ಕಾರ್ಕಳ: ತಾಯಿ, ಮಗು ನಾಪತ್ತೆ

ಉಡುಪಿ, ಫೆ.28: ಕಾರ್ಕಳ ತಾಲೂಕು ಗಣಪತಿಕಟ್ಟೆ ದಿಡಿಂಬಿರಿ ನಿವಾಸಿ ರಂಗಿತಾ (23) ಎಂಬ ಯುವತಿ ತನ್ನ 3 ವರ್ಷ ಪ್ರಾಯದ ಮಗಳಾದ ಶಾನ್ವಿಕಾಳೊಂದಿಗೆ ಫೆ.18ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ.
150 ಸೆಂ.ಮಿ. ಎತ್ತರ, ಎಣ್ಣೆಕಪ್ಪು ಮೈಬಣ್ಣ, ಕೋಲು ಮುಖ, ಸಪೂರ ಶರೀರ ಹೊಂದಿದ್ದು, ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿಗಳನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
Next Story





