Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ನರಿಂಗಾನ : ಮೋರ್ಲದಲ್ಲಿ ಸರ್ಕಾರಿ ಕಂಬಳ...

ನರಿಂಗಾನ : ಮೋರ್ಲದಲ್ಲಿ ಸರ್ಕಾರಿ ಕಂಬಳ ಕರೆ ಉದ್ಘಾಟನೆ

1 March 2023 7:16 PM IST
share
ನರಿಂಗಾನ : ಮೋರ್ಲದಲ್ಲಿ ಸರ್ಕಾರಿ ಕಂಬಳ ಕರೆ ಉದ್ಘಾಟನೆ

ಕೊಣಾಜೆ: ಯಕ್ಷಗಾನ ಮತ್ತು ಕಂಬಳ ನಮ್ಮ ಕರಾವಳಿ ಸಂಸ್ಕೃತಿಯ ಪ್ರತೀಕ. ಇದನ್ನು ಉಳಿಸಿ ಬೆಳೆಸುವ ಜವಬ್ಧಾರಿ ನಮ್ಮದು. ಈ ಭಾಗದ ಜನರ ಬೇಡಿಕೆಯಂತೆ  ನರಿಂಗಾನದಲ್ಲಿ ಸರ್ಕಾರಿ ಕಂಬಳ ಕರೆ ನಿರ್ಮಾಣದ ಕನಸು ಎಲ್ಲರ ಸಹಕಾರದೊಂದಿಗೆ ಇದೀಗ ನನಸಾಗಿದೆ. ಮಾ.25,26ರಂದು ಪ್ರಥಮ ಕಂಬಳ ವಿಜ್ರಂಭಣೆಯಿಂದ ನಡೆಯಲಿದೆ ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.

ಅವರು ಉಳ್ಳಾಲ ತಾಲೂಕು ನರಿಂಗಾನ ಗ್ರಾಮದ‌ ಮೋರ್ಲ ಬೋಳದಲ್ಲಿ ಲವ ಕುಶ ಸರ್ಕಾರಿ ಕಂಬಳ ಕರೆಯ ಉದ್ಘಾಟನೆಯನ್ನು ಬುಧವಾರ ನೆರವೇರಿಸಿ ಮಾತನಾಡಿದರು.

ಉಳ್ಳಾಲ ತಾಲೂಕು ನಿರ್ಮಾಣ ಆದ ಬಳಿಕ ತಾಲೂಕಿಗೆ ಸಿಗುವ ಸೌಲಭ್ಯಗಳು ಹಂತಹಂತವಾಗಿ ಸಿಗಲಿದೆ. ಉಳ್ಳಾಲ ಅಭಿವೃದ್ಧಿಯೊಂದಿಗೆ ಶಾಂತಿ ಸೌಹಾರ್ದತೆಯ  ಕೇಂದ್ರವಾಗಿ ರೂಪುಗೊಳ್ಳಲಿದೆ.  ಕ್ರಿಕೆಟ್, ಪುಟ್ಬಾಲ್ ಗೆ  ಪ್ರೇಕ್ಷಕರು ಇದ್ದ ಹಾಗೆ ಕಂಬಳ ಕ್ರೀಡೆಗೂ  ಅದರದ್ದೇ ಆದ ಪ್ರೇಕ್ಷಕ ವರ್ಗ ಇದೆ.  ತುಳುನಾಡಿನ ಹಿರಿಯರ ಪರಂಪರೆಯಿಂದ ನಡೆದುಕೊಂಡು ಬಂದಿರುವ ಕಂಬಳ‌ ಕ್ರೀಡೆ ಸೂರ್ಯ ಚಂದ್ರ ಇರುವವರೆಗೆ ಇಲ್ಲಿ ಮುಂದುವರಿಯಲಿ.  ನರಿಂಗಾನದಲ್ಲಿ ಅನೇಕ  ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ.  ಇಲ್ಲಿ ತುಳು ಸಂಸ್ಕೃತಿ ಗ್ರಾಮ ನಿರ್ಮಾಣ ಯೋಜನೆಯೂ ನಮ್ಮ ಮುಂದಿನ ಕನಸಾಗಿದೆ ಎಂದರು.

ಕಾರ್ಯಕ್ರಮದಲ್ಲಿ  ಕಂಬಳ ಸಮಿತಿಯ ಗೌರವಾಧ್ಯಕ್ಷ ಮಿತ್ತಕೋಡಿ ವೆಂಕಪ್ಪ ಕಾಜವ ಅವರು ಮಾತನಾಡಿ, ನರಿಂಗಾನ‌ ಗ್ರಾಮದಲ್ಲಿ ಸರ್ಕಾರಿ ಕಂಬಳ ಕರೆ ನಿರ್ಮಾಣವಾಗಿರುವುದು  ಹೆಮ್ಮೆಯ ಸಂಗತಿಯಾಗಿದೆ. ಕರಾವಳಿಯ ಕಂಬಳಕ್ಕೆ ಜಾಗತಿಕ ಮನ್ನಣೆ ಸಿಗುವಂತಾಗಲಿ ಎಂದರು.

ಕಂಬಳ ಅಕಾಡೆಮಿ ಸಂಚಾಲಕರಾದ ಗುಣಪಾಲ ಕಡಂಬ, ಕಂಬಳ ಸಮಿತಿ ಕಾರ್ಯಾಧ್ಯಕ್ಷ ಪ್ರಶಾಂತ್ ಕಾಜವ, ನರಿಂಗಾನ ಪಂಚಾಯತಿ ಅಧ್ಯಕ್ಷೆ ಶೈಲಜಾ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಮಮತಾ ಗಟ್ಟಿ, ಬೋಳ ಚರ್ಚ್ ನ ಧರ್ಮಗುರು ಪೆಡ್ರಿಕ್ ಕೊರೆಯಾ, ಬಂಟ್ವಾಳ ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ  ಚಂದ್ರಹಾಸ್ ಕರ್ಕೇರ, ನವೀನ್ ಚಂದ್ರ ಆಳ್ವ ತಿರುವಾಲುಗುತ್ತು, ಕಂಬಳ ಸಮಿತಿಯ  ಪಿ.ಆರ್ ಶೆಟ್ಟಿ, ನಿವೃತ್ತ ದೈಹಿಕ ಶಿಕ್ಷಕರು ಮಹಾಬಲ ಆಳ್ವ, ಮನ್ಮಥ್ ಶೆಟ್ಟಿ, ತಲಪಾಡಿ ದೊಡ್ಡ ಮನೆ ರವೀಂದ್ರ ಶೆಟ್ಟಿ, ರಾಮಣ್ಣ ಶೆಟ್ಟಿ ಆಳ್ವರ ಬೆಟ್ಟು,  ಮಹಮ್ಮದ್ ಮೋನು, ಬಾಲಕೃಷ್ಣ ರೈ ಬಿಳಿಯೂರು, ಎನ್ ಎಸ್ ಕರೀಂ, ಶಾಹುಲ್ ಹಮೀದ್, ಗಣೇಶ್ ನಾಯಕ್,  ಪ್ರಸಾದ್ ರೈ ಕಲ್ಲಿಮಾರ್, ಭರತ್ ರಾಜ್ ಶೆಟ್ಟಿ ಪಜೀರುಗುತ್ತು, ದೇವಪ್ಪ ಮಾಸ್ಟರ್, ರತ್ನಾಕರ ಶೆಟ್ಟಿ ಮೋರ್ಲ, ಪ್ರಭಾಕರ ರೈ ನೆತ್ತಿಲಕೋಡಿ, ಲಕ್ಷ್ಮಣಬಮಾಸ್ಟರ್, ಅತ್ತಾವುಲ್ಲಾ ಪರ್ತಿಪ್ಪಾಡಿ, ನಾರಾಯಣ ಶೆಟ್ಟಿ, ಜಲೀಲ್ ಮೋಂಟುಗೋಳಿ, ಚಂದ್ರಹಾಸ ಶೆಟ್ಟಿ ಮೋರ್ಲ, ನಾಸೀರ್ ನಡುಪದವು, ಅಬ್ದುಲ್ ಜಲೀಲ್ ಮೋಂಟುಗೋಳಿ, ನಾಸೀರ್ ಟಿ.ಎಸ್. ಸಾಮಣಿಗೆ , ಸಿದ್ದೀಕ್ ಪಾರೆ, ಸೀತಾರಾಮ ಶೆಟ್ಟಿ ಪಜೀರು, ಜಗದೀಶ್ ಆಳ್ವ ಕುವೆತ್ತಬೈಲ್ ಮೊದಲಾದವರು ಉಪಸ್ಥಿತರಿದ್ದರು.

ನವಾಝ್ ನರಿಂಗಾನ ಸ್ವಾಗತಿಸಿದರು. ಅಬ್ದುಲ್ ಜಲೀಲ್ ಮೋಂಟುಗೋಳಿ ವಂದಿಸಿದರು. ಪತ್ರಕರ್ತ ಸತೀಶ್ ಪುಂಡಿಕಾಯಿ ನಿರೂಪಿಸಿದರು.

ಕಂಬಳ ಓಡಿಸುವವರಿಗೂ ಪಿಂಚಣಿ ಸಿಗಲಿ

"ಕಂಬಳ ಎಂದರೆ  ಜಾತಿ ಮತ, ಪಕ್ಷ ಬೇಧವಿಲ್ಲದೆ ನಡೆಯುವ ಒಂದು ಜಾನಪದ ಕ್ರೀಡೆ .  ಕಂಬಳ ಕರಾವಳಿಯ ಸಂಸ್ಕೃತಿಯ ಪ್ರತೀಕ.  ಕಂಬಳ ಓಡಿಸುವವರಿಗೆ ನಿವೃತ್ತರಾದ ಬಳಿಕ ಅವರಿಗಗೆ ಪಿಂಚಣಿ ವ್ಯವಸ್ಥೆ‌ ಸರ್ಕಾರದಿಂದ  ಆಗಬೇಕಿದೆ".

-ಪ್ರಶಾಂತ ಕಾಜವ
ಕಾರ್ಯಾಧ್ಯಕ್ಷರು, ನರಿಂಗಾನ ಕಂಬಳ ಸಮಿತಿ

"ಕಂಬಳವನ್ನು ಟಿವಿಯಲ್ಲಿ ಮಾತ್ರ ನೋಡಿದ್ದೆ. ಇಂದು ಯು.ಟಿ.ಖಾದರ್ ಅವರನ್ನು ಬೇಟಿಯಾಗಲು ನರಿಂಗಾನಕ್ಕೆ ಬಂದಾಗ ಕಂಬಳದ ಕೋಣ, ಜೋಡುಕರೆ ಸೇರಿದಂತೆ ಕರಾವಳಿಯ ಸಂಸ್ಕೃತಿಯನ್ನು ಹತ್ತಿರದಿಂದ ನೋಡಲು ಸಾಧ್ಯವಾಯಿತು".
-ನಾಸೀರ್ ಖಾನ್ ಶಿರಸಿ, ಸಿದ್ದಾಪುರ

share
Next Story
X