ತುಳು ಚಲನಚಿತ್ರ ರಂಗದ ಚರಿತ್ರೆಯನ್ನು ದಾಖಲಿಸಿರುವ ಮಹತ್ವದ ಕೃತಿ 'ತುಳು ಬೆಳ್ಳಿ ತೆರೆಯ ಸುವರ್ಣ ಯಾನ': ವಿವೇಕ ರೈ

ಮಂಗಳೂರು: ತುಳು ಚಲನ ಚಿತ್ರ ರಂಗದ ಬಗ್ಗೆ ಚರಿತ್ರೆಯನ್ನು ದಾಖಲಿಸಿರುವ ತಮ್ಮ ಲಕ್ಷ್ಮಣ ಬರೆದಿರುವ ತುಳು ಬೆಳ್ಳಿ ತೆರೆಯ ಸುವರ್ಣ ಯಾನ' ಕೃತಿಯಾಗಿದೆ ಎಂದು ವಿದ್ವಾಂಸರಾದ ಪ್ರೊ. ವಿವೇಕ ರೈ ತಿಳಿಸಿದ್ದಾರೆ.
ತುಳು ಚಲನಚಿತ್ರ ರಂಗ 50 ವರ್ಷಗಳನ್ನು ಪೂರೈಸಿರುವ ಸಂದರ್ಭದಲ್ಲಿ,ನಗರದ ಪುರಭವನ ದಲ್ಲಿಂದು ಕಲಾ ನಿರ್ದೇಶಕ ತಮ್ಮ ಲಕ್ಷ್ಮಣರು ಬರೆದಿರುವ 'ತುಳು ಬೆಳ್ಳಿ ತೆರೆಯ ಸುವರ್ಣ ಯಾನ' ಎಂಬ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾ ಡುತ್ತಿದ್ದರು.
ಸಮಾರಂಭದಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಸರಳ ಸಜ್ಜನಿಕೆಯ ವ್ಯಕ್ತಿತ್ವದ ತಮ್ಮ ಲಕ್ಷ್ಮಣ ತುಳು ಚಿತ್ರ ರಂಗ ಎಂದಿಗೂ ಮರೆಯಲಾಗದ ಕೃತಿ ರಚಿಸಿದ್ದಾರೆ. ತುಳು ಭಾಷೆ ನಮ್ಮ ತಾಯಿ ನುಡಿ.ಈ ನಿಟ್ಟಿನಲ್ಲಿ ತಮ್ಮ ಲಕ್ಷ್ಮಣ ಅವರ ಕೃತಿ ಡಿಲಿಟ್ ಪಡೆಯಲು ಯೋಗ್ಯ ವಾದ ಕೃತಿ ಯಾಗಿದೆ. ಅದಕ್ಕೆ ಮಂಗಳೂರು ವಿಶ್ವ ವಿದ್ಯಾನಿಲ ಯದಿಂದ ತಾನು ಪ್ರಯತ್ನ ಮಾಡುವುದಾಗಿ ತಿಳಿಸಿದ್ದಾರೆ.
ಸಮಾರಂಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ. ಮೋಹನ ಆಳ್ವ ಉದ್ಘಾಟಿಸಿ ಮಾತನಾಡುತ್ತಾ, ಫಲಾಪೇಕ್ಷೆ ಇಲ್ಲದೆ ಸಿನಿಮಾ ರಂಗದಲ್ಲಿ ಸೇವೆ ಸಲ್ಲಿಸಿ ತುಳು ಚಿತ್ರ ರಂಗದ ಚರಿತ್ರೆಯನ್ನು ದಾಖಲಿಸಿದ್ದಾರೆ. ತುಳು ಭಾಷೆ ನಮ್ಮ ಹೃದಯದ ಭಾಷೆ.ಹೊರ ದೇಶಕ್ಕೆ ಹೋದಾಗಲೂ ಅಲ್ಲಿನ ತುಳುವರು ಅಭಿಮಾನದಿಂದ ತುಳು ಭಾಷೆ ಯಲ್ಲಿ ಮಾತನಾಡುತ್ತಾರೆ.ತುಳು ಭಾಷೆ ಯ ಮೇಲಿನ ಪ್ರೀತಿಯಿಂದ ತುಳು ಚಿತ್ರ ರಂಗ ಬೆಳೆದಿದೆ ಇನ್ನಷ್ಟು ಬೆಳೆಯಲಿ ಎಂದು ಶುಭ ಹಾರೈಸಿದರು.
ತುಳು ಸಿನಿಮಾ, ನಾಟಕ ನನಗೆ ಹೆಸರು, ಬದುಕು ಕೊಟ್ಟಿದೆ.ತುಳು ಚಿತ್ರ ರಂಗದ ಬರೆಯಲು ಹೊರಟಾಗ ಅದು ನನ್ನ ಪಾಲಿಗೆ ಸವಾಲಾಗಿತ್ತು ಆದರೆ ಚರಿತ್ರೆ ಮುಂದಿನ ಜನಾಂಗಕ್ಕೆ ತಿಳಿಸಲು ಪ್ರಯತ್ನಿಸಿ ಹಲವು ವಿದ್ವಾಂಸರ ಸಹಕಾರ ದಿಂದ ಕೃತಿ ನಿರ್ಮಿಸಲು ಸಾಧ್ಯ ವಾಯಿತು ಎಂದು ತಮ್ಮ ಲಕ್ಷ್ಮಣ ತಿಳಿಸಿದ್ದಾರೆ.
ಸಮಾರಂಭದಲ್ಲಿ ಕಾಸರ ಗೋಡು ಚಿನ್ನಾ ಉಪಸ್ಥಿತರಿದ್ದರು. ಕರ್ಣಾಟಕ ಬ್ಯಾಂಕಿನ ಆಡಳಿತ ನಿರ್ದೇಶಕರಾದ ಮಹಾಬಲೇಶ್ವರ ಎಂ.ಎಸ್ ಸಮಾರಂಭದಲ್ಲಿ ತುಳು ಸಿನಿಮಾ ರಂಗಕ್ಕೆ ಕೊಡುಗೆ ನೀಡಿದ ನಿರ್ದೇಶಕರಾದ ರಿಚರ್ಡ್ ಕ್ಯಾಸ್ಟೋಲಿನಾ, ರಾಮ್ ಶೆಟ್ಟಿ, ಡಾ.ಸಂಜೀವ ದಂಡಕೇರಿ, ಟಿ.ಎ.ಶ್ರೀನಿವಾಸ್ ರನ್ನು ಸನ್ಮಾನಿಸಿ ಮಾತನಾಡುತ್ತಾ, 50 ವರ್ಷ ಇತಿಹಾಸದ ತುಳು ಚಿತ್ರ ರಂಗವನ್ನು ದಾಖಲಿ ಸಿರುವುದು ಮಹತ್ವದ ಕೆಲಸ. ದೇಶದ ಭಾಷಾ ವೈವಿಧ್ಯ ದ ಮಧ್ಯೆ ನಮ್ಮ ಭಾಷೆ ಯನ್ನು ಬೆಳೆಸುವ ಕೆಲಸ ಮಾಡಬೇಕಾಗಿದೆ. ಭಾಷೆ ನಮ್ಮನ್ನು ಬೆಸೆಯುವಂತಾಗಬೇಕು ಎಂದು ಅವರು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವಿಶೇಷ ಆರ್ಕಷ ಣೆಯಾಗಿ 50 ವರ್ಷಗಳಲ್ಲಿ ತೆರೆಕಂಡ ಸಿನೆ ಮಾಗಳ “ಸುವರ್ಣ ತುಳು ಚಿತ್ರಮಾಲಾ" ಸಾಕ್ಷ್ಯ ಚಿತ್ರ ಪ್ರದರ್ಶಿಸಲಾಯಿತು. ತಮ್ಮ ಲಕ್ಷ್ಮಣ ಸ್ವಾಗತಿಸಿದ್ದಾರೆ. ಮನೋಹರ ಪ್ರಸಾದ್ ಕಾರ್ಯ ಕ್ರಮ ನಿರೂಪಿಸಿದರು. ವಿನೀತ್ ವಂದಿಸಿದರು.







