ಆಪ್ ಮುಖಂಡ ಭಾಸ್ಕರ್ ರಾವ್ ನಾಳೆ BJP ಸೇರ್ಪಡೆ

ಬೆಂಗಳೂರು: ಮಾಜಿ ಐಪಿಎಸ್ ಅಧಿಕಾರಿ, ಆಮ್ ಆದ್ಮಿ ಪಕ್ಷದ ನಾಯಕ ಭಾಸ್ಕರ್ ರಾವ್ ಇಂದು (ಮಂಗಳವಾರ) ರಾಜ್ಯ ಬಿಜೆಪಿ ಕಚೇರಿಗೆ ಭೇಟಿ ನೀಡಿದ್ದು, ಅವರು ಬುಧವಾರ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಆಪ್ ಉಪಾಧ್ಯಕ್ಷರಾಗಿದ್ದ ಭಾಸ್ಕರ್ ರಾವ್ ಇಂದು ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನಕ್ಕೆ ಭೇಟಿ ನೀಡಿ, ಬಳಿಕ ಸಚಿವ ಆರ್.ಅಶೋಕ್ ಅವರನ್ನೂ ಭೇಟಿಯಾಗಿ ಕೆಲಕಾಲ ಮಾತುಕತೆ ನಡೆಸಿದ್ದಾರೆನ್ನಲಾಗಿದೆ. ಅವರು ನಾಳೆ ದೆಹಲಿಯ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಪಕ್ಷ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇನ್ನು ಮಾರ್ಚ್ 4ಕ್ಕೆ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಾಜ್ಯಕ್ಕೆ ಆಗಮಿಸುವವರಿದ್ದಾರೆ.
11 ತಿಂಗಳಿನಲ್ಲಿಯೇ ಪಕ್ಷ ತೊರೆದ ಭಾಸ್ಕರ್ ರಾವ್?
ಕಳೆದ 2022ನೆ ಸಾಲಿನ ಎಪ್ರಿಲ್ ನಾಲ್ಕು ರಂದು ಹೊಸದಿಲ್ಲಿಯ ಆಪ್ ಕಚೇರಿಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಮ್ಮುಖದಲ್ಲಿಯೇ ಭಾಸ್ಕರ್ ರಾವ್ ಅವರು ಆಮ್ ಆದ್ಮಿ ಪಕ್ಷ ಸೇರ್ಪಡೆಗೊಂಡಿದ್ದರು. ಆದರೆ, 11 ತಿಂಗಳಿನಲ್ಲಿಯೇ ಆಪ್ ಪಕ್ಷ ತೊರೆಯುತ್ತಿರುವುದು ಅಚ್ಚರಿ ತಂದಿದೆ.
ಇದನ್ನೂ ಓದಿ: ಬಿಜೆಪಿ ಕಚೇರಿಗೆ ಆಪ್ ನಾಯಕ ಭಾಸ್ಕರ್ ರಾವ್ ಭೇಟಿ!