Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಶಿವಾಜಿನಗರ ಕ್ಷೇತ್ರದ ಮುಸ್ಲಿಂ, ದಲಿತ...

ಶಿವಾಜಿನಗರ ಕ್ಷೇತ್ರದ ಮುಸ್ಲಿಂ, ದಲಿತ ಮತದಾರರ ಹೆಸರುಗಳನ್ನು ಕೈಬಿಡಲು ಹುನ್ನಾರ?

ದಿ ನ್ಯೂಸ್ ಮಿನಿಟ್ ವರದಿ

28 Feb 2023 8:59 PM IST
share
ಶಿವಾಜಿನಗರ ಕ್ಷೇತ್ರದ ಮುಸ್ಲಿಂ, ದಲಿತ ಮತದಾರರ ಹೆಸರುಗಳನ್ನು ಕೈಬಿಡಲು ಹುನ್ನಾರ?
ದಿ ನ್ಯೂಸ್ ಮಿನಿಟ್ ವರದಿ

ಹೊಸದಿಲ್ಲಿ,ಫೆ.21: ಬಿಜೆಪಿ ಕಾರ್ಯಕರ್ತರು ನೀಡಿದ ವಿವಾದಾತ್ಮಕ ದೂರಿನ ಆಧಾರದಲ್ಲಿ ಬೆಂಗಳೂರಿನ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಸಾವಿರಾರು ಮತದಾರರ ಅದರಲ್ಲಿಯೂ ವಿಶೇಷವಾಗಿ ಮುಸ್ಲಿಮರು ಹಾಗೂ ದಲಿತರ ಹೆಸರುಗಳನ್ನು ಮತದಾರಪಟ್ಟಿಯಿಂದ ಕೈಬಿಡುವ ಸಾಧ್ಯತೆಗಳಿವೆಯೆಂಬ ಆತಂಕಕಾರಿ ವಿಷಯವನ್ನು ‘ ದಿ ನ್ಯೂಸ್ ಮಿನಿಟ್’ ಸುದ್ದಿ ಜಾಲತಾಣದ ವರದಿಯೊಂದು ಬಹಿರಂಗಪಡಿಸಿದೆ.

ಬಿಜೆಪಿ ಕಾರ್ಯಕರ್ತರು 2022ರ ಆಕ್ಟೋಬರ್ ನಲ್ಲಿ ಸಲ್ಲಿಸಿದ ದೂರಿನಲ್ಲಿ, ಶಿವಾಜಿನಗರ ಕ್ಷೇತ್ರದಲ್ಲಿ 26 ಸಾವಿರ ಅಕ್ರಮ ಮತದಾರರರಿಂದ್ದಾರೆಂದು ಆರೋಪಿಸಲಾಗಿದೆ. ಇವರಲ್ಲಿ ಅನೇಕರು ಈ ವಿಧಾನಸಭಾ ಕ್ಷೇತ್ರದಿಂದ ಹೊರಹೋಗಿದ್ದಾರೆ ಇಲ್ಲವೇ ಸಾವನ್ನಪ್ಪಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿತ್ತು.

ಶಿವಾಜಿನಗರ ಕ್ಷೇತ್ರದ ಮತದಾರರ ಅಂತಿಮಪಟ್ಟಿಯು ಸಿದ್ಧಗೊಂಡ ಆನಂತರ, ಈ ವರ್ಷದ ಜನವರಿಯಲ್ಲಿ ಭಾರತೀಯ ಚುನಾವಣಾ ಆಯೋಗವು 9,150 ಮತದಾರರಿಗೆ ನೋಟಿಸ್ ಜಾರಿಗೊಳಿಸಿತ್ತು. ಆದರೆ ಈ ನಡೆಯು ಸ್ವತಃ ಭಾರತೀಯ. ಚುನಾವಣಾ ಆಯೋಗವು 2021ರ ಸೆಪ್ಟೆಂಬರ್ 12ರಂದು ಜಾರಿಗೊಳಿಸಿರುವ ಪ್ರಮಾಣಿತ ಕಾರ್ಯರ್ವಹಣಾ ವಿಧಾನ (ಎಸ್ಓಪಿಗಳು)ಗಳ ಉಲ್ಲಂಘನೆಯಾಗಿದೆಯೆಂದು ‘ದಿ ನ್ಯೂಸ್ ಮಿನಿಟ್’ ವರದಿ ಹೇಳಿದೆ.

ಹಾಲಿ ವಿಧಾನಸಭೆಯ ಅವಧಿ ಮುಕ್ತಾಯಗೊಳ್ಳುವುದಕ್ಕೆ ಆರು ತಿಂಗಳು ಮುಂಚಿತವಾಗಿ ಮತದಾರರ ಪಟ್ಟಿಯಿಂದ ಸ್ವಯಂಪ್ರೇರಿತವಾಗಿ ಹೆಸರುಗಳನ್ನು ಕೈಬಿಡುವಂತಿಲ್ಲವೆಂದು ವರದಿಯು ಬೆಟ್ಟು ಮಾಡಿ ತೋರಿಸಿದೆ.ಆದರೆ ಶಿವಾಜಿನಗರ ಕ್ಷೇತ್ರದ ಮತದಾರರ ಪಟ್ಟಿಯಿಂದ ಕೆಲವು ಮತದಾರರ ಹೆಸರುಗಳನ್ನು ಕೈಬಿಟ್ಟಿರುವ ತನ್ನ ನಡೆಯನ್ನು ಭಾರತೀಯ ಚುನಾವಣಾ ಆಯೋಗವು ಸಮರ್ಥಿಸಿಕೊಂಡಿದೆ.

ಕೆಲವು ಸನ್ನಿವೇಶಗಳಲ್ಲಿ ಮತದಾರರ ಹೆಸರುಗಳನ್ನು ಕೈಬಿಡಲು ಅವಕಾಶವಿದೆಯೆಂದು ಪ್ರತಿಪಾದಿಸುವ ಎಸ್ಓಪಿಯ ಉಪವಾಕ್ಯವೊಂದನ್ನು ಅದು ಉಲ್ಲೇಖಿಸಿದೆ. ಆದರೆ ರಾಜಕೀಯ ಪಕ್ಷವೊಂದು ಸಲ್ಲಿಸಿದ ದೂರನ್ನು ಪರಿಗಣನೆಗೆ ತೆಗೆದುಕೊಂಡು ‘ವಿಶೇಷ ಸನ್ನಿವೇಶಗಳ’ ಅಡಿಯಲ್ಲಿ ಎಂಬ ಉಪವಾಕ್ಯವನ್ನು ಉಲ್ಲೇಖಿಸಿ, ಚುನಾವಣಾ ಆಯೋಗವು ಮತದಾರರ ಹೆಸರುಗಳನ್ನು ಹೇಗೆ ಕೈಬಿಡಲು ಸಾಧ್ಯವೆಂದು ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಎನ್ಜಿಓ ಸಂಸ್ಥೆ ‘ಪೀಪಲ್ಸ್ ಫಸ್’್ಟನ ಅಧ್ಯಕ್ಷ ಎಂ.ಜಿ. ದೇವಸಹಾಯಂ ಪ್ರಶ್ನಿಸುತ್ತಾರೆ.

‘ಅಕ್ರಮ’ಮತದಾರರ ಪಟ್ಟಿಯ ಹಿಂದೆ ಚಿಲುಮೆಯ ನಂಟು?

ಬೆಂಗಳೂರಿನ ಹೃದಯಭಾಗದಲ್ಲಿರುವ ಶಿವಾಜಿ ನಗರ ವಿಧಾನಸಭಾ ಕ್ಷೇತ್ರವು 1.91 ಲಕ್ಷ ಮತದಾರರನ್ನು ಹೊಂದಿದ್ದು, ಅವರಲ್ಲಿ ಶೇ.40ರಷ್ಟು ಮಂದಿ ಮುಸ್ಲಿಮರು. 2008ರಿಂದೀಚೆಗೆ ಈ ಕ್ಷೇತ್ರವನ್ನು ಕಾಂಗ್ರೆಸ್ ಶಾಸಕರು ಪ್ರತಿನಿಧಿಸುತ್ತಾ ಬಂದಿದ್ದಾರೆ.

ಅವರಲ್ಲಿ ಶೇ.40ರಷ್ಟು ಮಂದಿ ಮುಸ್ಲಿಮರು. 2008ರಿಂದೀಚೆಗೆ ಈ ಕ್ಷೇತ್ರವನ್ನು ಕಾಂಗ್ರೆಸ್ ಶಾಸಕರೇ ಪ್ರತಿನಿಧಿಸುತ್ತಾ ಬಂದಿದ್ದಾರೆ. 2022ರಲ್ಲಿ ಬಿಜೆಪಿ ಬೆಂಬಲಿಗರು ಸಲ್ಲಿಸಿದ ಖಾಸಗಿ ದೂರಿನಲ್ಲಿ ಈ ಕ್ಷೇತ್ರದ 26 ಸಾವಿರ ಮತದಾರರ ಹೆಸರುಗಳು ಅಕ್ರಮವಾಗಿ ಸೇರ್ಪಡೆಗೊಂಡಿವೆ ಎಂದು ಆರೋಪಿಸಿದ್ದರು. ಆದರೆ ಈ ಖಾಸಗಿ ಗುಂಪಿಗೆ ‘ಅಕ್ರಮ ಮತದಾರರ’ ಹೆಸರುಗಳ ಪಟ್ಟಿ ಹೇಗೆ ದೊರೆಯಿತೆಂಬುದೇ ನಿಗೂಢವಾಗಿಯೇ ಇದೆ ಎಂದು ವರದಿ ಹೇಳಿದೆ.

ದೂರು ಸಲ್ಲಿಕೆಯಾದ ಒಂದು ತಿಂಗಳ ಬಳಿಕ ಅಂದರೆ, 2022ರ ನವೆಂಬರ್ 16ರಂದು ‘ದಿ ನ್ಯೂಸ್ ಮಿನಿಟ್’ ಸುದ್ದಿಸಂಸ್ಥೆಯು ಪ್ರಕಟಿಸಿದ ತನಿಖಾ ವರದಿಯೊಂದರಲ್ಲಿ ಬಿಜೆಪಿ ಜೊತೆ ನಂಟು ಹೊಂದಿರುವ ಚಿಲುಮೆ ಎಂಬ ಖಾಸಗಿ ಏಜೆನ್ಸಿಯು ಶಿವಾಜಿ ನಗರ ಸೇರಿದಂತೆ ವಿವಿಧ ಕ್ಷೇತ್ರಗಳಿಂದ ಮತದಾರರ ದತ್ತಾಂಶಗಳನ್ನು ಅಕ್ರಮವಾಗಿ ಸಂಗ್ರಹಿಸಿರುವುದನ್ನು ಬಹಿರಂಗಪಡಿಸಿತ್ತು.

ಈ ವರದಿಯು ಕರ್ನಾಟಕದ ರಾಜಕೀಯದಲ್ಲಿ ಬಿರುಗಾಳಿಯನ್ನು ಎಬ್ಪಿಸಿದ್ದು, ತರುವಾಯು ಭಾರತೀಯ ಚುನಾವಣಾ ಆಯೋಗವು 2022ರ ಡಿಸೆಂಬರ್ 24ರೊಳಗೆ ಶಿವಾಜಿನಗರದ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲಾದ ಹಾಗೂ ಕೈಬಿಡಲಾದ ಮತದಾರರ ಹೆಸರುಗಳನ್ನು ಪರಿಶೀಲಿಸುವಂತೆ ಆದೇಶಿಸಿತ್ತು.

ಶಿವಾಜಿನಗರ ಕ್ಷೇತ್ರದ ಅಂತಿಮ ಮತದಾರರ ಪಟ್ಟಿಯು 2023ರ ಜನವರಿ 15ರಂದು ಪ್ರಕಟಿಸಲಾಗಿತ್ತು. ಅಂತಿಮ ಮತದಾರರ ಪಟ್ಟಿ ಪ್ರಕಟವಾದ ಎಂಟು ದಿನಗಳ ಬಳಿಕ ಬಿಜೆಪಿಯು ಚುನಾವಣಾ ಆಯೋಗವನ್ನು ಸಮೀಪಿಸಿ, ಖಾಸಗಿ ದೂರಿನಲ್ಲಿ ಉಲ್ಲೇಖಿಸಲಾದ 26 ಸಾವಿರ ಮತದಾರರ ಹೆಸರುಗಳನ್ನು ಕೈಬಿಡಬೇಕೆಂದು ಆಗ್ರಹಿಸಿತ್ತು. ಆನಂತರ ಪಕ್ಷವು ಫೆಬ್ರವರಿ 1ರಂದು ಈ ಬಗ್ಗೆ ಹೈಕೋರ್ಟ್ಗೆ ರಿಟ್ ಅರ್ಜಿಯನ್ನು ಕೂಡಾ ಸಲ್ಲಿಸಿತ್ತು.

ಈ ಬಗ್ಗೆ ‘ದಿ ನ್ಯೂಸ್ ಮಿನಿಟ್’ ಸುದ್ದಿಸಂಸ್ಥೆಗೆ ಮಾಹಿತಿ ನೀಡಿರುವ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು, ಚುನಾವಣಾಧಿಕಾರಿಗಳು ಎಲ್ಲಾ 26 ಸಾವಿರ ಹೆಸರುಗಳ ತಪಾಸಣೆ ನಡೆಸಿದ್ದು, ಅವರಲ್ಲಿ 9159 ಮಂದಿ ಮಾತ್ರ ತಮ್ಮ ಹಿಂದಿನ ಮನೆಗಳಿಂದ ವಾಸ್ತವ್ಯವನ್ನು ಬದಲಾಯಿಸಿದ್ದಾರೆ ಅಥವಾ ಮೃತಪಟ್ಟಿದ್ದಾರೆ. ಅದೇ ರೀತಿ, ನೂರಾರು ಜನರಿಗೆ ಜನವರಿ 10ರಿಂದ ಫೆಬ್ರವರಿ 15ರ ನಡುವೆ ನೋಟಿಸ್ ಜಾರಿಗೊಳಿಸಿದ್ದು, ಚುನಾವಣಾ ಅಧಿಕಾರಿಗಳ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ. ಒಂದು ವೇಳೆ ಅವರು ನಿಗದಿತ ತಾರೀಕು ಹಾಗೂ ಸಮಯದಲ್ಲಿ ಚುನಾವಣಾ ನೋಂದಣಿ ಕಚೇರಿಗೆ ಹಾಜರಾಗದೆ ಇದ್ದಲ್ಲಿ, ಅವರ ಹೆಸರುಗಳನ್ನು ಮತದಾರ ಪಟ್ಟಿಯಿದ ಕೈಬಿಡಲಾಗುದೆಂದು ನೋಟಿಸ್ನಲ್ಲಿ ತಿಳಿಸಲಾಗಿದೆ ಎಂವರು ಹೇಳಿದ್ದಾರೆ.ಆದರೆ ಚುನಾವಣಾ ಆಯೋಗದ ಈ ಪ್ರಕ್ರಿಯೆಯು ಹಲವರು ಪ್ರಶ್ನೆಗಳಿಗೆ ದಾರಿ ಮಾಡಿಕೊಟ್ಟಿದೆ.

ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿರುವ ಚುನಾವಣಾಧಕಾರಿಗಳ ನಡೆ

‘‘ಮತದಾರರ ಪಟ್ಟಿಯನ್ನು ಪ್ರಕಟಿಸಿದ ಆನಂತರವೂ ಈ ನೋಟಿಸ್ ಗಳನ್ನು ಯಾಕೆ ಕಳುಹಿಲಾಯಿತು?. 2022ರ ಅಕ್ಟೋಬರ್ ನಲ್ಲಿ ಮತದಾರರ ಪಟ್ಟಿಗೆ ಸಂಬಂಧಿಸಿ ದೂರು ನೀಡಲಾಗಿತ್ತು. ಒಂದು ವೇಳೆ ಮುಖ್ಯ ಚುನಾವಣಾಧಿಕಾರಿಗೆ ಕ್ರಮ ಕೈಗೊಳ್ಳಬೇಕೆಂದಿದ್ದಲ್ಲಿ ಇದಕ್ಕೂ ಮುನ್ನ ಅದನ್ನು ಯಾಕೆ ಕೈಗೊಳ್ಳಲಿಲ್ಲ?. ನಿಯಮಗಳ ಪ್ರಕಾರ ಹಾಲಿ ಮತದಾರರ ಪಟ್ಟಿಯಲ್ಲಿನ ಹೆಸರೊಂದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲು ಅಥವಾ ಅದನ್ನು ತೆಗೆದುಹಾಕಬೇಕೆಂದು ಬಯಸುವವರು ಫಾರಂ 7ನ್ನು ಕಡ್ಡಾಯವಾಗಿ ಭರ್ತಿ ಮಾಡಬೇಕಾಗುತ್ತದೆ. ಬಿಜೆಪಿಯು ಎಲ್ಲಾ 26 ಸಾವಿರ ಹೆಸರುಗಳಿಗೂ ಫಾರಂ 7 ಅನ್ನು ಭರ್ತಿ ಮಾಡಿದೆಯೇ?. ಒಂದು ವೇಳೆ ಅವರು ಮಾಡದೆ ಇದ್ದಲ್ಲಿ, ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯು ಅವರ ದೂರನ್ನು ಹೇಗೆ ಸ್ವೀಕರಿಸಿತು? ಎಂದು ನಿವೃತ್ತ ಐಎಎಸ್ ಅಧಿಕಾರಿ ದೇವಸಹಾಯಂ ಪ್ರಶ್ನಿಸಿದ್ದಾರೆ.

‘‘ನನ್ನ ಜೀವಮಾನವಿಡೀ ನಾನು ಈ ಮನೆಯಲ್ಲಿಯೇ ವಾಸವಾಗಿರುವೆ. ಆದರೆ, ನಾನು ಬೇರೆಡೆಗೆ ಸ್ಥಳಾಂತರಗೊಂಡಿದ್ದೇನೆಂದು ಚುನಾವಣಾಧಿಕಾರಿಗಳು ಹೇಳುತ್ತಿದ್ದಾರೆ. ಕಳೆದ 80 ವರ್ಷಗಳಿಂದ ನನ್ನ ಕುಟುಂಬವು ಇದೇ ವಿಳಾಸದಲ್ಲಿ ವಾಸವಾಗಿದೆ. ಆದರೆ ಬಿಬಿಎಂಪಿಯ ಪಟ್ಟಿಯು, ನಾನು ಕುಟುಂಬದ ಇತರ ಇಬ್ಬರು ಸದಸ್ಯರೊಂದಿಗೆ ಇನ್ನೊಂದು ವಿಳಾಸಕ್ಕೆ ಸ್ಥಳಾಂತರಗೊಂಡಿರುವುದಾಗಿ ಹೇಳಿದೆ.

-ಎಸ್. ರಾಜನ್  

ದಲಿತ ಸಮುದಾಯದ ಶಿವಾಜಿನಗರ ನಿವಾಸಿ

‘‘ ನನ್ನ ವಿಳಾಸವನ್ನು ದೃಢಪಡಿಸುವಂತೆ ಇಲ್ಲದೆ ಇದ್ದಲ್ಲಿ ನನ್ನ ಹೆಸರನ್ನು ಮತದಾರ ಪಟ್ಟಿಯಿಂದ ಕೈಬಿಡಲಾಗುವುದು ಎಂಬ ನೋಟಿಸ್ ನನಗೆ ಬಂದಿತ್ತು. ನಾನು ವಿಳಾಸದ ಮರುದೃಢೀಕರಣಕ್ಕಾಗಿ ಮತದಾರರ ನೋಂದಣಿ ಅಧಿಕಾರಿಗಳ ಕಚೇರಿಗೆ ತೆರಳಿದ್ದೆ. ಆದರೆ ಜೀವಮಾನವಿಡೀ ಇಲ್ಲೇ ವಾಸವಾಗಿದ್ದರೂ ನನ್ನ ವಿಳಾಸವನ್ನು ದೃಢಪಡಿಸಲು ನೋಟಿಸ್ ಬಂದಿದೆ’’.

- ರಬಿಯಾ ಫಾತಿಮಾ

ಶಿವಾಜಿ ನಗರ ನಿವಾಸಿ

ಮತದಾರರಿಗೆ ಕಿರುಕುಳ ನೀಡಲಾಗುತ್ತಿದೆ. ಹಲವಾರು ಮಂದಿ ಮೊದಲ ನೋಟಿಸ್ ಗೆ  ಉತ್ತರಿಸಿದ್ದಾರೆ. ಅದರ ಹೊರತಾಗಿಯೂ ಅವರಿಗೆ ಎರಡನೆ ನೋಟಿಸ್ ಜಾರಿಗೊಳಿಸಲಾಗಿದ್ದು, ಚುನಾವಣಾ ನೋಂದಣಿ ಅಧಿಕಾರಿಗಳ ಕಚೇರಿಗೆ ಹಾಜರಾಗುವಂತೆ ಸೂಚಿಸಲಾಗಿದೆ. ಈ ಪ್ರಕ್ರಿಯೆಯು ಜನರನ್ನು ಬಳಲುವಂತೆ ಮಾಡಿದೆ. ಈ ಪ್ರಯೋಗಕ್ಕೆ ಶಿವಾಜಿನಗರ ಕ್ಷೇತ್ರವನ್ನೇ ಯಾಕೆ ಬಳಸಲಾಯಿತೆಂಬುದೇ ನನಗೆ ತಿಳಿದಿಲ್ಲ. ಬಹುಶಃ ಕಾಂಗ್ರೆಸ್ ಇದು ಸುರಕ್ಷಿತ ಕ್ಷೇತ್ರವೆಂಬ ಕಾರಣಕ್ಕಾಗಿ ಬಿಜೆಪಿ ಹೀಗೆ ಮಾಡುತ್ತಿರಬಹುದು. ಮತದಾರ ಪಟ್ಟಿಯಿಂದ ಮತದಾರರ ಹೆಸರುಗಳನ್ನು ಕೈಬಿಡುವ ಮೂಲಕ ಚುನಾವಣೆಯನ್ನು ಗೆಲ್ಲಲು ಅದು ಬಯಸುತ್ತಿದೆ.

- ರಿಜ್ವಾನ್ ಅರ್ಶದ್, ಕಾಂಗ್ರೆಸ್ ಶಾಸಕ

ಕೃಪೆ: Thenewsminute.com

share
Next Story
X