ಮೂರನೇ ಟೆಸ್ಟ್: ಆಸ್ಟ್ರೇಲಿಯ 197 ರನ್ ಗೆ ಆಲೌಟ್
ಏಳು ವಿಕೆಟ್ ಹಂಚಿಕೊಂಡ ಜಡೇಜ-ಅಶ್ವಿನ್ ಜೋಡಿ

ಏಳು ವಿಕೆಟ್ ಹಂಚಿಕೊಂಡ ಜಡೇಜ-ಅಶ್ವಿನ್ ಜೋಡಿ
ಇಂದೋರ್: ಉಸ್ಮಾನ್ ಖ್ವಾಜಾ ಏಕಾಂಗಿ ಹೋರಾಟದ ಹೊರತಾಗಿಯೂ ಆಸ್ಟ್ರೇಲಿಯ ತಂಡ ಭಾರತ ವಿರುದ್ಧದ 3ನೇ ಟೆಸ್ಟ್ ನ ತನ್ನ ಮೊದಲ ಇನಿಂಗ್ಸ್ ನಲ್ಲಿ 197 ರನ್ ಗೆ ಆಲೌಟಾಗಿದೆ. 88 ರನ್ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಿದೆ.
ಭಾರತದ ಬೌಲಿಂಗ್ ನಲ್ಲಿ ಸ್ಪಿನ್ನರ್ ಗಳಾದ ರವೀಂದ್ರ ಜಡೇಜ(4-78) ಹಾಗೂ ಆರ್.ಅಶ್ವಿನ್(3-44) 7 ವಿಕೆಟ್ ಗಳನ್ನು ಹಂಚಿಕೊಂಡಿದ್ದಾರೆ.
ವೇಗದ ಬೌಲರ್ ಉಮೇಶ್ ಯಾದವ್ ಕೇವಲ 12 ರನ್ ನೀಡಿ 3 ವಿಕೆಟ್ ಗಳನ್ನು ಕಬಳಿಸಿದ್ದಾರೆ.
2ನೇ ದಿನದಾಟದಲ್ಲಿ ಗ್ರೀನ್(21) ಹಾಗೂ ಹ್ಯಾಂಡ್ಸ್ ಕಾಂಬ್ (19 ರನ್)ಒಂದಷ್ಟು ಹೋರಾಟ ನೀಡಿದರು.
Next Story