ಮಾ.1: ಖಮರಿಯಾ - ಮುಜವ್ವಿದಾ ಕೋರ್ಸ್‌ಗಳ ಪದವಿ ಪ್ರದಾನ

ಮಂಗಳೂರು, ಫೆ.28: ವಿಮೆನ್ಸ್ ಇಸ್ಲಾಮಿಕ್ ಕೌನ್ಸಿಲ್ (ರಿ) ಇದರ ಅಧೀನದಲ್ಲಿರುವ ಒಂದು ವರ್ಷದ ಖಮರಿಯಾ ಆನ್‌ಲೈನ್ ಶರೀಅತ್ ಕೋರ್ಸ್ ಮುಗಿಸಿದ ಎಪ್ಪತ್ತೈದು ಮಹಿಳೆಯರಿಗೆ ಅಲ್ ಖಮರಿಯಾ ಹಾಗೂ ಖುರ್‌ಆನ್ ಪಾರಾಯಣ ತರಬೇತುದಾರ ಕೋರ್ಸ್ ಮುಗಿಸಿದ ಮೂವತ್ತೆರಡು ಮಹಿಳೆಯರಿಗೆ ಅಲ್ ಮುಜವ್ವಿದಾ ಪ್ರಮಾಣ ಪತ್ರ ನೀಡುವ ಕಾರ್ಯಕ್ರಮವು ಮಾ.1ರಂದು ಬೆಳಗ್ಗೆ 10ಕ್ಕೆ ಬಿಸಿ ರೋಡ್ ಗೂಡಿನಬಳಿ ಸಮುದಾಯ ಭವನದಲ್ಲಿ ನಡೆಯಲಿದೆ.
ತಾಜುಲ್ ಉಲಮಾರ ಮೊಮ್ಮಗಳು ಸಯ್ಯಿದತ್ ಬುಶ್ರಾ ಬೀವಿ ಜಮಲುಲ್ಲೈಲಿ ಸರ್ಟಿಫಿಕೆಟ್ ವಿತರಣೆ ಮಾಡಲಿದ್ದಾರೆ. ಖಮರಿಯಾ ವಿಮೆನ್ಸ್ ಅಕಾಡಮಿಯ ಪ್ರಾಂಶುಪಾಲ ಸಈದಾ ಫಾತಿಮಾ ಅಲ್ ಮಾಹಿರಾ ಮುಖ್ಯ ಭಾಷಣ ಮಾಡಲಿದ್ದು, ಮಸ್‌ನವಿ ಶೀ ಕ್ಲಬ್ ಪ್ರಧಾನ ಕಾರ್ಯದರ್ಶಿ ರಾಹಿಲಾ ಶೇಖ್ ಅಲ್ ಖಮರಿಯಾ, ಅಲ್ ಮುಜವ್ವಿದಾ ಎಸೋಸಿಯೇಶನ್ ಅಧ್ಯಕ್ಷೆ ತಾಹಿರಾ ಸುಲ್ತಾನಿಯಾ ಮಾಣಿ ಸಂದೇಶ ಭಾಷಣ ಮಾಡಲಿದ್ದಾರೆ.
ವಿಮೆನ್ಸ್ ಇಸ್ಲಾಮಿಕ್ ಎಜುಕೇಶನ್ ಕೌನ್ಸಿಲ್ ಅಧ್ಯಕ್ಷ ಡಾ.ಎಮ್ಮೆಸ್ಸೆಂ ಝೈನಿ ಕಾಮಿಲ್, ಕಾರ್ಯದರ್ಶಿ ಬಶೀರ್ ಅಹ್ಸನಿ ತೋಡಾರ್, ಅಲ್ ಮುಜವ್ವಿದಾ ಪ್ರಿನ್ಸಿಪಾಲ್ ಅಬ್ದುಲ್ ಜಲೀಲ್ ಇಂದಾದಿ ಸಂದೇಶ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.





