ಮೋದಿ ರೋಡ್ಶೋ ಹಿನ್ನೆಲೆಯಲ್ಲಿ ಪ್ರಥಮ ಪಿಯು ಪರೀಕ್ಷೆ ಮುಂದೂಡಿಕೆ!
ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿಯವರ ಭೇಟಿ ಹಾಗೂ 10 ಕಿಲೋಮೀಟರ್ ರೋಡ್ಶೋ ಕಾರಣಕ್ಕಾಗಿ ಬೆಳಗಾವಿ ಜಿಲ್ಲೆಯಲ್ಲಿ ಸೋಮವಾರ ನಡೆಯಬೇಕಿದ್ದ ಪ್ರಥಮ ಪಿಯು ಪರೀಕ್ಷೆಯನ್ನು ಮುಂದೂಡಿದ ಪ್ರಕರಣ ವರದಿಯಾಗಿದೆ. ಪಿಯು ಮಂಡಳಿ ಸೋಮವಾರ ನಡೆಸಬೇಕಿದ್ದ ಇತಿಹಾಸ, ಭೌತಶಾಶ್ತ್ರ ಮತ್ತು ಮೂಲ ಗಣಿತಶಾಸ್ತ್ರ ಪರೀಕ್ಷೆಗಳನ್ನು ಮುಂದೂಡಿ ರಜೆ ಘೋಷಿಸಿತ್ತು.
ಫೆಬ್ರುವರಿ 24ರಂದು ಪಿಯು ಶಿಕ್ಷಣ ಇಲಾಖೆ ಸುತೋಲೆ ಹೊರಡಿಸಿದೆ ಸೋಮವಾರ ನಡೆಯಬೇಕಿದ್ದ ಪರೀಕ್ಷೆಗಳನ್ನು ಮಾರ್ಚ್ 6ರಂದು ನಡೆಸಲಾಗುತ್ತದೆ ಎಂದು ಸ್ಪಷ್ಟಪಡಿಸಿತ್ತು. ಪರೀಕ್ಷೆ ಮುಂದೂಡಿರುವ ಕ್ರಮವನ್ನು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಕೊಪ್ಪಳ: 'ಪುಲ್ವಾಮಾ ದಾಳಿ ವ್ಯವಸ್ಥಿತ ಪಿತೂರಿ' ಎಂದು ಸ್ಟೇಟಸ್ ಹಾಕಿದ್ದ ಶಾಲಾ ಶಿಕ್ಷಕ ಅಮಾನತು
Next Story