Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಗುತ್ತಿಗೆದಾರರಿಂದ ವಾರಾಹಿ ಯೋಜನೆಯ...

ಗುತ್ತಿಗೆದಾರರಿಂದ ವಾರಾಹಿ ಯೋಜನೆಯ ದಿಕ್ಕು-ದಿಶೆ ನಿರ್ಧಾರ: ಉಡುಪಿ ಜಿಲ್ಲಾ ರೈತ ಸಂಘ ಕಳವಳ

28 Feb 2023 4:16 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಗುತ್ತಿಗೆದಾರರಿಂದ ವಾರಾಹಿ ಯೋಜನೆಯ ದಿಕ್ಕು-ದಿಶೆ ನಿರ್ಧಾರ: ಉಡುಪಿ ಜಿಲ್ಲಾ ರೈತ ಸಂಘ ಕಳವಳ

ಕುಂದಾಪುರ:  ವಾರಾಹಿ ಯೋಜನೆಯ ನೀರು ಯಾವ ದಿಕ್ಕಿನಲ್ಲಿ ಹೇಗೆ ಹೋಗಬೇಕೆನ್ನುವ ತೀರ್ಮಾನವನ್ನು ಗುತ್ತಿಗೆದಾರರೇ ನಿರ್ವಹಿಸುವ ದುಸ್ಥಿತಿ ಸುದೀರ್ಘ ಕಾಲದಿಂದ ಅನುಷ್ಠಾನಗೊಳ್ಳುತ್ತಿರುವ ಈ ಯೋಜನೆಗೆ ಬಂದಿರುವುದು ವ್ಯವಸ್ಥೆಯ ದುರಂತವಾಗಿದೆ. ರೈತರ ಮಹತ್ವಾಕಾಂಕ್ಷೆಯ ಯೋಜನೆಯೊಂದು ಎತ್ತ ಸಾಗುತ್ತಿದೆ ಎಂಬುದನ್ನು ಊಹಿಸಲು ಸಾಧ್ಯವಾಗುತ್ತಿಲ್ಲ ಎಂದು ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ, ವಿಧಾನ ಪರಿಷತ್‌ನ ಮಾಜಿ ಸಭಾಪತಿ ಕೆ.ಪ್ರತಾಪ ಚಂದ್ರ ಶೆಟ್ಟಿ  ತೀವ್ರ ಆತಂಕ ಹಾಗೂ ಕಳವಳ ವ್ಯಕ್ತಪಡಿಸಿದ್ದಾರೆ.

ಕುಂದಾಪುರದ ಆರ್.ಎನ್. ಶೆಟ್ಟಿ ಸಭಾಭವನದಲ್ಲಿ ಮಂಗಳವಾರ ಸಂಜೆ ನಡೆದ ಉಡುಪಿ ಜಿಲ್ಲಾ ರೈತ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, 15,000 ಹೇಕ್ಟೆರ್ ಭೂ ಪ್ರದೇಶಗಳಿಗೆ ನೀರೂಣಿಸುವ ಮೂರೂವರೆ ದಶಕಗಳ ಈ ಯೋಜನೆಯನ್ನು ಎಲ್ಲಿ ದಡ ಮುಟ್ಟಿಸಬೇಕು ಎನ್ನುವುದೆ ಅರ್ಥವಾಗುತ್ತಿಲ್ಲ ಎಂದವರು ನುಡಿದರು.

ವಿಧಾನ ಪರಿಷತ್ ಅಧ್ಯಕ್ಷನಾಗಿದ್ದಾಗ ಅರ್ಜಿ ವಿವೇವಾರಿಗಾಗಿ ಕಳುಹಿಸಿದ್ದ ಸಮಿತಿಯ ಮೇಲೆ ಇದ್ದ ಭರವಸೆಗಳು ಹುಸಿಯಾಗಿವೆ. ಕಳೆದ 4-5 ವರ್ಷಗಳಿಂದ ಶಾಸಕರು ಸೇರಿದಂತೆ ಜನಪ್ರತಿನಿಧಿಗಳು ಯೋಜನೆಯ ಕುರಿತು ಮಾತನಾಡುತ್ತಿಲ್ಲ. ಕೇವಲ ರೈತ ಸಂಘ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತುವ ಕೆಲಸ ಮಾಡುತ್ತಿದೆ. ಗುತ್ತಿಗೆದಾರರ ಆಶ್ರಯದಲ್ಲಿ ಯಾರೆಲ್ಲ ಇದ್ದಾರೆ ಎನ್ನುವುದನ್ನು ಪ್ರಶ್ನೆ ಮಾಡಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದರು.

ಹಾಲಾಡಿ ಹೊಳೆಗೆ ನೀರು: ಪ್ರಭಾವಿಗಳೆ ಇರುವ ಹಾಲಾಡಿ ಹೊಳೆಗೆ ಯೋಜನೆಯ ನೀರು ಸೇರುತ್ತಿದೆ. ನೀರು ಬೇಕಾದ ಕಡೆಗೆ ಹರಿದು ಹೋಗುತ್ತಿಲ್ಲ. ವಾರಾಹಿ ಯೋಜನೆಯ ಮೂಲ ಉದ್ದೇಶಗಳು ಇಂದು  ಮರೆಯಾಗುತ್ತಿದೆ ಎಂದರು.

ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅಂದಾಜು 100 ಎಕ್ರೆ ಬೆಲೆ ಬಾಳುವ ಆಸ್ತಿಯನ್ನು ಹೊಂದಿದ್ದು, ಇದು ಜಿಲ್ಲೆಯ ರೈತ ಬಾಂಧವರ ಆಸ್ತಿಯಾಗಿದೆ. ಇದು ಅನ್ಯರ ಪರಭಾರೆಯಾಗದಂತೆ ಜಿಲ್ಲೆಯ ರೈತರು ಹಕ್ಕೊತ್ತಾಯ ಮಾಡಿ ಕಾಪಾಡಿಕೊಳ್ಳಲಿದ್ದಾರೆ. ಇಲ್ಲಿನ ಅಕ್ರಮಗಳ ಬಗ್ಗೆ ಕೇವಲ ರೈತ ಸಂಘ ಮಾತ್ರ ಮಾತನಾಡುತ್ತಿದೆ ಎಂದವರು ಬೇಸರ ವ್ಯಕ್ತಪಡಿಸಿದರು.

‘ಮನೆಯ ಕಲ್ಲುಗಳನ್ನೆ ಕಿತ್ತು ಮಾರಾಟ ಮಾಡುವ’ ಭ್ರಷ್ಟಾಚಾರದ ಕೂಟದಿಂದ ಸ್ವಯಂಪ್ರೇರಿತರಾಗಿ ಹೊರಕ್ಕೆ ಬರುವ ತೀರ್ಮಾನಗಳನ್ನು ಕಾರ್ಖಾನೆಯ ನಿರ್ದೇಶಕರು ಮಾಡಬೇಕು. ಆಡಳಿತ ಮಂಡಳಿಯಲ್ಲಿ ಎಲ್ಲ ರಾಜಕೀಯ ಪಕ್ಷದವರಿದ್ದು, ಇಲ್ಲಿ ರಾಜಕೀಯ ಮಾಡುವ ಉದ್ದೇಶ ಇಲ್ಲ. ಕಾರ್ಖಾನೆಯ ಒಂದೊಂದು ಪೈಸೆಯೂ ವಸೂಲಾತಿಯಾಗಬೇಕು ಎನ್ನುವುದು ಉದ್ದೇಶವಾಗಿದೆ ಎಂದರು.

ಜಿಲ್ಲಾ ರೈತ ಸಂಘದ ವಕ್ತಾರ ಕೆ.ವಿಕಾಸ್ ಹೆಗ್ಡೆ ಮಾತನಾಡಿ, ಅಕ್ರಮ- ಸಕ್ರಮಕ್ಕಾಗಿ 57ರಡಿಯಲ್ಲಿ ಅರ್ಜಿ ಸ್ವೀಕರಿಸಿ, ಬಡವರು 10-15 ಸಾವಿರ ವ್ಯಯ ಮಾಡಿದ ಬಳಿಕ ಈ ಜಾಗ ಡೀಮ್ಡ್ ಅರಣ್ಯ ಅಥವಾ ಕುಮ್ಕಿ ಎನ್ನುವ ಹಿಂಬರಹ ನೀಡಿ ಅರ್ಜಿಯನ್ನು ತಿರಸ್ಕರಿಸಲಾಗುತ್ತಿದೆ. ಅರ್ಜಿ ಸ್ವೀಕರಿಸುವ ಹಂತದಲ್ಲಿಯೇ ಅರ್ಜಿದಾರರ ಜಾಗದ ಬಗ್ಗೆ ಸ್ವಷ್ಟ ಮಾಹಿತಿಯನ್ನು ಪಡೆದುಕೊಳ್ಳುವುದರಿಂದ ಬಡವರಿಗೆ ಖರ್ಚಾಗುವ ಅನಗತ್ಯ ವೆಚ್ಚದ ಕಡಿವಾಣಕ್ಕೆ ಸಹಾಯವಾಗುತ್ತದೆ ಎಂದರು.

ಸತೀಶ್ ಕಿಣಿ ಬೆಳ್ವೆ, ಸೀತಾರಾಮ ಗಾಣಿಗ, ಸದಾನಂದ ಶೆಟ್ಟಿ ಕೆದೂರು, ಕೋಣಿ ಕೃಷ್ಣದೇವ ಕಾರಂತ್, ವಸಂತ ಹೆಗ್ಡೆ ಬೈಂದೂರು, ಕೃಷ್ಣ ಪೂಜಾರಿ ಅಮಾಸೆಬೈಲು ಮಾತನಾಡಿ ರೈತರ ವಿವಿಧ ಸಮಸ್ಯೆಗಳ ಕುರಿತು ಪ್ರಸ್ತಾಪಿಸಿದರು.

ಪ್ರಮುಖರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ಡಾ.ಅತುಲ್ ಕುಮಾರ ಶೆಟ್ಟಿ ಚಿತ್ತೂರು, ಮಲ್ಯಾಡಿ ಶಿವರಾಮ್ ಶೆಟ್ಟಿ, ನ್ಯಾಯವಾದಿ ಕೃಷ್ಣರಾಜ್ ಶೆಟ್ಟಿ ಚೋರಾಡಿ, ಶರತ್‌ಕುಮಾರ ಶೆಟ್ಟಿ ಬಾಳಿಕೆರೆ, ರೋಹಿತ್‌ಕುಮಾರ ಶೆಟ್ಟಿ ತೊಂಬಟ್ಟು, ಉದಯಕುಮಾರ ಶೆಟ್ಟಿ ವಂಡ್ಸೆ, ನಾರಾಯಣ ನಾಯ್ಕ್ ನೇರಳಕಟ್ಟೆ, ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಚಂದ್ರಶೇಖರ ಶೆಟ್ಟಿ ಮರತ್ತೂರು, ಶರತ್‌ಕುಮಾರ ಶೆಟ್ಟಿ ಕಾವ್ರಾಡಿ ಉಪಸ್ಥಿತರಿದ್ದರು.

ರೈತರ ಮೂಲಭೂತ ಅವಶ್ಯಕತೆಗಳಾದ ಆಕ್ರಮ-ಸಕ್ರಮ ಅರ್ಜಿಯ ಗೊಂದಲ, ಕಾಡುಪ್ರಾಣಿಗಳ ಹಾವಳಿ, ವರಾಹಿ ನೀರಾವರಿ ಯೋಜನೆ ಹಾಗೂ ಬ್ರಹ್ಮಾವರದ ದಕ್ಷಿಣ ಕನ್ನಡ ಸಹಕಾರಿ ಕಾರ್ಖಾನೆಯ ಕುರಿತಾದ ಹೋರಾಟಗಳ ಕುರಿತು ಆದ್ಯತೆಯ ಮೇರೆಗೆ ಕಾಳಜಿ ವಹಿಸಲು ತೀರ್ಮಾನಿಸಲಾಯಿತು.

ಸಕ್ಕರೆ ಕಾರ್ಖಾನೆ ಹಗರಣ ಹೈಕೋರ್ಟ್‌ಗೆ ಅರ್ಜಿ

ಬ್ರಹ್ಮಾವರದ ಸಕ್ಕರೆ ಕಾರ್ಖಾನೆಯ ಗುಜರಿ ಮಾರಾಟದಿಂದ ಕಾರ್ಖಾನೆಗೆ ಅಂದಾಜು 13 ಕೋಟಿಗಳಿಗಿಂತಲೂ ಹೆಚ್ಚು ನಷ್ಟವಾಗಿದೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಸರ್ಕಾರದ ವಿವಿಧ ಇಲಾಖೆಗಳಿಗೆ ಸೂಕ್ತ ತನಿಖೆಗಾಗಿ ಅರ್ಜಿ ಸಲ್ಲಿಸಿದ್ದರೂ ಸ್ಪಂದನೆಯಿಲ್ಲದ್ದರಿಂದ  ಉಡುಪಿ ಜಿಲ್ಲಾ ರೈತ ಸಂಘದ ಮೂಲಕ ರಾಜ್ಯದ ಉಚ್ಛ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗುವುದು. ಅಗತ್ಯ ಬಿದ್ದಲ್ಲಿ ಸರ್ವೋಚ್ಛ ನ್ಯಾಯಾಲಯದವರೆಗೂ ಹೋಗುವ ತೀರ್ಮಾನ ಮಾಡಲಾಗಿದೆ ಎಂದು ಕೆ. ಪ್ರತಾಪ್‌ ಚಂದ್ರ ಶೆಟ್ಟಿ  ನುಡಿದರು.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X