ಸೊರಬ: ಹೆಜ್ಜೇನು ಕಡಿದು ದಂಪತಿ ಸ್ಥಿತಿ ಗಂಭೀರ
ಮುಷ್ಕರದ ನಡುವೆಯೂ ವೈದ್ಯರಿಂದ ಚಿಕಿತ್ಸೆ

ಮುಷ್ಕರದ ನಡುವೆಯೂ ವೈದ್ಯರಿಂದ ಚಿಕಿತ್ಸೆ
ಸೊರಬ, ಮಾ.1: ತಾಲೂಕಿನ ಆನವಟ್ಟಿ ಸಮೀಪದ ಹಿರೇ ಇಡಗೂಡು ಗ್ರಾಮದ ಕೃಷ್ಣಪ್ಪ (62) ಹಾಗೂ ರೇಣುಕಮ್ಮ(57) ದಂಪತಿಗೆ ಬುಧವಾರ ಹೆಜ್ಜೇನು ಕಡಿದಿದ್ದು, ಅವರ ಸ್ಥಿತಿ ಗಂಭೀರವಾಗಿದೆ.
ಕೃಷ್ಣಪ್ಪ ಹಾಗೂ ರೇಣುಕಮ್ಮ ದಂಪತಿ ಮನೆಯ ಹಿಂಭಾಗದಲ್ಲಿ ಬೇಲಿ ಸವರುವ ವೇಳೆ ಜೇನು ಕಡಿದಿದ್ದು, ಶಿಕಾರಿಪುರ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ನೀಡಿ, ಐಸಿಯುನಲ್ಲಿ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಏಳನೇ ವೇತನ ಆಯೋಗ ಜಾರಿಗಾಗಿ,ಸರ್ಕಾರಿ ನೌಕರರ ಮುಷ್ಕರ ಇರುವುದರಿಂದ ಆನವಟ್ಟಿ ಆಸ್ಪತ್ರೆಯಲ್ಲಿ ಹೊರ ರೋಗಿ ವಿಭಾಗವನ್ನು ಬಂದ್ ಮಾಡಲಾಗಿತ್ತು. ಆದರೆ ವೈದ್ಯರು ದಂಪತಿಗೆ ತುರ್ತು ಚಿಕಿತ್ಸೆ ನೀಡಲು ಸ್ಪಂದಿಸಿದರು. ಆಸ್ಪತ್ರೆಯಲ್ಲಿ ಗರ್ಭಿಣಿಯನ್ನು ಚಿಕಿತ್ಸೆಗೆ ದಾಖಲು ಮಾಡಿಕೊಳ್ಳಲಾಗಿದೆ.
Next Story





