ಮತ್ತು ಕಾಂಪೌಂಡ್ ಮೇಲೆ ಡೀಸೆಲ್ ಬಿದ್ದಿದೆ. ಈ ಬಗ್ಗೆ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ ಎಂದು ಬಿ.ಎಚ್.ರಮೇಶ್ ತಿಳಿಸಿದ್ದಾರೆ.
Next Story





