ಪಡುಬಿದ್ರೆ: ಎರಡು ತಂಡಗಳ ಮಧ್ಯೆ ಹೊಡೆದಾಟ; ದೂರು, ಪ್ರತಿದೂರು

ಪಡುಬಿದ್ರೆ: ಪರಸ್ಪರ ಹೊಡೆದಾಟ ನಡೆದ ಪ್ರಕರಣಕ್ಕೆ ಸಂಬಂಧಿಸಿ ಎರಡು ತಂಡಗಳ ವಿರುದ್ಧ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸುಜ್ಲಾನ್ ಆರ್ ಆರ್ ಕಾಲನಿ ನಿವಾಸಿ ಶಿವಪ್ರಕಾಶ್ ನೀಡಿದ ದೂರಿನಲ್ಲಿ ರವಿವಾರ ರಾತ್ರಿ ಪಡುಬಿದ್ರೆಯ ಖಡ್ಗೇಶ್ವರಿ ಬ್ರಹ್ಮಸ್ಥಾನದಲ್ಲಿ ನಡೆಯುತ್ತಿರುವ ಪೂಜೆಗೆ ಸಹೋದರ ಆದರ್ಶ್ ಹಾಗೂ ಇಬ್ಬರು ಸ್ನೇಹಿತರಾದ ಧನುಷ್ ಮತ್ತು ಪ್ರತೀಕ್ ಎಂಬವರೊಂದಿಗೆ ಹೋಗಿದ್ದು, ಮೂತ್ರ ವಿಸರ್ಜನೆಗೆಂದು ಹೋದ ಸಮಯ ಅಲ್ಲಿಗೆ ಬಂದ ವಸಂತ ಹಾಗೂ ಬಾಲುರವರು ಹಲ್ಲೆ ನಡೆಸಿ, ಬೆದರಿಕೆ ಒಡ್ಡಿರುವ ಬಗ್ಗೆ ದೂರು ನೀಡಿದ್ದಾರೆ.
ಇನ್ನೊಂದು ದೂರಿನಲ್ಲಿ ಎರ್ಮಾಳು ತೆಂಕ ನಿವಾಸಿ ನವೀನ್ ಪಡುಬಿದ್ರೆಯ ಖಡ್ಗೇಶ್ವರಿ ಬ್ರಹ್ಮಸ್ಥಾನದಲ್ಲಿ ನಡೆಯುತ್ತಿರುವ ಉತ್ಸವಕ್ಕೆ ಅವರ ಸ್ನೇಹಿತರಾದ ರಾಕೇಶ್, ದಿವಾಕರ, ಬಾಲಕೃಷ್ಣ ಎಂಬವರ ಜೊತೆಗೆ ಹೋಗಿದ್ದು, ಈ ವೇಳೆ ಕಂಚಿನಡ್ಕ ನಿವಾಸಿ ಶಿವಪ್ರಕಾಶ್ ಎಂಬಾತನು ತಡೆದು ನಿಲ್ಲಿಸಿ ವಸಂತ ಎಲ್ಲಿದ್ದಾನೆ ಎಂದು ಕೇಳಿ, ಜೀವ ಬೆದರಿಕೆ ಹಾಕಿರುವುದಾಗಿ ದೂರು ನೀಡಿದ್ದಾರೆ.
ಈ ಬಗ್ಗೆ ಪಡುಬಿದ್ರೆ ಠಾಣೆಯಲ್ಲಿ ದೂರು-ಪ್ರತಿ ದೂರು ದಾಖಲಾಗಿದೆ.