ಮಂಗಳೂರು: ಹಾಸ್ಟೆಲ್‌ನಿಂದ ಯುವತಿ ನಾಪತ್ತೆ

ಮಂಗಳೂರು, ಫೆ.27: ನಗರದ ಸಂತ ಆಗ್ನೆಸ್ ಹಾಸ್ಟೆಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಮಧ್ಯಪ್ರದೇಶ ಮೂಲದ ವಂದನಾ (20) ಎಂಬಾಕೆ ಹಾಸ್ಟೆಲ್‌ನಿಂದ ನಾಪತ್ತೆಯಾದ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2022ರ ಜೂನ್‌ನಲ್ಲಿ ಈಕೆ ಕೆಲಸಕ್ಕೆ ಸೇರಿಕೊಂಡಿದ್ದು, ಹಾಸ್ಟೆಲ್‌ನಿಂದ ನಾಪತ್ತೆಯಾದ ದಿನ ಆಧಾರ್ ಕಾರ್ಡ್, ಪಾಸ್ ಬುಕ್ ಮತ್ತು ಇತರೆ ದಾಖಲೆಗಳನ್ನು ತಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.
ದಪ್ಪ ಶರೀರದ, ಎಣ್ಣೆ ಕಪ್ಪು ಮೈ ಬಣ್ಣದ, ಗುಂಡು ಮುಖದ, 4.5 ಅಡಿ ಎತ್ತರದ ಈಕೆ ಬಿಳಿ ಬಣ್ಣದ ಶರ್ಟ್, ಆಕಾಶ ನೀಲಿ ಜೀನ್ಸ್ ಧರಿಸಿದ್ದಾರೆ. ಕೊಂಕಣಿ, ಇಂಗ್ಲಿಷ್, ಹಿಂದಿ ಭಾಷೆ ಬಲ್ಲರವಾಗಿದ್ದಾರೆ. ಯುವತಿಯ ಬಗ್ಗೆ ಮಾಹಿತಿ ಇದ್ದಲ್ಲಿ ಕದ್ರಿ ಠಾಣೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Next Story





