ಮಂಗಳೂರು: ಮಾ.1ರಿಂದ 8ರವರೆಗೆ ಮಕ್ಕಳಿಲ್ಲದ ದಂಪತಿಗಳಿಗಾಗಿ ತಪಾಸಣೆ ಶಿಬಿರ

ಮಂಗಳೂರು: ನಗರದ ಬಲ್ಮಠದಲ್ಲಿರುವ ಡಾ.ನವೀನಚಂದ್ರ ನಾಯಕ್ ನೇತೃತ್ವದ ಡಾ.ನಾಯಕ್ಸ್ ಫರ್ಟಿಲಿಟಿ ಸೆಂಟರ್ ಮತ್ತು ಐ.ವಿ.ಎಫ್. ಕೇಂದ್ರದಲ್ಲಿ ಮಕ್ಕಳಿಲ್ಲದ ದಂಪತಿಗಳಿಗಾಗಿ ಮಾರ್ಚ್ 1 ರಿಂದ 8ರ ವರೆಗೆ ಸ್ಟ್ರೀನಿಂಗ್ ಶಿಬಿರವನ್ನು ಆಯೋಜಿಸಲಾಗಿದೆ. ಮಧ್ಯಾಹ್ನ 1:30ರಿಂದ ಸಂಜೆ 5:30ರ ವರೆಗೆ ನಡೆಯುವ ಈ ಸ್ಟ್ರೀನಿಂಗ್ ಶಿಬಿರದಲ್ಲಿ ಮಕ್ಕಳಿಲ್ಲದ ಯಾವುದೇ ದಂಪತಿ ಭಾಗವಹಿಸಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.
ಶಿಬಿರದಲ್ಲಿ ಭಾಗವಹಿಸುವವರಿಗೆ ನೋಂದಣಿ, ವೈದ್ಯರೊಂದಿಗೆ ಮೊದಲ ಸಮಾಲೋಚನೆ ಮತ್ತು ಮೊದಲ ಆಲ್ಟ್ರಾ ಸೌಂಡ್ (ಸ್ಕ್ಯಾನ್) ಉಚಿತವಾಗಿರುತ್ತದೆ. ಅಲ್ಲದೇ, 20 ಶೇ. ರಿಯಾಯಿತಿಯಲ್ಲಿ ವೈಯಕ್ತಿಕ ಚಿಕಿತ್ಸಾ ಪ್ಯಾಕೇಜುಗಳು ನೀಡಲಾಗುತ್ತದೆ ಎಂದರು.
35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, ಒಂದು ವರ್ಷದಿಂದ ಗರ್ಭಧಾರಣೆಗಾಗಿ ಪ್ರಯತ್ನಿಸುತ್ತಿರುವವರು, 35 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದು, ಆರು ತಿಂಗಳಿಂದ ಗರ್ಭಧಾರಣೆಗಾಗಿ ಪ್ರಯತ್ನಿಸುತ್ತಿರುವವರು ಹಾಗೂ ಬಂಜೆತನಕ್ಕೆ ಕಾರಣವಾಗುವ ಯಾವುದೇ ಸ್ತ್ರೀರೋಗ ಶಾಸ್ತ್ರ ಸಮಸ್ಯೆ ಹೊಂದಿರುವವರು ಶಿಬಿರದ ಪ್ರಯೋಜನ ಪಡೆದುಕೊಳ್ಳಬಹುದು.
ಶಿಬಿರದ ನೋಂದಣಿಗಾಗಿ ಮೊ.ಸಂ. 9886101911ಕ್ಕೆ ಕರೆ ಮಾಡಬಹುದು ಎಂದು ಪ್ರಕಟನೆ ತಿಳಿಸಿದೆ.
ಡಾ.ನಾಯಕ್ಸ್ ಫರ್ಟಿಲಿಟಿ ಸೆಂಟರ್ ಮತ್ತು ಐ.ವಿ.ಎಫ್. ಕೇಂದ್ರವು ಡಾ. ನವೀನಚಂದ್ರ ಆರ್. ನಾಯಕ್ ನಾಯಕತ್ವದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸ್ತ್ರೀರೋಗ ತಜ್ಞರಾದ ಇವರು ಸಂತಾನೋತ್ಪತ್ತಿ ಔಷಧದಲ್ಲಿ 25 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಈ ತಂಡ ಸಂತಾನೋತ್ಪತ್ತಿ ಔಷಧ ಸಲಹೆಗಾರರಾದ ಡಾ.ನವೀನಚಂದ್ರ ನಾಯಕ್ ಮತ್ತು ಡಾ.ಮಂಗಳಾ ಗೌರಿ ಹೆಗ್ಡೆ ಮತ್ತು ಭ್ರೂಣಶಾಸ್ತ್ರಜ್ಞ ಡಾ.ಸ್ವಾತಿ ನಾಯಕ್ ಮತ್ತು ಕಾಂತರಾಜ್ ಎಂ.ಎಸ್. ಅವರನ್ನೊಳಗೊಂಡಿದೆ. ಅತ್ಯಾಧುನಿಕ ಮೂಲಸೌಕರ್ಯ ಮತ್ತು ಅತ್ಯುತ್ತಮ ಸಾಧನಗಳನ್ನು ಹೊಂದಿರುವ ಈ ಕೇಂದ್ರವು, ಜಾಗತಿಕ ಗುಣಮಟ್ಟಕ್ಕೆ ಸಮನಾದ ಯಶಸ್ಸಿನೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಕಟನೆ ತಿಳಿಸಿದೆ.







