ಐಪಿಎಲ್-2023: ಜಸ್‌ಪ್ರೀತ್ ಬುಮ್ರಾ ಅಲಭ್ಯ?

ಹೊಸದಿಲ್ಲಿ, ಫೆ.28: ಭಾರತದ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಮುಂಬರುವ 2023ರ ಐಪಿಎಲ್‌ನಿಂದ ವಂಚಿತರಾಗುವ ಸಾಧ್ಯತೆಯಿದೆ ಎಂದು ಇಎಸ್‌ಪಿಎನ್‌ಕ್ರಿಕ್‌ಇನ್‌ಫೋ ಮಂಗಳವಾರ ವರದಿ ಮಾಡಿದೆ.
ದೀರ್ಘ ಸಮಯದಿಂದ ಕ್ರಿಕೆಟ್‌ಗೆ ವಾಪಸಾಗಲು ಕಾಯುತ್ತಿರುವ ಬುಮ್ರಾಗೆ ಇದು ತೀವ್ರ ಹಿನ್ನಡೆಯಾಗಿದೆ. ಮುಂಬೈ ಇಂಡಿಯನ್ಸ್ ಬೌಲರ್ ಬುಮ್ರಾ 2022ರ ಸೆಪ್ಟಂಬರ್‌ನಿಂದ ಅಂತರ್‌ರಾಷ್ಟ್ರೀಯಮಟ್ಟದ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದಾರೆ. ಜೂನ್ 7ರ ನಂತರ ದಿ ಓವಲ್‌ನಲ್ಲಿ ನಿಗದಿಯಾಗಿರುವ ವಿಶ್ವ ಟೆಸ್ಟ್ ಚಾಂಪಿಯನ್ ಫೈನಲ್‌ನಿಂದ(ಭಾರತಕ್ಕೆ ಇನ್ನಷ್ಟೇ ಅರ್ಹತೆ ಪಡೆಯಬೇಕಾಗಿದೆ)ವಂಚಿತರಾಗಬಹುದು.
ಬುಮ್ರಾ ತನ್ನನ್ನು ಕಾಡುತ್ತಿರುವ ಬೆನ್ನುನೋವಿನಿಂದಾಗಿ ಟ್ವೆಂಟಿ-20 ವಿಶ್ವಕಪ್, ಬಾಂಗ್ಲಾದೇಶ ಕ್ರಿಕೆಟ್ ಪ್ರವಾಸ ಹಾಗೂ ಶ್ರೀಲಂಕಾ ಹಾಗೂ ನ್ಯೂಝಿಲ್ಯಾಂಡ್ ವಿರುದ್ಧ ನಡೆದ ಸ್ವದೇಶಿ ಸರಣಿಯಿಂದಲೂ ಹೊರಗುಳಿದಿದ್ದರು. ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಇಲ್ಲವೇ ಏಕದಿನ ತಂಡದಲ್ಲೂ ಸ್ಥಾನ ಪಡೆದಿರಲಿಲ್ಲ.
ಬುಮ್ರಾ ಸಂಪೂರ್ಣ ಫಿಟ್ನೆಸ್ ಪಡೆದ ಬಳಿಕವೇ ತಂಡಕ್ಕೆ ವಾಪಸಾಗಬೇಕೆಂದು ಟೀಮ್ ಮ್ಯಾನೇಜ್‌ಮೆಂಟ್ ಹಾಗೂ ನಾಯಕ ರೋಹಿತ್ ಶರ್ಮಾ ಬಯಸುತ್ತಿದ್ದಾರೆ. ಬುಮ್ರಾರನ್ನು ತಂಡಕ್ಕೆ ವಾಪಸ್ ತರಲು ಅವಸರ ಪಡಬಾರದೆಂದು ಎಚ್ಚರಿಸಿದ್ದಾರೆ.







