ಕಂಕನಾಡಿಯ ‘ಗರಡಿ ಸಂಭ್ರಮ’ ಸಂಘಟಿತ ಸಂಗಮ: ಶಾಸಕ ವೇದವ್ಯಾಸ್ ಕಾಮತ್

ಮಂಗಳೂರು: ಕಂಕನಾಡಿಯ ಗರಡಿ-೧೫೦ರ ಸಂಭ್ರಮವು ಸಂಘಟಿತ ಸಂಗಮವಾಗಬೇಕು ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ಕಂಕನಾಡಿ ಗರಡಿ ಕ್ಷೇತ್ರದಲ್ಲಿ ಗರಡಿ ಸಂಭ್ರಮ ಅಂಗವಾಗಿ ರಚಿಸಲಾದ 32 ಸಮಿತಿಗಳ ಮುಖ್ಯಸ್ಥರ ಅಂತಿಮ ಹಂತದ ಸಿದ್ಧತಾ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಕಂಕನಾಡಿ ಗರಡಿ ಸಂಭ್ರಮದ ಯಶಸ್ಸಿಗೆ ಮಂಗಳೂರು ಮಹಾನಗರಪಾಲಿಕೆ, ಜಿಲ್ಲಾಡಳಿತ, ನಗರ ಪೊಲೀಸ್ ಸಂಪೂರ್ಣ ಕೈಜೋಡಿ ಸಲಿದೆ. ಗರಡಿ ಸಂಭ್ರಮದ ಮೂಲಭೂತ ಸೌಕರ್ಯಕ್ಕೆ 30 ಲಕ್ಷ ರೂ. ಅನುದಾನ, ಮಹಾನಗರಪಾಲಿಕೆಯಿಂದ ವಿದ್ಯುದ್ದೀಪಾಲಂಕಾರಕ್ಕೆ 15 ಲಕ್ಷ ರೂ., ತಾನು ವೈಯಕ್ತಿಕವಾಗಿ 10 ಲಕ್ಷ ರೂ. ಸಂಗ್ರಹಿಸಿ ಕ್ಷೇತ್ರಕ್ಕೆ ನೀಡಲಿದ್ದೇನೆ ಎಂದು ವೇದವ್ಯಾಸ್ ಕಾಮತ್ ಭರವಸೆ ನೀಡಿದರು.
ಕ್ಷೇತ್ರದ ಅಧ್ಯಕ್ಷ ಕೆ. ಚಿತ್ತರಂಜನ್ ಅಧ್ಯಕ್ಷತೆ ವಹಿಸಿದ್ದರು. ಮೇಯರ್ ಜಯಾನಂದ ಅಂಚನ್, ಕ್ಷೇತ್ರದ ಮ್ಯಾನೇಜರ್ ಜೆ. ಕಿಶೋರ್ ಕುಮಾರ್, ಕಂಕನಾಡಿ ಗರಡಿ 150ರ ಸಂಭ್ರಮ ಸಮಿತಿ ಪ್ರಧಾನ ಸಂಚಾಲಕ ಎಂ. ಮೋಹನ್ ಉಜ್ಜೋಡಿ, ಕ್ಷೇತ್ರದ ಮೊಕ್ತೇಸರರಾದ ಬಿ.ವಿಠಲ, ಎ. ವಾಮನ, ಬಿ. ದಾಮೋದರ ನಿಸರ್ಗ, ದಿವರಾಜ್, ದಿನೇಶ್ ಅಂಚನ್, ಜೆ. ವಿಜಯ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್., ಎಸ್‌ಆರ್‌ಆರ್ ಸಂಸ್ಥೆಯ ಮಾಲೀಕ ಶೈಲೇಂದ್ರ ವೈ. ಸುವರ್ಣ, ಎಂ.ಪಿ. ಮಾಲೀಕ ಎಂ.ಪಿ. ದಿನೇಶ್, ಆರ್ಥಿಕ ಸಮಿತಿ ಪ್ರಮುಖ ಶರಣ್ ಪಂಪ್‌ವೆಲ್, ಕಾರ್ಪೊರೇಟರ್‌ಗಳಾದ ಪ್ರವೀಣ್‌ಚಂದ್ರ ಆಳ್ವ, ಸಂದೀಪ್ ಗರೋಡಿ, ರೂಪಾಶ್ರೀ ಪೂಜಾರಿ, ಕೇಶವ ಮರೋಳಿ, ವಿವಿಧ ಸಮಿತಿಯ ಸಂಚಾಲಕರಾದ ವಸಂತ್ ಪೂಜಾರಿ, ಆನಂದ್ ಸರಿಪಲ್ಲ, ಜಯಾನಂದ್, ಚಿತ್ತರಂಜನ್ ಬೋಳಾರ್ ಮತ್ತಿತರರು ಉಪಸ್ಥಿತರಿದ್ದರು.