ಬೆಂಗಳೂರು: ಅಪಘಾತದಲ್ಲಿ ಮೃತಪಟ್ಟ ಎಎಸ್ಸೈ ಅಂಗಾಂಗ ದಾನ ಮಾಡಿದ ಕುಟುಂಬ

ಬೆಂಗಳೂರು, ಫೆ.28: ಇತ್ತೀಚಿಗೆ ಅಪಘಾತಕ್ಕೆ ಗುರಿಯಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದ ಎಎಸ್ಸೈ ನಾಗರಾಜ್ ಅವರು ಚಿಕಿತ್ಸೆ ಫಲಕಾರಿ ಆಗದೆ ಸಾವನ್ನಪ್ಪಿದ್ದು, ಅಗಲಿಕೆಯ ನೋವಿನಲ್ಲೂ ಅವರ ಕುಟುಂಬಸ್ಥರು ಅಂಗಾಂಗ ದಾನ ಮಾಡಿದ್ದಾರೆ.
ಫೆ.26ರಂದು ಹೈಗ್ರೌಂಡ್ಸ್ ಠಾಣಾ ವ್ಯಾಪ್ತಿಯ ಬಸವೇಶ್ವರ ಸರ್ಕಲ್ ಬಳಿ ಕರ್ತವ್ಯ ನಿರತ ಎಎಸ್ಸೈ ನಾಗರಾಜ್ ಅವರಿಗೆ ಆಟೊವೊಂದು ಢಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ನಾಗರಾಜ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮಂಗಳವಾರ ಚಿಕಿತ್ಸೆ ಫಲಿಸದೇ ನಾಗರಾಜ್ ಮೃತಪಟ್ಟಿದ್ದಾರೆ.
ಆದುದರಿಂದ ನಾಗರಾಜ್ ಅವರ ಅಗಲಿಕೆಯ ನೋವಿನಲ್ಲೂ ಕುಟುಂಬಸ್ಥರು ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ತಿಳಿಸಿದ್ದಾರೆ.
Next Story





