ಪಿ.ಎ. ಫಾರ್ಮಸಿ ಕಾಲೇಜು ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ "ಎಪಿಸ್ಟಿಮ್ 2023"

ಮಂಗಳೂರು : ನಗರದ ನಡುಪದವಿನ ಪಿ.ಎ. ಕಾಲೇಜ್ ಆಫ್ ಫಾರ್ಮಸಿಯ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ "ಎಪಿಸ್ಟಿಮ್ 2023" ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೆಂಗಳೂರಿನ ಜೆನರಿಕ್ ಫಾರ್ಮುಲೇಶನ್ ಬಯೋಕಾನ್ ಫಾರ್ಮಾ ಲಿಮಿಟೆಡ್‍ನ ಜನರಲ್ ಮ್ಯಾನೇಜರ್ ಡಾ. ಎಸ್. ಮಹೇಶ್ ಕುಮಾರ್ "ಪ್ರಸಕ್ತ ವಿದ್ಯಮಾನದ ಅರಿವಿನೊಂದಿಗೆ ಅವಕಾಶಗಳನ್ನು ಬಳಸಿಕೊಳ್ಳಬೇಕು. ಸ್ಪಷ್ಟ ಗುರಿ, ಸಾಮರ್ಥ್ಯದ ತಿಳುವಳಿಕೆ ಹಾಗೂ ನಿರಂತರ ಪ್ರಯತ್ನದ ಮೂಲಕ ಜೀವನದಲ್ಲಿ ಸಾಧನೆಗಳನ್ನು ಮಾಡಲು ಸಾಧ್ಯ" ಎಂದು ಹೇಳಿದರು.
ಪಿ.ಎ. ಎಜ್ಯುಕೇಶನಲ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಅಬ್ದುಲ್ಲಾ ಇಬ್ರಾಹಿಂ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ "ಫಾರ್ಮಸಿ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿದ್ದು, ಬಹುಮುಖ ಪ್ರತಿಭೆಗಳ ಮೂಲಕ ಉನ್ನತ ಸ್ಥಾನಕ್ಕೇರಲು ಸಾಧ್ಯ" ಎಂದರು.
ಸಮಾರಂಭದಲ್ಲಿ ಕಾಲೇಜು ಮ್ಯಾಗಝಿನ್ "ಫಾರ್ಮಾ ಏಸ್" ಮತ್ತು ನ್ಯೂಸ್ ಲೆಟರ್ "ಅಪೊಥೆಕೊ" ಬಿಡುಗಡೆ ಗೊಳಿಸಲಾಯಿತು. ಮುಂದಿನ ಸಾಲಿನ ವಿದ್ಯಾರ್ಥಿ ಸಮಿತಿಯ ಪದಾಧಿಕಾರಿಗಳು ಪ್ರತಿಜ್ಞೆ ಕೈಗೊಂಡರು. ಸಾಂಸ್ಕೃತಿಕ ಹಾಗೂ ಕ್ರೀಡಾ ಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ್ರಾಂಶುಪಾಲ ಡಾ. ಸಲೀಮುಲ್ಲಾ ಖಾನ್ ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು.
ಕ್ಯಾಂಪಸ್ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಸರ್ಫುದ್ದೀನ್ ಪಿ.ಕೆ, ಡೀನ್ ಅಫ್ ಸ್ಟೂಡೆಂಟ್ ಅಫ್ಯಾರ್ಸ್ ಡಾ. ಸಯ್ಯದ್ ಅಮೀನ್ ಅಹಮ್ಮದ್ ಉಪಸ್ಥಿತರಿದ್ದರು.
ಉಪ ಪ್ರಾಂಶುಪಾಲರಾದ ಡಾ. ಮುಹಮ್ಮದ್ ಮುಬೀನ್ ಸ್ವಾಗತಿಸಿದರು. ಡಾ. ರಜಿಶಾ ಕೆ ವಂದಿಸಿದರು. ಡಾ. ತೃವೇಣಿ ಮತ್ತು ಧನ್ಯಾ ಕಾರ್ಯಕ್ರಮ ನಿರೂಪಿಸಿದರು.







