ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ 'ಕೇಳುವ ಕಲೆ' ಕುರಿತು ರಾಹುಲ್ ಗಾಂಧಿ ಉಪನ್ಯಾಸ
![ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಕೇಳುವ ಕಲೆ ಕುರಿತು ರಾಹುಲ್ ಗಾಂಧಿ ಉಪನ್ಯಾಸ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಕೇಳುವ ಕಲೆ ಕುರಿತು ರಾಹುಲ್ ಗಾಂಧಿ ಉಪನ್ಯಾಸ](https://www.varthabharati.in/sites/default/files/images/articles/2023/03/2/369044-1677746919.jpg)
ಲಂಡನ್: ಪ್ರತಿಷ್ಠಿತ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ 'ಆಲಿಸುವ ಕಲೆ' ಕುರಿತು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ಉಪನ್ಯಾಸವನ್ನು ನೀಡಿದ್ದಾರೆ. ಜಾಗತಿಕವಾಗಿ ಪ್ರಜಾಸತ್ತಾತ್ಮಕ ವಾತಾವರಣವನ್ನು ಉತ್ತೇಜಿಸಲು ಹೊಸ ಚಿಂತನೆಗೆ ಕರೆ ನೀಡಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಉತ್ಪಾದನೆಯು ಚೀನಾಕ್ಕೆ ಸ್ಥಳಾಂತರಗೊಂಡಿದ್ದರಿಂದ ಭಾರತ ಹಾಗೂ ಅಮೆರಿಕದಂತಹ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಉತ್ಪಾದನೆಯಲ್ಲಿನ ಕುಸಿತವನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, "ಈ ಬದಲಾವಣೆಯು ಸಾಮೂಹಿಕ ಅಸಮಾನತೆ ಹಾಗೂ ಆಕ್ರೋಶವನ್ನು ಉಂಟು ಮಾಡಿದೆ. ಇದರತ್ತ ತುರ್ತು ಗಮನ ನೀಡುವ ಹಾಗೂ ಸಂವಾದ ನಡೆಸುವ ಅಗತ್ಯವಿದೆ'' ಎಂದು ಹೇಳಿದರು.
ಕೇಂಬ್ರಿಡ್ಜ್ ಜಡ್ಜ್ ಬ್ಯುಸಿನೆಸ್ ಸ್ಕೂಲ್ನ (ಕೇಂಬ್ರಿಡ್ಜ್ ಜೆಬಿಎಸ್) ವಿಸಿಟಿಂಗ್ ಫೆಲೋ ಆಗಿರುವ ಕಾಂಗ್ರೆಸ್ ಸಂಸದ ರಾಹುಲ್ ಮಂಗಳವಾರ ಸಂಜೆ ವಿಶ್ವವಿದ್ಯಾನಿಲಯದಲ್ಲಿ 'Learning to Listen in the 21st Century' ' ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.
Next Story