Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಯಾವ ತನಿಖೆಯೂ ಪರಿಣಾಮಕಾರಿ ಅಂತ್ಯ...

ಯಾವ ತನಿಖೆಯೂ ಪರಿಣಾಮಕಾರಿ ಅಂತ್ಯ ಕಾಣುತ್ತಲೇ ಇಲ್ಲ

ಕೆ.ಎಸ್. ನಾಗರಾಜ್, ಬೆಂಗಳೂರುಕೆ.ಎಸ್. ನಾಗರಾಜ್, ಬೆಂಗಳೂರು2 March 2023 12:12 AM IST
share
ಯಾವ ತನಿಖೆಯೂ ಪರಿಣಾಮಕಾರಿ ಅಂತ್ಯ ಕಾಣುತ್ತಲೇ ಇಲ್ಲ

ಕಳೆದ 4 ವರ್ಷಗಳ ಅವಧಿಯಲ್ಲಿ ಬಿಜೆಪಿಯ ಆಡಳಿತದ ಈ ಸರಕಾರದಲ್ಲಿ ಅನೇಕ ರೀತಿಯ ಆರೋಪಗಳು ಬಂದಿರುತ್ತದೆ. ಇವುಗಳ ಬಗ್ಗೆ ತನಿಖೆಯನ್ನು ಆರಂಭಿಸಿದ ಸಂದರ್ಭದಲ್ಲಿ ಇದ್ದಂತಹ ಉತ್ಸಾಹ ಮತ್ತು ವೇಗ ದಿನ ಕಳೆದಂತೆ ಎಲ್ಲವೂ ಮಾಯವಾಗಿ ಜನರ ಮನಸ್ಸಿನಿಂದ ಮರೆಯಾಗುತ್ತಿದ್ದಂತೆ ತನಿಖೆಯೂ ಹಳ್ಳಹಿಡಿದಿರುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಡ್ರಗ್ಸ್ ವಿಚಾರದಲ್ಲಿ ನಟಿಯರಿಬ್ಬರು ಸೆರೆಮನೆ ವಾಸವನ್ನೂ ಅನುಭವಿಸಿ ಜಾಮೀನಿನ ಮೇಲೆ ಬಿಡುಗಡೆಯಾದರು. ಈ ಪ್ರಕರಣದಲ್ಲಿ ತನಿಖೆಯ ಸಂದರ್ಭದಲ್ಲಿ ಬರುತ್ತಿದ್ದಂತಹ ಹೇಳಿಕೆಗಳು ಮತ್ತು ಬಹಿರಂಗವಾಗುತ್ತಿದ್ದಂತಹ ಸುದ್ದಿಗಳನ್ನು ಗಮನಿಸಿದಾಗ ಸರಕಾರ ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾವನ್ನು ಸಂಪೂರ್ಣವಾಗಿ ತೊಡೆದುಹಾಕುತ್ತದೋ ಏನೋ ಎನ್ನುವ ಭರವಸೆಯೂ ಮೂಡಿತ್ತು. ಆದರೆ, ದಿನ ಕಳೆದಂತೆ ಪ್ರಭಾವಿ ವ್ಯಕ್ತಿಗಳು ಮಧ್ಯ ಪ್ರವೇಶ ಮಾಡಿ ಅವರ ಕುಟುಂಬದ ಸದಸ್ಯರನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸರಕಾರದ ಮೇಲೆ ಒತ್ತಡ ತಂದ ಕಾರಣದಿಂದ ತನಿಖಾಧಿಕಾರಿಗಳು ನಿಷ್ಪಕ್ಷ ತನಿಖೆಯನ್ನು ಮಾಡಲಾಗದೆ ಈ ಪ್ರಕರಣ ಪರಿಣಾಮಕಾರಿಯಾದಂತಹ ಅಂತ್ಯ ಕಾಣಲೇ ಇಲ್ಲ.

ಅನೇಕ ಜನ ರಾಜಕಾರಣದ ಕುಟುಂಬದ ಸದಸ್ಯರು, ಶ್ರೀಮಂತರ ಮನೆಯ ಮಕ್ಕಳು, ಸಾರ್ವಜನಿಕ ಕ್ಷೇತ್ರದಲ್ಲಿರುವ ಹಲವಾರು ಮನೆಯ ಮಂದಿಯ ಹೆಸರುಗಳು ಸಣ್ಣದಾಗಿ ಕಾಣಲಾರಂಭಿಸುತ್ತಿದ್ದಂತೆ ತನಿಖೆಯ ವೇಗವೂ ಸಂಪೂರ್ಣವಾಗಿ ಕಡಿಮೆಯಾಯಿತು. ಇದ್ದಂತಹ ಉತ್ಸಾಹವೂ ಕಡಿಮೆಯಾಯಿತು. ಮತ್ತೆ ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ನಿಂತಿಲ್ಲವೆಂಬುದು ಅಲ್ಲಲ್ಲಿ ಕೇಳಿಬರುತ್ತಿರುವ ಮಾತಾಗಿದೆ. ಬಿಟ್ ಕಾಯಿನ್ ವಿಚಾರದಲ್ಲೂ ದೊಡ್ಡ ಸುದ್ದಿಯಾಯಿತು. ಈ ವಿಚಾರ ತನಿಖೆಯಾದರೆ ರಾಜಕೀಯ ರಂಗದಲ್ಲಿ ಅಲ್ಲೋಲಕಲ್ಲೋಲವಾಗುತ್ತದೆ ಎಂದು ಮಾಧ್ಯಮಗಳಲ್ಲಿ ಅಬ್ಬರಿಸಿದರು. ಆದರೆ, ಈ ವಿಚಾರದಲ್ಲಿ ತನಿಖೆ ಏನಾಯಿತೋ, ಯಾರಿಗೆ ಶಿಕ್ಷೆಯಾಯಿತೋ, ಒಂದೂ ಬಹಿರಂಗವಾಗಲಿಲ್ಲ. ಸದನದಲ್ಲಿ ಕೆಲವು ಬಾರಿ ಪ್ರಸ್ತಾಪವಾದರೂ ಇಲ್ಲಿ ಗಂಭೀರತೆ ಇರಲಿಲ್ಲ. ಪಿಎಸ್ಸೈ ಹಗರಣ ಇಡೀ ದೇಶದಾದ್ಯಂತ ಸುದ್ದಿ ಮಾಡಿದಂತಹ ದೊಡ್ಡ ಭ್ರಷ್ಟಾಚಾರವಾಗಿತ್ತು. ಸಾವಿರಾರು ಜನ ಯುವಕ ಮತ್ತು ಯುವತಿಯರ ಬದುಕಿನ ಪ್ರಶ್ನೆಯಾಗಿತ್ತು.

ಪರೀಕ್ಷೆಯನ್ನು ಬರೆದು ಉದ್ಯೋಗದ ಕನಸಿನೊಂದಿಗೆ ಕಾಯುತ್ತಿದ್ದ ಸಹಸ್ರಾರು ಮಂದಿಯ ಕನಸುಗಳು ಸತ್ತುಹೋದವು. ಹಗರಣದ ತನಿಖೆಯನ್ನು ಸಿಬಿಐ ಅಥವಾ ಹೈಕೋರ್ಟ್ ನ್ಯಾಯಾಧೀಶರ ಮೂಲಕ ಮಾಡಿಸದೆ ಸರಕಾರವೇ ಮಾಡುತ್ತಾ ಇಲಾಖೆಯಲ್ಲಿನ ಕೆಲವರನ್ನು ಬಂಧಿಸಿದ ಒಂದಷ್ಟು ದಿನ ಸುದ್ದಿ ಮಾಡಿದ್ದು ಬಿಟ್ಟರೆ ಮತ್ತಿನ್ನೇನೂ ಆಗಿಲ್ಲ. ಬಹುತೇಕ ಅಪರಾಧಿಗಳೆಂದು ಬಿಂಬಿತರಾದವರು ಜಾಮೀನು ಪಡೆದುಕೊಂಡಿದ್ದಾರೆ. ಉದ್ಯೋಗದ ಕನಸು ಹೊತ್ತ ಯುವ ಜನಾಂಗ ಮತ್ತೆ ಮತ್ತೆ ಅಲ್ಲಲ್ಲಿ ಹೋರಾಟಗಳನ್ನು ಮಾಡಿ ಯಾವುದೇ ಪ್ರತಿಫಲವಿಲ್ಲದೆ ತಮ್ಮ ಧ್ವನಿಯನ್ನು ಕಳೆದುಕೊಂಡಿದ್ದಾರೆ. ಉದ್ಯೋಗಕ್ಕಾಗಿ ಲಕ್ಷಾಂತರ ರೂ.ಗಳನ್ನು ಕೊಟ್ಟವರು ಹಣವನ್ನೂ ಕಳೆದುಕೊಂಡರು, ಉದ್ಯೋಗವನ್ನೂ ಪಡೆದುಕೊಳ್ಳಲಿಲ್ಲ. ಬೆಂಗಳೂರು ನಗರದಲ್ಲಿ ಹತ್ತಾರು ಸಾವಿರ ಜನರ ಸರಿಸುಮಾರು ಎರಡೂವರೆ ಸಾವಿರ ಕೋಟಿ ರೂ.ಗಳ ಠೇವಣಿ ಮೊತ್ತದ ಎರಡು ಪ್ರಮುಖ ಬ್ಯಾಂಕುಗಳಾದ ಶ್ರೀ ಗುರುರಾಘವೇಂದ್ರ ಮತ್ತು ವಸಿಷ್ಠ ಕೋ-ಆಪರೇಟಿವ್ ಸೊಸೈಟಿಯ ಹಗರಣದ ವಿಚಾರದಲ್ಲೂ ಇದರ ತನಿಖೆಯನ್ನು ಸಿಬಿಐಗೆ ಕೊಡದೆ ಕೇವಲ ಇಲಾಖೆಯ ಅಧಿಕಾರಿ ಮಟ್ಟದಲ್ಲಿಯೇ ಮಾಡಲಾಗಿದೆ. ಹೀಗಾಗಿ ಈ ಹಗರಣವು ಸಹಸ್ರಾರು ಜನರ ಕಣ್ಣೀರು ಒರೆಸುವವರಿಲ್ಲದೆ ಹಾಗೇ ಉಳಿದುಕೊಂಡಿದೆ.

ಠೇವಣಿ ಇಟ್ಟು ನೊಂದಂತಹ ಹಲವಾರು ಜೀವಗಳು ಸ್ಮಶಾನದಲ್ಲಿ ಸುಟ್ಟುಬೂದಿಯಾಗಿವೆೆ. ನೂರಾರು ಮಂದಿ ಆಸ್ಪತ್ರೆಗಳಲ್ಲಿ ಹಾಸಿಗೆ ಮೇಲೆ ನರಳುತ್ತಿದ್ದಾರೆ. ಸಹಸ್ರಾರು ಮಂದಿ ಔಷಧಿಗೆ ಕಾಸಿಲ್ಲದೆ, ತಮ್ಮ ಮನೆಯವರ ಆರೈಕೆಯೂ ಇಲ್ಲದೆ ಪ್ರತಿದಿನವೂ ಬ್ಯಾಂಕಿನ ಮುಂದೆ ಬಂದು ನಿಂತು ಕಣ್ಣೀರಿಡುತ್ತಾ ತಮ್ಮ ಹಣಕ್ಕಾಗಿ ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಇಷ್ಟು ದೊಡ್ಡ ಮಟ್ಟದ ಹಗರಣ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಗಂಭೀರವಾಗಿ ಚರ್ಚೆ ಆಗಲೇ ಇಲ್ಲ. ಕೇವಲ ಚುಕ್ಕೆ ಪ್ರಶ್ನೆಗೆ ಮಾತ್ರವೇ ಸೀಮಿತವಾಯಿತು. ಸರಕಾರಕ್ಕೆ ಈ ಪ್ರಕರಣವನ್ನು ಸಿಬಿಐಗೆ ವಹಿಸಲು ಅದ್ಯಾವ ಕಾಣದ ಶಕ್ತಿಗಳು ಕೈಕಟ್ಟಿ ಹಾಕಿದೆಯೋ ಅರ್ಥವಾಗುತ್ತಿಲ್ಲ. ಸರಕಾರಕ್ಕೆ ಇಂತಹ ದೊಡ್ಡ ಮೋಸದ ವಿಚಾರದಲ್ಲಿ ಯಾವುದೇ ರೀತಿಯ ಆಸಕ್ತಿಯೇ ಇದ್ದಂತಿಲ್ಲ. ಈ ಹಿಂದೆ ಬೇರೆ ಜಾತಿಯ, ಬೇರೆ ಧರ್ಮದ ಬ್ಯಾಂಕುಗಳಲ್ಲಿ ಇಂತಹದೇ ಭ್ರಷ್ಟಾಚಾರಗಳು, ಹಗರಣಗಳು ಆದಾಗ ಕೂಡಲೇ ಸಿಬಿಐಗೆ ಒಪ್ಪಿಸಿದ್ದೆಷ್ಟೋ, ಅಪರಾಧಿಗಳ ವಿಚಾರದಲ್ಲಿ ಪ್ರಚಾರ ಮಾಡಿದ್ದೆಷ್ಟೋ, ಮಾಧ್ಯಮದವರು ಅಬ್ಬರಿಸಿದ್ದು ಎಷ್ಟೋ, ಆದರೆ ಇಂತಹ ಅಬ್ಬರ, ಆಕ್ರೋಶ, ಸಿಟ್ಟು, ಕಾಳಜಿ ಈ ಶ್ರೀ ಗುರುರಾಘವೇಂದ್ರ ಮತ್ತು ವಸಿಷ್ಠ ಕೋ-ಆಪರೇಟಿವ್ ಸೊಸೈಟಿ ಇವುಗಳ ವಿಚಾರದಲ್ಲಿ ಕಾಣಲೇ ಇಲ್ಲ. ಒಟ್ಟಾರೆಯಾಗಿ ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಯಾವ ಪ್ರಕರಣವೂ ಪರಿಣಾಮಕಾರಿಯಾಗಿ ತನಿಖೆಯಾಗಲಿಲ್ಲ. ಎಲ್ಲ ಪ್ರಕರಣಗಳಲ್ಲೂ ಹಾರಿಕೆಯ, ಜಾರಿಕೆಯ ಉತ್ತರಗಳು, ರಾಜಕೀಯ ಪ್ರೇರಿತವಾದಂತಹ ಸಮರ್ಥನೆಗಳಿಗೆ ಮಾತ್ರವೇ ಸೀಮಿತವಾಗಿದೆ.

share
ಕೆ.ಎಸ್. ನಾಗರಾಜ್, ಬೆಂಗಳೂರು
ಕೆ.ಎಸ್. ನಾಗರಾಜ್, ಬೆಂಗಳೂರು
Next Story
X