ಕುಂದಾಪುರ: ಸಮುದಾಯದಿಂದ ತಿರುಮಲೇಶ್‌ಗೆ ನುಡಿನಮನ

ಕುಂದಾಪುರ: ಸಮುದಾಯ ಕುಂದಾಪುರ ಆಯೋಜನೆಯ ಫೆಬ್ರವರಿ ತಿಂಗಳ ಓದು ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿಧನರಾದ ಸಾಹಿತಿ ಕೆ.ವಿ ತಿರುಮಲೇಶ್ ಅವರಿಗೆ ನುಡಿ ನಮನ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಕೆ.ವಿ ತಿರುಮಲೇಶ್ ಅವರ ಆರ್ತರು, ಕೀರ್ತನೆ, ರಾಜಧಾನಿಯ ಭಾಷೆ, ನೂರು ಮಂದಿ ಮನುಷ್ಯರು, ಮುಖಾಮುಖಿ, ಹಾಸಿಗೆ, ಮಂಡೂಕ ರಾಜ್ಯ, ಸರ್ಕಸ್, ಪೆಂಟಯ್ಯನ ಅಂಗಿ ಮುಂತಾದ ಕವಿತೆಗಳನ್ನು ಸಮುದಾಯ ಕುಂದಾಪುರದ ಸದಸ್ಯರು ವಾಚಿಸಿದರು.
ಸಾಹಿತಿ, ವಿಮರ್ಶಕ ಪ್ರೊ.ಮುರುಳಿಧರ ಉಪಾಧ್ಯಾಯ ಹಿರಿಯಡ್ಕ ಇವರು ಕೆ.ವಿ.ತಿರುಮಲೇಶ್‌ರ ಕವಿತೆಗಳು ಬದುಕು ಮತ್ತು ಬರಹ ವಿಮರ್ಶೆಗಳ ಕುರಿತು ಮಾತನಾಡಿದರು.
ಸಮುದಾಯ ಕುಂದಾಪುರದ ಅಧ್ಯಕ್ಷ ಡಾ.ಸದಾನಂದ ಬೈಂದೂರು ಸ್ವಾಗತಿಸಿದರು. ಕಾರ್ಯದರ್ಶಿ ವಾಸುದೇವ ಗಂಗೇರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
Next Story





