Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಸಿರಿಯಾಕ್ಕೆ ವಿಶ್ವ ಆಹಾರ ಸಂಸ್ಥೆ...

ಸಿರಿಯಾಕ್ಕೆ ವಿಶ್ವ ಆಹಾರ ಸಂಸ್ಥೆ ಮುಖ್ಯಸ್ಥರ ಭೇಟಿ: ಬಂಡುಗೋರರ ಹಿಡಿತದ ಪ್ರದೇಶಕ್ಕೆ ಪರಿಹಾರ ವಿತರಣೆ

1 March 2023 10:39 PM IST
share
ಸಿರಿಯಾಕ್ಕೆ ವಿಶ್ವ ಆಹಾರ ಸಂಸ್ಥೆ ಮುಖ್ಯಸ್ಥರ ಭೇಟಿ: ಬಂಡುಗೋರರ ಹಿಡಿತದ ಪ್ರದೇಶಕ್ಕೆ ಪರಿಹಾರ ವಿತರಣೆ

ದಮಾಸ್ಕಸ್, ಮಾ.1: ಕಳೆದ ತಿಂಗಳ ಭೀಕರ ಭೂಕಂಪದಿಂದ ಧ್ವಂಸಗೊಂಡಿರುವ, ಬಂಡುಗೋರರ ಹಿಡಿತದಲ್ಲಿರುವ ವಾಯವ್ಯ ಸಿರಿಯಾದ ಪ್ರದೇಶಗಳಿಗೆ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಅಧನಾಮ್ ಘೆಬ್ರಯೇಸಸ್ ಬುಧವಾರ ಭೇಟಿ ನೀಡಿದ್ದಾರೆ ಎಂದು ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.

ಫೆಬ್ರವರಿ 6ರಂದು ಸಂಭವಿಸಿದ ಭೀಕರ ಭೂಕಂಪದ ಒಂದು ವಾರದ ಬಳಿಕ ಘೆಬ್ರಯೇಸಸ್ ಸಿರಿಯಾ ಸರಕಾರದ ಪಡೆಗಳ ನಿಯಂತ್ರಣದಲ್ಲಿರುವ ಅಲೆಪ್ಪೋ ಮತ್ತು ದಮಾಸ್ಕಸ್ ನಗರಕ್ಕೆ ಭೇಟಿ ನೀಡಿದ್ದರು. ಇದೀಗ ಸಿರಿಯಾದಲ್ಲಿ ಬಂಡುಗೋರರ ಹಿಡಿತದಲ್ಲಿರುವ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದರೊಂದಿಗೆ ಬಂಡುಗೋರರ ನಿಯಂತ್ರಣದ ಪ್ರದೇಶಕ್ಕೆ ಭೇಟಿ ನೀಡಿರುವ ವಿಶ್ವಸಂಸ್ಥೆಯ ಪ್ರಥಮ ಉನ್ನತ ಅಧಿಕಾರಿಯಾಗಿದ್ದಾರೆ.

ನೆರೆಯ ಟರ್ಕಿಯಿಂದ ಬಾಬ್-ಅಲ್ಹವಾ ಗಟಿದಾಟುವಿನ ಮೂಲಕ ಸಿರಿಯಾವನ್ನು ಬುಧವಾರ ಪ್ರವೇಶಿಸಿದ ಘೆಬ್ರಯೇಸಸ್, ಹಲವು ಆಸ್ಪತ್ರೆಗಳು ಹಾಗೂ ನಿರಾಶ್ರಿತರಿಗೆ ಆಶ್ರಯ ಕಲ್ಪಿಸಿದ ಶಿಬಿರಕ್ಕೆ ಭೇಟಿ ನೀಡಿದ್ದಾರೆ. ಭೂಕಂಪದ ಬಳಿಕ ವಿಶ್ವಸಂಸ್ಥೆಯ ಅಧಿಕಾರಿಗಳು ಟರ್ಕಿಗೆ, ಸಿರಿಯಾದ ಇತರ ಪ್ರದೇಶಗಳನ್ನು ಸಂದರ್ಶಿಸಿ ನಾಶ-ನಷ್ಟದ ಪರಿಶೀಲನೆ ನಡೆಸಿದ್ದರೂ, ಸಿರಿಯಾದಲ್ಲಿ ಬಂಡುಗೋರರ ಹಿಡಿತದ ಪ್ರದೇಶದ ಬಗ್ಗೆ ಹೆಚ್ಚಿನ ಆಸಕ್ತಿ ತೋರದ  ಬಗ್ಗೆ ವ್ಯಾಪಕ ಟೀಕೆ ಮತ್ತು ಖಂಡನೆ ವ್ಯಕ್ತವಾಗಿತ್ತು.

ವಿಶ್ವಸಂಸ್ಥೆಯ ಮಾನವೀಯ ನೆರವಿನ ಕಾರ್ಯಾಚರಣೆಯಲ್ಲಿ  ಸರಕಾರದ ನಿಯಂತ್ರಣದಲ್ಲಿರುವ ಪ್ರದೇಶಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ತುರ್ತು ಕಾರ್ಯ ತಂಡದ ಸದಸ್ಯರು ಟೀಕಿಸಿದ್ದರು. ನೆರವು ಮತ್ತು ಪರಿಹಾರದ ಸಾಮಾಗ್ರಿಗಳನ್ನು ಹೊತ್ತುತಂದ 258 ವಿಮಾನಗಳಲ್ಲಿ 129 ವಿಮಾನಗಳು ಸರಕಾರ ನಿಯಂತ್ರಣದ ಪ್ರದೇಶದಲ್ಲಿ ಲ್ಯಾಂಡ್ ಆಗಿವೆ.

ವಾಯವ್ಯ ಸಿರಿಯಾದ ಜನರನ್ನು ತಲುಪಲು ನಾವು ಇದುವರೆಗೆ ವಿಫಲವಾಗಿದ್ದೇವೆ ಎಂದು  ವಿಶ್ವಸಂಸ್ಥೆ ರಕ್ಷಣೆ ಮತ್ತು ಪರಿಹಾರ ಏಜೆನ್ಸಿಯ ಮುಖ್ಯಸ್ಥೆ ಮಾರ್ಟಿನ್ ಗ್ರಿಫಿತ್ಸ್ ಫೆಬ್ರವರಿ 12ರಂದು ಹೇಳಿದ್ದರು. ಆ ಬಳಿಕ ಸಿರಿಯಾದ ಭೂಕಂಪ ಸಂತ್ರಸ್ತರಿಗೆ ನೆರವಾಗಲು 397 ದಶಲಕ್ಷ ಡಾಲರ್ ನಿಧಿ ಸಂಗ್ರಹಿಸುವ ಅಭಿಯಾನಕ್ಕೆ ವಿಶ್ವಸಂಸ್ಥೆ ಚಾಲನೆ ನೀಡಿತ್ತು.

ಭೂಕಂಪ ಸಂಭವಿಸಿದ ಬಳಿಕ ವಿಶ್ವಸಂಸ್ಥೆಯಿಂದ ನೆರವಿನ ಸರಕನ್ನು ಹೊತ್ತ 420 ಟ್ರಕ್ಗಳು ಸಿರಿಯಾದಲ್ಲಿ ಬಂಡುಗೋರರ ನಿಯಂತ್ರಣದಲ್ಲಿರುವ ಪ್ರದೇಶವನ್ನು ತಲುಪಿವೆ. ಭೂಕಂಪ ಸಂಭವಿಸಿದ 3 ದಿನಗಳ ಬಳಿಕ ವಿಶ್ವಸಂಸ್ಥೆಯಿಂದ ನೆರವಿನ ಸಾಮಾಗ್ರಿಗಳನ್ನು ಹೊತ್ತುತಂದ ಪ್ರಥಮ ಟ್ರಕ್ ಈ ಪ್ರದೇಶಕ್ಕೆ ನೆರವನ್ನು ರವಾನಿಸಿದೆ.  ಸಿರಿಯಾದ ಉತ್ತರ ಮತ್ತು ವಾಯವ್ಯದಲ್ಲಿ ಸರಕಾರದ ನಿಯಂತ್ರಣದಿಂದ ಹೊರಗಿರುವ ಪ್ರದೇಶದಲ್ಲಿ 4 ದಶಲಕ್ಷಕ್ಕೂ ಅಧಿಕ ಜನರು ವಾಸಿಸುತ್ತಿದ್ದು ಇವರಲ್ಲಿ 90%ದಷ್ಟು ಜನತೆ ದಾನಿಗಳ ನೆರವನ್ನು ಅವಲಂಬಿಸಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.

ವಾಯವ್ಯ ಸಿರಿಯಾದ ಬಂಡುಗೋರ ನಿಯಂತ್ರಣದ ಪ್ರದೇಶಕ್ಕೆ ನೆರವಿನ ಸಾಮಾಗ್ರಿಗಳನ್ನು ಟರ್ಕಿಯ ಮೂಲಕ  ತಲುಪಿಸಲು ವಿಶ್ವಸಂಸ್ಥೆಯು ಬಾಬ್ ಅಲ್ಹವಾ ಗಡಿದಾಟನ್ನು ಬಳಸುತ್ತದೆ. ಈ ಮಧ್ಯೆ, ಭೂಕಂಪದ ಸಂತ್ರಸ್ತರಿಗೆ ವಿಶ್ವಸಂಸ್ಥೆಯ ನೆರವನ್ನು ಪೂರೈಸಲು ತನ್ನ ಇತರ ಎರಡು ಗಟಿದಾಟು(ಬೋರ್ಡರ್ ಕ್ರಾಸಿಂಗ್) ಅನ್ನು ಬಳಸಲು 3 ತಿಂಗಳ ಅವಧಿಗೆ ಅವಕಾಶ ನೀಡುವುದಾಗಿ ಟರ್ಕಿಯ ಅಧ್ಯಕ್ಷರು ಘೋಷಿಸಿದ್ದಾರೆ.

share
Next Story
X