ವಾಟ್ಸಾಪ್‍ಗೆ ಲಿಂಕ್ ಕಳಿಸಿ ಪೊಲೀಸ್ ಪೇದೆ ಬ್ಯಾಂಕ್ ಖಾತೆಯಿಂದ ಹಣ ಕಳವು

ಬೆಂಗಳೂರು, ಫೆ.28: ಸಿಎಆರ್ ಪೊಲೀಸ್ ಪೇದೆ ಭದ್ರಯ್ಯ ಅವರಿಗೆ ಬ್ಯಾಂಕ್ ಖಾತೆ ಬ್ಲಾಕ್ ಆಗಿದೆ ಎಂದು ಹೇಳಿ 73 ಸಾವಿರ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಪೇದೆ ಭದ್ರಯ್ಯ ಅವರಿಗೆ ಮೊಬೈಲ್ ಕರೆ ಮಾಡಿದ್ದ ದುಷ್ಕರ್ಮಿಗಳು, ನಿಮ್ಮ ಎಸ್‍ಬಿಐ ಬ್ಯಾಂಕ್ ಖಾತೆ ಬ್ಲಾಕ್ ಆಗಿದೆ. ಪಾನ್‍ಕಾರ್ಡ್ ಸಂಖ್ಯೆ ಮತ್ತೊಮ್ಮೆ ತಿಳಿಸಿ ಎಂದು ಹೇಳಿದ್ದಾರೆ. ಬಳಿಕ ಭದ್ರಯ್ಯ ಮೊಬೈಲ್ ವಾಟ್ಸಾಪ್‍ಗೆ ಲಿಂಕ್ ಕಳಿಸಿದ್ದಾರೆ. ಲಿಂಕ್ ಕ್ಲಿಕ್ ಮಾಡಿದಾಗ ಎರಡು ಖಾತೆಯಲ್ಲಿದ್ದ ಹಣ ವರ್ಗಾವಣೆಯಾಗಿದೆ.
ಎಸ್‍ಬಿಐ ಸಹಾಯವಾಣಿಯಿಂದ ಕರೆ ಮಾಡಿರುವುದಾಗಿ ನಂಬಿಸಿ ವಂಚನೆ ಮಾಡಲಾಗಿದೆ. ಈ ಬಗ್ಗೆ ಆಗ್ನೇಯ ವಿಭಾಗದ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.
Next Story





