ಹಾಂಕಾಂಗ್: 945 ದಿನಗಳ ಬಳಿಕ ಮಾಸ್ಕ್ ಕಡ್ಡಾಯ ನಿಯಮ ರದ್ದು

ಹಾಂಕಾಂಗ್, ಫೆ.28: ಹಾಂಕಾಂಗ್ನಲ್ಲಿ ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಜಾರಿಗೊಳಿಸಿದ್ದ ‘ಮಾಸ್ಕ್ ಧಾರಣೆ ಕಡ್ಡಾಯ’ ನಿಯಮವನ್ನು 945 ದಿನಗಳ ಬಳಿಕ ಅಂತ್ಯಗೊಳಿಸಲು ನಿರ್ಧರಿಸಲಾಗಿದೆ.
ಇದರೊಂದಿಗೆ ವಿಶ್ವದಲ್ಲಿ ಸುದೀರ್ಘಾವಧಿಯಿಂದ ಜಾರಿಯಲ್ಲಿದ್ದ ಮಾಸ್ಕ್ಧಾರಣೆ ನಿಯಮ ಅಂತ್ಯಗೊಳ್ಳಲಿದೆ. 2020ರ ಜುಲೈ 29ರಿಂದ ಹಾಂಕಾಂಗ್ನಲ್ಲಿ ಕಡ್ಡಾಯ ಮಾಸ್ಕ್ಧಾರಣೆ ನಿಯಮ ಜಾರಿಯಲ್ಲಿತ್ತು. ಬುಧವಾರ(ಮಾರ್ಚ್ 1ರಿಂದ) ಸಾರ್ವಜನಿಕ ಪ್ರದೇಶದಲ್ಲಿ ಮಾಸ್ಕ್ ಧಾರಣೆ ಕಡ್ಡಾಯದಿಂದ ವಿನಾಯಿತಿ ನೀಡಲಾಗಿದೆ. ಪ್ರವಾಸಿಗರನ್ನು ಆಕರ್ಷಿಸುವ ಸರಕಾರದ ಯೋಜನೆಗೆ ಪೂರಕವಾಗಿ ಈ ಕ್ರಮ ಜಾರಿಗೆ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Next Story





